April 2, 2025
ಪ್ರಕಟಣೆ

ಶ್ರೀ ಬಾಲಾಜಿ ಸನ್ನಿಧಿ ಪಲಿಮಾರ್ ಮಠ ಜ. 26ರಂದು ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ

ಮೀರಾ ರೋಡ್, ಜ. 25:  ಬಾಲಾಜಿ ಸನ್ನಿಧಿ ಪಲಿಮಾರು ಮಠ ಮೀರಾ ರೋಡ್ ಜ.  26ರಂದು  ರವಿವಾರ ಬೆಳಿಗ್ಗೆ 7ರಿಂದ ಸಾಯಂಕಾಲ 8ರ ತನಕ ಶ್ರೀ ಸನ್ನಿಧಿಯಲ್ಲಿ ಮಹಾನಗರದ ವಿವಿಧ ಸಂಘಸಂಸ್ಥೆಗಳ ಸಹಕಾರ ದಲ್ಲಿ ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ  ಶ್ರೀ ಬಾಲಾಜಿ ಸನ್ನಿಧಿ ಪಲಿಮಾರು ಮಠ ಇಲ್ಲಿ ಆಯೋಜಿಸಲಾಗಿದೆ.

   ಈ ವಿಶೇಷ ಏಕಾಹ ಭಜನಾ ಕಾರ್ಯಕ್ರಮ ದಲ್ಲಿ ಮೀರಾ ಬಾಯಂಧರ್ ಪರಿಸರದ ವಿವಿಧ ಸಂಸ್ಥೆಯ ಭಜನಾ ಮಂಡಳಿಗಳು  ಪಾಲ್ಗೊಳ್ಳಲಿದ್ದು, ಬೆಳಿಗ್ಗೆ 7ಘಂಟೆಗೆ  ಶ್ರೀ ಬಾಲಾಜಿ ಭಜನಾ ಮಂಡಳಿರ ಸದಸ್ಯ ರಿಂದ ಭಜನೆ ಪ್ರಾರಂಭಗೊಳ್ಳಲಿದೆ.

    . ಆಬಳಿ ರಜಕ ಭಜನಾ ಮಂಡಳಿ ,ಬಂಟರ ಸಂಘ ಮೀರಾ ಭಯಂದರ್ ಸಮಿತಿ, ಆರಾಧನಾ ಭಜನಾ ಮಂಡಳಿ, ಬಿಲ್ಲವರ ಎಸೋಶಿಯೇಶನ್ ಮೀರಾರೋಡ್ ಸಮಿತಿ ಭಜನಾ ಮಂಡಳಿ, ಶ್ರೀ ಹನುಮಾನ್ ಭಜನಾ ಮಂಡಳಿ, ಶ್ರೀಕಟಿಲೇಶ್ವರಿ ಭಜನ ಮಂಡಳಿ ಮೊಗವೀರ ಭಜನಾ ಮಂಡಳಿ,  ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ,  ಶ್ರೀ ಶನೇಶ್ವರ ಭಜನಾ ಮಂಡಳಿ, ಕರ್ನಾಟಕ ಭಜನಾ ಮಂಡಳಿ,  ಬಂಟ್ಸ್ ಫೋರಂ ಭಜನಾ ಸಮಿತಿ,ಮೀರಾ ಬೈಂದರ್. ಕನ್ನಡ ಸಂಘ ,ಶ್ರೀ ವಿಠ್ಠಲ ಭಜನಾ ಮಂಡಳಿ ಹೀಗೆ ಸುಮಾರು 17 ಭಜನ ಮಂಡಳಿಯ ವರಿಂದ ಭಜನೆ ಜರಗಲಿದೆ, ಕೊನೆಯಲ್ಲಿ ರಾತ್ರಿ 8ಘಂಟೆಗೆ ಶ್ರೀ ಬಾಲಾಜಿ ಭಜನಾ ಮಂಡಳಿಯವರಿಂದ  ಸಮರೋಪ ಭಜನೆಯ ಬಳಿಕ  ಮಹಾ ಮಂಗಳಾರತಿ ಜರುಗವುದು.

       ಸರ್ವ ಭಜನಾ ಸಂದ್ಭಕ್ತರು  ದಿನ ಪೂರ್ತಿ ಜರಗುವ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಶ್ರೀ ಬಾಲಾಜಿ ಸನ್ನಿಧಿ ಪಲಿಮಾರು ಮಠದ ಆಡಳಿತ ಮಂಡಳಿ ವಿನಂತಿಸಿದೆ.

Related posts

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯಲ್ಲಿ 8 ರಿಂದ 10 ನೇ ತರಗತಿಗೆ ನೇರ ಪ್ರವೇಶ. : ತುಳು ಕನ್ನಡಿಗರಿಗೆ ಸದಾವಕಾಶ

Mumbai News Desk

ಸೆ. 15 ರಂದು ಕನ್ನಡಿಗರ ಸ್ನೇಹ ಬಳಗ ಟ್ರಸ್ಟ್ ಡೊಂಬಿವಲಿಯ ಉದ್ಘಾಟನಾ ಕಾರ್ಯಕ್ರಮ.

Mumbai News Desk

ಶ್ರೀ ಗುರು ನಾರಾಯಣ ಸೇವಾ ಸಮಿತಿ ವಸಯಿ,  ಮಾ. 9ರಂದು 29ನೇ ವಾರ್ಷಿಕ ಮೂರ್ತಿ ಪ್ರತಿಷ್ಠಾಪನ ದಿನಾಚರಣೆ

Mumbai News Desk

ಮಾರ್ಚ್ 9 ರಂದು ಕರ್ನಾಟಕ ಸಂಘ ಡೊಂಬಿವಲಿ : ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ ಹಾಗೂ ವೈದ್ಯಕೀಯ ವಿಚಾರ ಸಂಕಿರಣ. 

Mumbai News Desk

ತುಳು ಸಂಘ ಬೊರಿವಲಿ ಸೆ. 28 ರಂದು 14ನೇ ವಾರ್ಷಿಕ ಮಹಾಸಭೆ

Mumbai News Desk

ಶ್ರೀ ದುರ್ಗಾ ಭಜನಾ ಸೇವಾ ಮಂಡಳ, ಜ.21ಕ್ಕೆ 17ನೇ ವಾರ್ಷಿಕ ಮಹಾಪೂಜೆ.

Mumbai News Desk