ಮಂಗಳೂರು ; ತುಳುನಾಡ ಕಣ್ಮಣಿ, ಕೊಡುಗೈ ದಾನಿ ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಬಳಗ ಹಾಗೂ ಹಿತೈಷಿಗಳಿಂದ ಫೆಬ್ರವರಿ 8ರಂದು ಶನಿವಾರ ಸಮಯ ಸಂಜೆ 4 ಗಂಟೆಗೆ ಮೀಂಜ ಬಂಟರ ಸಂಘ ಮೈದಾನ,ಚಿಗುರುಪಾದೆಯಲ್ಲಿ ಸದಾಶಿವ ಸಹಾಯ ಹಸ್ತ ವಿತರಣೆ ಮತ್ತು ಉಚಿತ ಅರೋಗ್ಯ ವಿಮೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸದಾಶಿವ ಶೆಟ್ಟಿ ಕನ್ಯಾನ ರವರಿಗೆ ಅಭಿನಂದನಾ ಸಮಾರಂಭದ ಕಾರ್ಯಕ್ರಮವು ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತುಳು ಜಾನಪದ ನಾಟಕದೊಂದಿಗೆ ಸಮಾರೋಪಗೊಳ್ಳಲಿದೆ ಈ ಕಾರ್ಯಕ್ರಮದಲ್ಲಿ ಸುಮಾರು 4000 ಕ್ಕಿಂತ ಮೇಲ್ಪಟ್ಟು ಜನ ಸಾಮಾನ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದು,ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾರಿಗೂ ಉಪಹಾರ ಮತ್ತು ಭೋಜನದ ವ್ಯವಸ್ಥೆ ಇದೆ. ಹಾಗೂ ಈ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ,ಉಚಿತ ಅರೋಗ್ಯ ಕುಟುಂಬ ವಿಮೆ (5 ಲಕ್ಷ) ಆಂಬುಲೆನ್ಸ್ ಹಸ್ತಾಂತರ, ಶಾಲಾ ವಾಹನ ಹಸ್ತಾಂತರ, ಶಾಲಾ ಅಭಿವೃದ್ಧಿಗೆ ಸಹಾಯ, ಅಂಗವಿಕಲರಿಗೆ ಕೃತಕ ಕಾಲು, ವೀಲ್‌ಜೇರ್,ಹೊಲಿಗೆ ಮಿಷನ್,ಕ್ಯಾನ್ಸರ್ ರೋಗಿಗಳಿಗೆ ಹಾಗೂ ಇತರ ರೋಗಿಗಳಿಗೆ ವಿಶೇಷ ಸಹಕಾರ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜರಾಜೇಶ್ವರಿ ದೇವಸ್ಥಾನ ಮುಂಡಪಲ್ಲ ಕುಂಬಳೆ ಇದರ ಆಡಳಿತ ಮೊತ್ತೇಸರರಾದ ಕೆ.ಕೆ ಶೆಟ್ಟಿ ಕುತ್ತಿಕ್ಕಾರ್ ವಹಿಸಲಿರುವರು. ಆಶೀರ್ವಚನವನ್ನು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಇವರು ನೀಡಲಿರುವರು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಗೌರನ್ವಿತ ವಿಧಾನ ಸಭಾ ಅಧ್ಯಕ್ಷರಾದ ಎ.ಎನ್ ಶಂಸೀರ್ ಮಾಡಲಿರುವರು. ಸಹಾಯ ಹಸ್ತ ಆರೋಗ್ಯ ವಿಮೆ ಉದ್ಘಾಟನೆಯನ್ನು ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಸ್ಥಾಪಕ ಅಧ್ಯಕ್ಷರು ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಕೆಮಿನೋಫಾರ್ಮ ಲಿಮಿಟೆಡ್ ಮುಂಬೈ ಮಾಡಲಿರುವರು ಎಂದು ತಿಳಿಸಿದ್ದಾರೆ.
ಗೌರವ ಉಪಸ್ಥಿತಿಯಲ್ಲಿ Dr M ಶಾಂತಾರಾಮ್ ಶೆಟ್ಟಿ (ಆಡಳಿತ ನಿರ್ದೇಶಕರು, ತೇಜಸ್ವಿನಿ ಆಸ್ಪತ್ರೆ, ಮಂಗಳೂರು, ಖ್ಯಾತ ಎಲುಬು ತಜ್ಞರು)ರೆವ, ಫಾದರ್ ಮೆಲ್ವಿನ್ ಜೋಸೆಫ್ ಪಿಂಟೋ. ಎಸ್‌ಜೆ.ಉಸ್ತಾದ್ ಅಝೀಝ್ ದಾರಿಮಿ, ಚೊಕ್ಕಬೆಟ್ಟು, ಕೃಷ್ಣಾಪುರ ಉಪಸ್ಥಿತಿಯಲ್ಲಿರುವರು ಅಭಿನಂದನಾ ಭಾಷಣ : ಶ್ರೀ ಡಾ. ಮೋಹನ್ ಆಳ್ವ (ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ) ನೀಡಲಿರುವರು.
ಮುಖ್ಯಅತಿಥಿಯಾಗಿ ಯು.ಟಿ ಖಾದರ್ (ಗೌರವಾನ್ವಿತ ವಿಧಾನ ಸಭಾ ಅಧ್ಯಕ್ಷರು, ಕರ್ನಾಟಕ ಸರಕಾರ),ಎ ಕೆ ಎಂ ಅಶ್ರಫ್ (ಶಾಸಕರು, ಮಂಜೇಶ್ವರ),ಕ್ಯಾಪ್ಟನ್ ಬ್ರಿಜೇಶ್ ಚೌಟ (ಸಂಸದರು, ದ.ಕ ಜಿಲ್ಲೆ),ಮಂಜುನಾಥ ಭಂಡಾರಿ (ಎಂ.ಎಲ್.ಸಿ. ಕರ್ನಾಟಕ ಸರಕಾರ),ಶ್ರೀಮತಿ ಡಿ.ಶಿಲ್ಪಾ (ಪೊಲೀಸ್ ಅಧೀಕ್ಷಕರು (SP) ಕಾಸರಗೋಡು),ರಘುರಾಮ್ ಶೆಟ್ಟಿ ಕುಳೂರು ಕನ್ಯಾನ (ವ್ಯವಸ್ಥಾಪಕ ನಿರ್ದೇಶಕರು, ಹೇರಂಭ ಇಂಡಸ್ಟ್ರೀಸ್ ಅಮಿಡೆಡ್, ಮುಂಬೈ) ಶ್ರೀಮತಿ ಸುಜಾತ ಸದಾಶಿವ ಶೆಟ್ಟಿ ಕುಳೂರು ಕನ್ಯಾನ (ಉದ್ಯಮಿ) ಭಾಗವಹಿಸಲಿರುವರು.
ಮುಖ್ಯ ಅಭಾಗ್ಯತರಾಗಿ ಸತೀಶ್ ಕುಂಪಲ (ಸಾಮಾಜಿಕ, ಧಾರ್ಮಿಕ,ರಾಜಕೀಯ ಮುಖಂಡರು),ಐಕಳ ಹರೀಶ್ ಶೆಟ್ಟಿ (ಅಧ್ಯಕ್ಷರು, ಜಾಗತಿಕ ಬಂಟರ ಸಂಘ),ಶಶಿಧರ ಶೆಟ್ಟಿ ಬರೋಡ (ಉದ್ಯಮಿ, ಬರೋಡ),ಸತೀಶ್ ಶೆಟ್ಟಿ ಪಟ್ಲ (ಅಧ್ಯಕ್ಷರು, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್),ಐ. ಸುಬ್ಬಯ್ಯ ರೈ (ಅಧ್ಯಕ್ಷರು, ಜಿಲ್ಲಾ ಬಂಟರ ಸಂಘ ಕಾಸರಗೋಡು),ಸಂಜೀವ ಶೆಟ್ಟಿ ತಿಂಬರ (ಉದ್ಯಮಿ, ಮುಂಬೈ), ಜಯದೇವ ಭಟ್ ಖಂಡಿಗೆ (ಪ್ರಧಾನ ಕಾರ್ಯದರ್ಶಿ ಬ್ರಹ್ಮಕಲಶೋತ್ಸವ ಸಮಿತಿ, ಶ್ರೀ ಕ್ಷೇತ್ರ ಮಧೂರು),ಕೆ.ಆರ್. ಜಯಾನಂದ (ಅಧ್ಯಕ್ಷರು, ಕೇರಳ ತುಳು ಅಕಾಡೆಮಿ), ಅಶ್ವಿನಿ, ಎಂ.ಎಲ್ (ಸದಸ್ಯರು, ಮಂಜೇಶ್ವರ ಬ್ಲೊಕ್ ಪಂಚಾಯತ್) ಭಾಗವಹಿಸಲಿರುವರು.
ತಾರಾ ಮೆರಗು : ಗುರುಕಿರಣ್ (ಸಂಗೀತ ನಿರ್ದೇಶಕರು) ರಕ್ಷಿತ್ ಶೆಟ್ಟಿ (ಚಲನಚಿತ್ರ ನಟ) ಭಾಗವಹಿಸಲಿರುವರು. ಉಪಸ್ಥಿತಿಯಾಗಿ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ (ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿ ಷತ್ತು, ಕೇರಳ ಗಡಿನಾಡ ಘಟಕ) ವಂ |ಸ್ವಾ | ಎಡ್ರಿನ್ ವಿನ್ಸೆಂಟ್ ಕೊರಿಯಾ (ಧರ್ಮ ಗುರುಗಳು, ಪಾತಿಮಾ ಚರ್ಚ್, ಮೀಯಪದವು ಸುಂದರಿ. ಆರ್ ಶೆಟ್ಟಿ (ಅಧ್ಯಕ್ಷರು, ಮೀಂಜ ಗ್ರಾಮ ಪಂಚಾಯತ್) ಪಿ.ಆರ್ ಶೆಟ್ಟಿ ಕುಳೂರು ಪೊಯ್ಯಲ್ (ಮಾಜಿ ಅಧ್ಯಕ್ಷರು, ಕಂಬಳ ಸಮಿತಿ, ದ.ಕ ಜಿಲ್ಲೆ) ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ (ಪ್ರಗತಿಪರ ಕೃಷಿಕರು) ಜಗದೀಶ್ ಶೆಟ್ಟಿ ಕುಳೂರು ಎಲಿಯಾಣ (ಅಧ್ಯಕ್ಷರು, ಮೀಂಜ ಬಂಟರ ಸಂಘ) ಮೋಹನ್ ಶೆಟ್ಟಿ ಕುಳೂರು ಮಜ್ಜಾರ್ (ಉದ್ಯಮಿ, ಮುಂಬೈ) ಇರುವರು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೇವಾ ಬಳಗದ ಉಪಾಧ್ಯಕ್ಷರಾದ ನಾರಾಯಣ ನಾಯ್ಕ್ ನಡುಹಿತ್ಲು,ಕಾರ್ಯದರ್ಶಿ ಜಯರಾಜ್ ಶೆಟ್ಡಿ ಚಾರ್ಲ,ಕೋಶಧಿಕಾರಿ ಕಾರ್ತಿಕ್ ಶೆಟ್ಟಿ ಮಜಿಬೈಲು,ಗಂಗಾಧರ ಶೆಟ್ಟಿ,ಜೀತೆಂದ್ರ ಶೆಟ್ಟಿ,ಹಾಗೂ ಪ್ರಮೋದ್ ಶೆಟ್ಟಿ ಯವರು ಉಪಸ್ಥಿತರಿದ್ದರು.