April 2, 2025
ಪ್ರಕಟಣೆ

ಉದ್ಯಾವರ ಶ್ರೀ ಭಗವತಿ ಕ್ಷೇತ್ರ ಮಂಜೇಶ್ವರ : ಡಿ. 14ರಿಂದ 17ರ ತನಕ ನಡಾವಳಿ ಮಹೋತ್ಸವ ಹಾಗೂ ಭೇಟಿ ಉತ್ಸವ

.

ಉದ್ಯಾವರ ಶ್ರೀ ಭಗವತಿ ಕ್ಷೇತ್ರ ಹತ್ತನೇ ಮೈಲುಕಲ್ಲು, ಉದ್ಯಾವರ, ಮಂಜೇಶ್ವರ,ಇದರ ನಡಾವಳಿ ಮಹೋತ್ಸವ ಹಾಗೂ ಭೇಟಿ ಉತ್ಸವವು ಡಿಸೆಂಬರ್ 14 ರಿಂದ 17 ರ ತನಕ ನಡೆಯಲಿದೆ. ಕಾರ್ಯಕ್ರಮಗಳು : ದಿನಾಂಕ 14.12. 24ನೇ ಶನಿವಾರ ಸಂಜೆ 7 ಗಂಟೆಗೆ ಆನೆ ಚಪ್ಪರದಲ್ಲಿ ದೀಪ ಪ್ರತಿಷ್ಠೆ. ದಿನಾಂಕ 15. 12. 24ನೇ ಆದಿತ್ಯವಾರ ಸಂಜೆ ಗಂಟೆ 3ಕ್ಕೆ 11 ಸ್ಥಾನಗಳ ಅಚ್ಚಮ್ಮಾರರ ಸಮಾವೇಶ ಸಂಜೆ ಗಂಟೆ 5ಕ್ಕೆ ಭಂಡಾರ ಎರುವುದು, ಸಂಜೆ ಗಂಟೆ 6ಕ್ಕೆ ಶ್ರೀ ಭಗವತಿ ದರ್ಶನ, ಬಳಿಕ ಅನ್ನಸಂತರ್ಪಣೆ. ರಾತ್ರಿ 8 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿಗೆ ಭಂಡಾರ ಹೋರಾಡುವುದು, ಶ್ರೀ ಭಗವತಿ ಅಮ್ಮನವರಿಂದ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ. ದಿನಾಂಕ 16.12. 24ನೇ ಸೋಮವಾರ ಬೆಳಿಗ್ಗೆ ಗಂಟೆ 6ಕ್ಕೆ ಹೂವಿನ ಪೂಜೆ, 7:00 ಘಂಟೆಗೆ ಭಗವತಿ ದರ್ಶನ, ಬಿಂಬಬಲಿ ಉತ್ಸವ, 9:30ಕ್ಕೆ ಗೆಂಡಸೇವೆ, ಘಂಟೆ 10.30ಕ್ಕೆ ಪ್ರಸಾದ ವಿತರಣೆ, ಘಂಟೆ 11ಕ್ಕೆ ಮಹಾ ಅನ್ನಸಂಪರ್ಪಣೆ, ಮಧ್ಯಾಹ್ನ ಗಂಟೆ ಒಂದಕ್ಕೆ ಭಂಡಾರ ಇಳಿಯುವುದು. ದಿನಾಂಕ 17.12.2024ನೇ ಮಂಗಳವಾರ ಬೆಳಿಗ್ಗೆ ಗಂಟೆ 9ಕ್ಕೆ ಕರಿಪೊಡಿ, ನಾಗತಂಬಿಲ, ಭಗವತಿ ದರ್ಶನ, ಪ್ರಸಾದ ವಿತರಣೆ. ನಡಾವಳಿ ಮಹೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಸ್ವೀಕರಿಸುವ ಸೇವೆಗಳ ವಿವರ : ಮಹಾ ಅನ್ನಸಂತರ್ಪಣೆ : ರೂಪಾಯಿ 25,000 / ಹೂವಿನ ಅಲಂಕಾರ : ರೂಪಾಯಿ 15,000 /ಅನ್ನದಾನಕ್ಕೆ ಅಕ್ಕಿ ಕ್ವಿಂಟಾಲ್ : ರೂಪಾಯಿ 5,000 / ಅನ್ನದಾನಕ್ಕೆ ಅಕ್ಕಿಮುಡಿ : ರೂಪಾಯಿ 2,000/ ಹೂವಿನ ಪೂಜೆ : ರೂಪಾಯಿ 100/ ನಡಾವಳಿ ಮಹೋತ್ಸವ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪೂರ್ವ ಶಿಷ್ಠ ಸಂಪ್ರದಾಯದಂತೆ ಜರಗಲಿರುವುದು, ಭಗವದ್ಭಕ್ತರದ ತಾವೆಲ್ಲರೂ ಸಕುಟುಂಬಿಕರಾಗಿ ಆಗಮಿಸಿ ತನು- ಮನ-ಧನಗಳಿಂದ ಸಹಕರಿಸಿ, ಶ್ರೀ ಭಗವತಿ ಮಾತೆಯ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಮಾತು ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಉದ್ಯಾವರ ಎರಡೂರ ಹತ್ತು ಸಮಸ್ತರು, ಉದ್ಯಾವರ ಮುಂಬೈ ಹದಿನಾರು ಸಮಸ್ತರು ಉದ್ಯಾವರ ಶ್ರೀ ಭಗವತಿ ಕ್ಷೇತ್ರ ಎಜುಕೇಶನಲ್ ಟ್ರಸ್ಟ್, ಉದ್ಯಾವರ ಶ್ರೀ ಭಗವತಿ ಕ್ಷೇತ್ರ ಆಡಳಿತ ಸಮಿತಿ ಉದ್ಯವರ ಭೋವಿ ಮಹಿಳಾ ಸಂಘ, ಆಡಳಿತ ಕಾರ್ನವರು ಹಾಗೂ ಅಚ್ಚಮ್ಮಾರರು ವಿನಂತಿಸಿದ್ದಾರೆ.

Related posts

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ :ನಾಳೆ (ನ. 30) ಶ್ರೀ ಶನಿಗ್ರಂಥ ಪಾರಾಯಣ

Mumbai News Desk

ಮಾ 16 ; ಗೋರೆಗಾಂವ್ ಇರಾನಿ ಕೊಲನಿ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಯ 69ನೇ ವಾರ್ಷಿಕ ಮಹೋತ್ಸವ,

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ – ಡಿ. 1ರಂದು ವಾರ್ಷಿಕ ಕ್ರೀಡಾಕೂಟ.

Mumbai News Desk

ನವೆಂಬರ್ 23ರಿಂದ ಸತತ 17ನೇ ವರ್ಷದ ಮುಂಬಯಿ ಪ್ರವಾಸದಲ್ಲಿ ಕರಾವಳಿಯ ಪ್ರಸಿದ್ಧ ನಾಟಕ ತಂಡಕಿನ್ನಿಗೋಳಿ

Mumbai News Desk

ಶ್ರೀ ಅಯ್ಯಪ್ಪ ಸೇವ ಸಮಿತಿ, ಕಿಸನ್ ನಗರ ಥಾಣೆ – ಡಿ.16, ಮತ್ತು 17ರಂದು 23ನೇ ವಾರ್ಷಿಕ ಮಹಾಪೂಜೆ.

Mumbai News Desk

ಬಿಲ್ಲವ ಸಮಾಜ ಸೇವಾ ಸಂಘ (ರಿ) ಕೊಡೇರಿ : ನ. 21 ರಂದು ಕೊಡೇರಿಯಲ್ಲಿ ಹಕ್ರೆಮಠ ಶ್ರೀ ಜೈನಜಟ್ಟಿಗೇಶ್ವರ ದೇವರ 78 ನೇ ವರ್ಷದ ಕಂಬಳೋತ್ಸವ

Mumbai News Desk