23.5 C
Karnataka
April 4, 2025
ಸುದ್ದಿ

ಬಾಲಿವುಡ್ ನಟ ಸೈಪ್ ಆಲಿ ಖಾನ್ ಗೆ ಚಾಕುವಿನಿಂದ ಹಲ್ಲೆ,: ಆಸ್ಪತ್ರೆಗೆ ದಾಖಲು

ಇಂದು (ಜನವರಿ 16) ನಸುಕಿನಲ್ಲಿ ಸೈಫ್ ಅಲಿ ಖಾನ್ ಅವರಿಗೆ ಚಾಕು ಇರಿತ ಆಗಿದೆ. ಮನೆಯಲ್ಲಿ ಅವರು ಮಲಗಿದ್ದ ವೇಳೆ ಕಳ್ಳರು ಬಂದಿದ್ದಾರೆ. ಕಳ್ಳತನ ತಡೆಯುವ ಪ್ರಯತ್ನ ಮಾಡಿದಾಗ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆದಿದೆ. ಸೈಫ್ ಅಲಿ ಖಾನ್ ಅವರ ಮೇಲೆ ಆರಕ್ಕೂ ಹೆಚ್ಚು ಕಡೆಗಳಲ್ಲಿ ಗಾಯಗಳಾಗಿವೆ. ಸದ್ಯ ಅವರ ಸ್ಥೀತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದೆ.

ನಸುಕಿನ ಸಮಯದಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಮನೆ ಒಳಗೆ ಕಳ್ಳ ಬಂದಿದ್ದಾನೆ. ಈತ ಬಂದಿದ್ದನ್ನು ತಿಳಿದ ಮನೆ ಕೆಲಸದವರು ಅವನನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಈ ಗಲಾಟೆಯಿಂದ ಸೈಫ್ ಅಲಿ ಖಾನ್​ಗೆ ಎಚ್ಚರ ಆಗಿದ್ದು, ಅವರು ಆಗಮಿಸಿದ್ದಾರೆ. ಆಗ ತಡೆಯಲು ಹೋದ ಸೈಫ್ ಮೇಲೆ ಕಳ್ಳ ಹಲ್ಲೆ ಮಾಡಿದ್ದಾನೆ. ಈ ವೇಳೆ ಸೈಫ್​ಗೆ ಆರು ಕಡೆಗಳಲ್ಲಿ ಗಾಯಗಳಾಗಿವೆ. ಬೆನ್ನಿನ ಭಾಗದಲ್ಲಿ ತೀವ್ರ ಗಾಯವಾಗಿದೆ.

ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್​ ಅಲಿಖಾನ್​ಗೆ ಸರ್ಜರಿ ಮಾಡಲಾಗಿದೆ. ಮುಂಜಾನೆ 5.30ಕ್ಕೆ ಸರ್ಜರಿ ಆರಂಭಿಸಲಾಗಿತ್ತು. ಹಲವು ಗಂಟೆಗಳ ಕಾಲ ಸರ್ಜರಿ ನಡೆಸಲಾಗಿದೆ. ಸರ್ಜರಿ ವೇಳೆ ಸೈಫ್​ ಅಲಿಖಾನ್​ ದೇಹದಲ್ಲಿ ಚಾಕುವಿನ ಚೂರು ಪತ್ತೆ ಆಗಿದೆ! ಹೌದು, ಕಳ್ಳ ಚಾಕು ಇರಿದಾಗ ಅದರ ತುಂಡು ಸೈಫ್ ದೇಹದಲ್ಲಿ ಉಳಿದುಕೊಂಡಿತ್ತು. ಅದನ್ನು ವೈದ್ಯರು ಹೊರತೆಗೆದಿದ್ದಾರೆ. ಸದ್ಯ ಸೈಫ್​​ಗೆ ಕಾಸ್ಮೆಟಿಕ್ ಸರ್ಜರಿ ನಡೆಸಲಾಗಿದೆ.

ಸೈಫ್ ಅಲಿ ಖಾನ್​ಗೆ ಚಾಕು ಇರಿತ ಪ್ರಕರಣದಲ್ಲಿ ಮನೆಯಲ್ಲಿ ಕೆಲಸದವರ ಮೇಲೆ ಅನುಮಾನ ಮೂಡಿದೆ. ಇವರ ಮನೆಗೆ ಎರಡು ಗೇಟ್​ಗಳಿವೆ. 4 ಜನ ಗಾರ್ಡ್​ಗಳು ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ ಕಳ್ಳ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ಮನೆಯಲ್ಲಿ ಇರುವ ಯಾರಾದರೂ ಸಹಾಯ ಮಾಡಿದರೇ ಎನ್ನುವ ಪ್ರಶ್ನೆಯೂ ಮೂಡಿದೆ. ಪ್ರಕರಣದ ತನಿಖೆಗೆ ಮುಂಬೈ ಪೊಲೀಸರು 7 ತಂಡ ರಚಿಸಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ದಾಳಿ ನಡೆಯುವ ವೇಳೆ ಕರೀನಾ ಕಪೂರ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಅವರು ಸೋನಂ ಕಪೂರ್ ಮೊದಲಾದವರ ಜೊತೆ ಪಾರ್ಟಿಗೆ ತೆರಳಿದ್ದರು. ಹೀಗಾಗಿ, ಅವರು ಹಲ್ಲೆಯಿಂದ ಬಚಾವ್ ಆಗಿದ್ದಾರೆ. ಇನ್ನು ಸೈಫ್ ಮಕ್ಕಳು ಸೇಫ್ ಆಗಿದ್ದಾರೆ. ಈಗಾಗಲೇ ಪ್ರಕರಣದಲ್ಲಿ ಓರ್ವನ ಬಂಧಿಸಲಾಗಿದೆ.

Related posts

ಕರ್ನಾಟಕದ ಜನರಿಗೆ ಹೊಸ ವರ್ಷಕ್ಕೆ ಶಾಕ್ ನೀಡಿದ ಸರ್ಕಾರ – ಬಸ್ ಪ್ರಯಾಣ ದರ ಶೇಕಡ 15ರಷ್ಟು ಏರಿಕೆ

Mumbai News Desk

ಯಕ್ಷಧ್ರುವ ಪಟ್ಲ ಫೌಂಡೇಶನ್ ದಶಮಾನೋತ್ಸವದ ಸಮಾಲೋಚನಾ ಸಭೆ

Mumbai News Desk

ಥಾಣೆ  :ಜಯರಾಮ ಸಾಂತ ನಿಧನ

Mumbai News Desk

ಮತ ಸೌಹರ್ದತೆಗೆ ಸಾಕ್ಷಿಯಾದ ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರ ಸಮಿತಿ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ(ರಿ.) – ವೈದ್ಯಕೀಯ ಚಿಕಿತ್ಸೆಗೆ ನೆರವು.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಧನ ಸಹಾಯ

Mumbai News Desk