ದೀನ ದಲಿತರ ಕಣ್ಮಣಿ ಶಿಕ್ಷಣಪ್ರೇಮಿ ದಿ. ದಾಮೋದರ ಸುವರ್ಣ ಅವರ ಜನ್ಮಶತಾಬ್ದಿ ಕಾರ್ಯಕ್ರಮವು ಕುದ್ರೋಳಿಯ ಗೋಕರ್ಣನಾಥ ಸಭಾಂಗಣದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
ಈ ಶುಭವಸರದಲ್ಲಿ “ಬಸವಣ್ಣ ಮತ್ತು ನಾರಾಯಣ ಗುರು ಸಾಮಾಜಿಕ ದರ್ಶನ ಒಂದು ತೌಲನಿಕ ಅಧ್ಯಯನ” ಎಂಬ ಸಂಶೋಧನಾ ಪ್ರಬಂಧದಿಂದ ಗೌರವ ಡಾಕ್ಟರೇಟ್ ಪಡೆದ ಮೋಹನ್ ಬಿ ಅವರನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು ದಿ. ದಾಮೋದರ್ ಸುವರ್ಣ ಅವರ ಸುಪುತ್ರರಾದ ನವೀನ್ ಚಂದ್ರ ಸುವರ್ಣ ಮತ್ತು ಉದಯ ಚಂದ್ರ ಸುವರ್ಣ ಸಹಿತ ಇತರ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸಿದರು.
ಮೋಹನ್ ಬಿ ಅವರು ಮುಂಬೈಯಲ್ಲಿದ್ದು ಬಿಲ್ಲವ ಭವನದ ಪ್ರಬಂಧಕರಾಗಿ ಹತ್ತು ವರ್ಷ ಸೇವೆ ಸಲ್ಲಿಸಿದ್ದರು. ತವರಿಗೆ ಮರಳಿದ ಅವರು ಪ್ರಬಂಧ ಮಂಡಿಸುವಲ್ಲಿ ಕ್ರಿಯಾಶೀಲರಾದರು. ಮಂಗಳೂರು ಗಾಂಧಿನಗರದ ಶ್ರೀ ಗೋಕರ್ಣನೇಶ್ವರ ಕಾಲೇಜ್ ಮತ್ತು ರಥಬೀದಿಯ ಡಾ. ದಯಾನಂದ್ ಪೈ ಡಾ. ಸತೀಶ್ ಪೈ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು ಪ್ರಸಕ್ತ ಕುಂದಾಪುರದ ಬಂಡರ್ಕಾಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.