April 2, 2025
ಪ್ರಕಟಣೆ

ದೇವಾಡಿಗ ಸಂಘ ಮುಂಬಯಿ: ಪೆ. 2 ರಂದು ಶ್ರೀರಾಮದೇವರ ಪೂಜೆಸ್ಥಾನದ ಪುನರ್ ಪ್ರತಿಷ್ಠೆ


ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ, ಶತಮಾನೋತ್ಸವದ ಸಂಭ್ರಮದಲ್ಲಿರುವ ದೇವಾಡಿಗ ಸಂಘದ ಸಂಚಾಲಕತ್ವದ ಶ್ರೀರಾಮ ಭಜನಾ ಮಂಡಳಿ ಆರಾಧಿಸಿಕೊಂಡು ಬರುತ್ತಿರುವ ಶ್ರೀರಾಮದೇವರ ಪೂಜಾ ಕೇಂದ್ರದ ಪುನರ್ ಪ್ರತಿಷ್ಠೆ ಫೆ. 2 ರಂದು ಆದಿತ್ಯವಾರ ಬೆಳಿಗ್ಗೆ 7 ಗಂಟೆಗೆ ನವಿ ನವಿ ಮುಂಬೈಯ ನೇರುಲ್ ನ ಸೆಕ್ಟರ್ 12ರಲ್ಲಿರುವ ದೇವಾಡಿಗ ಭವನ ಮಾರ್ಗ, ದೇವಾಡಿಗ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮ :
ಅಂದು ಬೆಳಿಗ್ಗೆ 7 ಗಂಟೆಯಿಂದ ವಾಸ್ತು ಹೋಮ, ಗಣ ಹೋಮ, ಪುನರ್ ಪ್ರತಿಷ್ಟಾಪನೆಯಾದ ಬಳಿಕ ತೀರ್ಥ ಪ್ರಸಾದ, ಭಜನಾ-ಸಂಕೀರ್ತನೆ, ಮಂಗಳದ ಬಳಿಕ ಅನ್ನ ಸಂತರ್ಪಣೆ.
ಶ್ರೀ ರಾಮ ಭಜನಾ ಮಂಡಳಿಯ ಪುನರ್ ಪ್ರತಿಷ್ಠೆಯ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀ ರಾಮ ದೇವರ ಕೃಪೆಗೆ ಪಾತ್ರರಾಗುವಂತೆ, ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್ ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ ದೇವಾಡಿಗ ಹಾಗೂ ಮಂಡಳಿಯ ಸಂಯೋಜಕರಾದ ನ್ಯಾಯವಾದಿ ಶ್ರೀ ಪ್ರಭಾಕರ್ ಎಸ್ ದೇವಾಡಿಗ ಇವರು ಪ್ರಕಟಣೆ ಮೂಲಕ ಕೇಳಿಕೊಂಡಿದ್ದಾರೆ

Related posts

ಮುಂಬೈ ರಾಜಾಪುರ ಸಾರಸ್ವತ ಸಂಘದ ಅಮೃತ ಮಹೋತ್ಸವದ ಶುಬಾರಂಭ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ ಜ 5:೮೪ ನೇ ವಾರ್ಷಿಕ ಮಿಲನ ‘ಸಾಫಲ್ಯ -೨೦೨೫’ 

Mumbai News Desk

ನಾಳೆ (ಆ. 25)ಚಿತ್ರಾಪು ಕೆ.ಎಮ್.ಕೋಟ್ಯಾನ್ ಅಭಿನಂದನಾ ಸಮಾರಂಭ.

Mumbai News Desk

ಮಾ 16 ; ಗೋರೆಗಾಂವ್ ಇರಾನಿ ಕೊಲನಿ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಯ 69ನೇ ವಾರ್ಷಿಕ ಮಹೋತ್ಸವ,

Mumbai News Desk

ಮಲಾಡ್ ಕುರಾರ್  ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ: ಡಿ.1ರಂದು ಅಖಂಡ ಹರಿನಾಮ ಸಂಕೀರ್ತನೆ

Mumbai News Desk