ಮುಂಬಯಿ ಉಪನಗರ ಸಾಂತಾಕ್ರೂಜ್ ಪೂರ್ವ ವಕೋಲದ ಸಹಜೀವನ ಸಂಕಿರ್ಣದ ನಿವಾಸಿ ದೇವಪ್ಪ ಎನ್ ಪೂಜಾರಿ ( 88) ಅವರು ಜನವರಿ 18ರಂದು ಶನಿವಾರ ರಾತ್ರಿ ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮುಂಬೈಯ ಮಜ್ ಗಾಂವ್ ನಲ್ಲಿ ರಾಜ್ ಕಮಲ್ ಟೈಲರ್ಸ್ ಮೂಲಕ ಖ್ಯಾತರಾಗಿದ್ದ ದೇವಪ್ಪ ಪೂಜಾರಿ ಅವರು ಮೂಲತಃ ಉಡುಪಿ ಜಿಲ್ಲೆಯ ಉದ್ಯಾವರದ ಪರಾರಿತೋಟ ಬೊಲ್ಜೆಯವರು. ಮೃತರು ಪುತ್ರಿಯರಾದ ಸುನೀತಾ ವಿಠಲ್, ರೇಖಾ ಉದಯ್, ಜಯಶ್ರೀ ಸುದೇಶ್ ಪುತ್ರ ಸುರೇಶ್, ಸೊಸೆ ಶಶಿಕಲಾ, ಅಳಿಯಂದಿರು, ಸೊಸೆಯಂದಿರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ಸರಳ ಮತ್ತು ಕಠಿಣ ಪರಿಶ್ರಮದವರಾದ, ದೇವಪ್ಪ ಪೂಜಾರಿ ಅವರು ಮುಂಬಯಿಯ ಜನಪ್ರಿಯ ದೈನಿಕ ಕರ್ನಾಟಕ ಮಲ್ಲದ ಆರಂಭದ ದಿನಗಳಲ್ಲಿ ಪತ್ರಿಕೆಯ ಮಾಲಕರಿಗೆ ಮತ್ತು ಸಿಬ್ಬಂದಿಗಳಿಗೆ ಮಜ್ ಗಾಂವ್ ನ ತನ್ನ ನಿವಾಸವನ್ನು ವಾಸ್ತವ್ಯಕ್ಕೆ ನೀಡಿ ಉದಾರತೆಯನ್ನು ಮೆರೆದು, ಪತ್ರಿಕೆಯ ಬೆಳವಣಿಗೆಗೆ ಸಹಕಾರ ನೀಡಿದ್ದರು. ದೇವಪ್ಪ ಪೂಜಾರಿ ಅವರ ನಿಧನಕ್ಕೆ ಮುಂಬೈ ನ್ಯೂಸ್ ಪರಿವಾರ ಸಂತಾಪ ವ್ಯಕ್ತಪಡಿಸುತ್ತದೆ.
