ಮಹಾ ನಗರದ ಪ್ರತಿಷ್ಠಿತ ಸಂಸ್ಥೆ, ಕುಲಾಲ ಸಂಘ ಮುಂಬಯಿ ಕಳೆದ 95 ವರ್ಷಗಳಿಂದ ಸಾಮಾಜಿಕ , ಶೈಕ್ಷಣಿಕ, ಧಾರ್ಮಿಕ,ಸಾಂಸ್ಕೃತಿಕ ಮುಂತಾದ ಸಮಾಜ ಪರ ಕೆಲಸ ಹಾಗೂ ವಿವಿಧ ಕಾರ್ಯಕ್ರಮವನ್ನು ಮಾಡುತ್ತಾ ಬರುತ್ತಿದೆ. ಸಾಮಾಜದ ಎಲ್ಲ ಬಾಂಧವರಿಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ಸಾಬೀತುಪಡಿಸಲು ಮುಂಬಯಿಯಲ್ಲಿ 5 ಸ್ಥಳೀಯ ಸಮಿತಿಯ ಸ್ಥಾಪನೆಯಾಯಿತು.ಇದರಲ್ಲಿ ನವಿ ಮುಂಬಯಿ ಸ್ಥಳೀಯ ಸಮಿತಿಯು ಒಂದು.
ಮಹಿಳಾ ವಿಭಾಗದ ಈ ವರ್ಷದ ಮೊದಲ ಕಾರ್ಯಕ್ರಮದ ಅಂಗವಾಗಿ
ಫೆಬ್ರವರಿ 15 ರಂದು ಭಜನೆ ಮತ್ತು ಹಳದಿ ಕುಂಕುಮ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ರಘು ಏ ಮೂಲ್ಯ ಪಾದೆ ಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಹಾಗೂ ಸ್ಥಳೀಯ ಸಮಿತಿಯ ಅಧ್ಯಕ್ಷರಾದ ಸದಾನಂದ್ ಕುಲಾಲ್ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ ಬಂಜನ್ ಇವರ ಉಪಸ್ಥಿತಿಯಲ್ಲಿ ನವಿ ಮುಂಬಯಿ ಕನ್ನಡ ಸಂಘದ ಹಾಲ್ ನಲ್ಲಿ ಮಧ್ಯಾಹ್ನ 3 ಗಂಟೆ ಯಿಂದ ನಡೆಯಲಿದೆ.
ಸಭಾ ಕಾರ್ಯಮದಲ್ಲಿ ಸಮಾಜ ಸೇವಕಿ ಶಾಲಿನಿ ಸತೀಶ್ ಶೆಟ್ಟಿ ಹಾಗೂ ದಾನಿ ನಮ್ರತಾ ಜಗದೀಶ್ ಬಂಜನ್ ಅಂಬರ್ ನಾಥ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಸಮಿತಿಯ ಸದಸ್ಯರಿಂದ ಹರಿ ಸಂಕೀರ್ತನೆ ಮತ್ತು ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಕುಲಾಲ ಸಂಘ ಮುಂಬಯಿ ಮತ್ತು ಸ್ಥಳೀಯ ಸಮಿತಿಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸುವಂತೆ ಕುಲಾಲ ಸಂಘದ ಮುಂಬಯಿ ಪರವಾಗಿ ಗೌರವ ಅಧ್ಯಕ್ಷರಾದ ಪಿ ದೇವದಾಸ್ ಕುಲಾಲ್, ಉಪಾಧ್ಯಕ್ಷ ಡಿ ಐ ಮೂಲ್ಯ, ಗೌ . ಪ್ರ.ಕಾರ್ಯದರ್ಶಿ ಕರುಣಾಕರ್
ಸಾಲಿಯಾನ್.ಕೋಶಾಧಿಕಾರಿ ಜಯ ಏಸ್ ಅಂಚನ್, ನವಿ ಮುಂಬಯಿ ಸ್ಥಳೀಯ ಸಮಿತಿಯ ಪರವಾಗಿ ಉಪಾಧ್ಯಕ್ಷ ಕ್ರಪೇಶ್ ಕುಲಾಲ್ ,ಕಾರ್ಯದರ್ಶಿ ಕೆoಜಾರು ಎಲ್ ಆರ್ ಮೂಲ್ಯ, ಜೊತೆ ಕಾರ್ಯದರ್ಶಿ ಆನಂದ್ ಆರ್ ಮೂಲ್ಯ,ಕೋಶಾಧಿಕಾರಿ ಸಿ ಎ ಅಕ್ಷತ್ ಮೂಲ್ಯ, ಜೊತೆ ಕೋಶಾಧಿಕಾರಿ ಜನಾರ್ಧನ್ ಕುಲಾಲ್ , ಕ್ರೀಡೆ ಮತ್ತು ಸಾಂಸ್ಕೃತಿಕ ಸಂಚಾಲಕರು ಪ್ರಸಾದ್ ಮೂಲ್ಯ ,ಡಾ ಹರೀಶ್ ಸಾಲಿಯಾನ್,ವಿಶ್ವನಾಥ್ ಬಂಗೇರ, ವಾಸು ಬಂಗೇರ, ಸುರಾಜ್ ಕುಲಾಲ್, ದಯಾನಂದ್ ಮೂಲ್ಯ, , ಸ್ಥಳೀಯ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಶೋಭಾ ಏನ್ ಬಂಗೇರ,ಕಾರ್ಯದರ್ಶಿ ಉಷಾ ಆರ್ ಮೂಲ್ಯ,ಕೋಶಾಧಿಕಾರಿ ಪ್ರೇಮ ಎಲ್ ಮೂಲ್ಯ ಜೊತೆ ಕೋಶಾಧಿಕಾರಿ ಸಂಚಲ ಆರ್ ಮೂಲ್ಯ,ಗುರುವಂದನಾ ಭಜನಾ ಮಂಡಲಿಯ ಸುನೀತಾ ಮೂಲ್ಯ , ಕ್ರೀಡೆ ಮತ್ತು ಸಾಂಸ್ಕೃತಿಕ ಸಂಚಾಲಕಿ ಶೆಫಾಲಿ ಎಚ್ ಸಾಲಿಯಾನ್ ಮತ್ತು ದೀಕ್ಷಾ ಡಿ ಮೂಲ್ಯ. ದೇವಕಿ ಸುನಿಲ್ ಸಾಲಿಯಾನ್ , ಮಮತಾ ಕುಲಾಲ್, ಮಾಲತಿ ಅಂಚನ್,ಶಶಿಕಲಾ ಮೂಲ್ಯ, ಸುಶೀಲಾ ಬಂಗೇರ, ಭವ್ಯ ಕುಲಾಲ್ ಮತ್ತು ಸರ್ವ ಸದಸ್ಯರು, ಸಲಹೆಗಾರರು, ಮಹಿಳಾ ವಿಭಾಗ ,ಯುವ ವಿಭಾಗ ಮತ್ತು ಗುರುವಂದನಾ ಭಜನಾ ಮಂಡಳಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.