
ಮುಂಬಯಿ:. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಹೆಬ್ರಿಯ ಕುಚ್ಚೂರು ಗ್ರಾಮದ ನಿವಾಸಿ ಶೇಖರ್ ಶೆಟ್ಟಿಯವರು ಲಿವರ್ ಕ್ಯಾನ್ಸರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಅವರ ಧರ್ಮಪತ್ನಿಯು ಸಹ ಮಲಗಿದ್ದಲ್ಲಿಯೇ ಇರುವುದರಿಂದ ಅವರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿರುವುದನ್ನು ಮನಗಂಡು ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರು ಮಾಡಿದ ಸಹಾಯಧನದ ಚೆಕ್ಕನ್ನು ಅಧ್ಯಕ್ಷರ ಸೂಚನೆಯಂತೆ ಶೇಖರ್ ಶೆಟ್ಟಿಯವರ ಪುತ್ರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯೆ ಕಾರ್ಕಳ ತಾಲೂಕು ಮಹಿಳಾ ಬಂಟರ ಸಂಘದ ಸವಿತಾ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಕಾರ್ಕಳದ ಬಜಗೋಳಿಯ ನಿವಾಸಿ ಕುಮಾರಿ ಹರ್ಷಿತಾ ಶೆಟ್ಟಿಯವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದು ತಾಯಿ ಬೀಡಿ ಕಾರ್ಮಿಕಳಾಗಿದ್ದು ಮನೆ ನಿರ್ವಹಣೆ ನಡೆಸಲು ತೀರಾ ಅಶಕ್ತರಾಗಿದ್ದು ಅವರ ವಿದ್ಯಾಭ್ಯಾಸಕ್ಕೆ ಮಂಜೂರು ಮಾಡಿದ ಧನಸಹಾಯದ ಚೆಕ್ಕನ್ನು ಅವರ ತಾಯಿ ಶ್ರೀಮತಿ ಉಷಾ ಶೆಟ್ಟಿಯವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು.
ಅಂತೆಯೇ ಮಂಗಳೂರಿನ ಮಚ್ಚೂರು ಗ್ರಾಮದ ನಿವಾಸಿ ಕುಮಾರಿ ಶ್ರಾವ್ಯ ಶೆಟ್ಟಿಯವರ ತಂದೆ ನಿರುದ್ಯೋಗಿಯಾಗಿದ್ದು ಅವರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ಮಂಜೂರು ಮಾಡಿದ ಧನಸಹಾಯದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿರಿದ್ದರು.