ಮುಂಬಯಿಯ ಉದ್ಯಮಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ, ಇದರ ಮಾಜಿ ಅಧ್ಯಕ್ಷರೂ ಆದ ಗೋಪಾಲ ಪುತ್ರನ್ ಅವರ ತಂದೆ ಸುರೇಶ್ ಮೊಗವೀರ (86) ಅವರು ಇಂದು ತನ್ನ ಸ್ವಗ್ರಹ ಕುಂದಾಪುರದ ಅರಾಟೆ ಬಸ್ತಿಹಿತ್ಲು ಮನೆಯಲ್ಲಿ ನಿಧನರಾದರು.
ಸರಳ, ಮೃದು ಸ್ವಭಾವದವರಾದ ಅವರು ಎಲ್ಲರೊಂದಿಗೆ ಆತ್ಮೀಯರಾಗಿದ್ದು, ಸಮಾಜ ಸೇವೆಯಲ್ಲಿ ನಿರತರಾಗಿದ್ದರು. ಅವರು ಗೋಪಾಲ ಪುತ್ರನ್ ಸಹಿತ 4 ಪುತ್ರರನ್ನು , 3 ಪುತ್ರಿಯರನ್ನು, ಹಾಗೂ ಅಪಾರ ಬಂಧು, ಬಳಗವನ್ನು ಅಗಲಿರುವರು.
ಸುರೇಶ್ ಮೊಗವೀರ ಅವರ ನಿಧನಕ್ಕೆ ಮೊಗವೀರ ಕುಲರತ್ನ, ನಾಡೋಜ ಡಾ. ಜಿ. ಶಂಕರ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಯ ಗೌರವ ಅಧ್ಯಕ್ಷ ಸುರೇಶ್ ಆರ್ ಕಾಂಚನ್, ಅಧ್ಯಕ್ಷ ರಾಜು ವಂಡ್ಸೆ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅರುಣ್ ಕುಮಾರ್, ಮತ್ತು ಪದಾಧಿಕಾರಿಗಳು, ಟ್ರಸ್ಟಿಗಳು, ಮೊಗವೀರ ಬ್ಯಾಂಕ್ ನ ಕಾರ್ಯಧ್ಯಕ್ಷರು, ನಿರ್ದೇಶಕರು ಸಂತಾಪ ವ್ಯಕ್ತ ಪಡಿಸಿದ್ದಾರೆ.

previous post