31 C
Karnataka
April 3, 2025
ಮುಂಬಯಿ

ಮುಂಬಯಿ ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ ಸರಸ್ವತಿ ದೇವಿ ಪೂಜಾರಾಧನೆ



ಸಂತಾಕ್ರೂಜ್ : ಮುಂಬೈಯ ಪ್ರತಿಷ್ಟಿತ ಸಂಸ್ಥೆಯಾದ ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ ಸರಸ್ವತಿ ದೇವಿಯ ಪೂಜಾರಾಧನೆಯ ಕಾರ್ಯಕ್ರಮವು ದಿನಾಂಕ 14/02/2025 ರ ಶುಕ್ರವಾರ ಸಾಯಂಕಾಲ 7-00 ಗಂಟೆಗೆ ರಂದು ಶಾಲೆಯ ಸಭಾ ಭವನದಲ್ಲಿ ಅದ್ದೂರಿಯಾಗಿ ಜರುಗಿತು.ಶಾರದಾ ದೇವಿ ಪೂಜಾರಾಧನೆಯ ಕಾರ್ಯಕ್ರಮವು ಮಾತೃ ಸಂಸ್ಥೆಯ ಶಾಲಾ ಸಮಿತಿಯ ಸಲಹೆಗಾರ ಬನ್ನಂಜೆ ರವೀಂದ್ರ ಅಮೀನ ಅವರ ಮಾರ್ಗದರ್ಶನದಡಿ
ಯಲ್ಲಿ ಜರುಗಿತು.

ಸಂಗೀತ ಎಂಬ ದೇವತಾ ಆರಾಧನೆ ಕಲೆಯ ಮೊದಲ ಮೆಟ್ಟಲು ಭಜನೆ ಭಕ್ತಿ ತನ್ಮಯತೆಯಿಂದ ದಿನವೂ ದೇವರ ನಾಮ ಹಾಡುವುದರಿಂದ ನಮ್ಮ ಮನಸ್ಸು ಸಾತ್ವಿಕತೆಯ ಮಾರ್ಗದೆಡೆಗೆ ಸಾಗುತ್ತದೆ. ಜೀವನ ಉಲ್ಲಾಸದಿಂದ ತುಡಿಯುತ್ತದೆ. ಬಾಳು ಸಾರ್ಥಕತೆಯನ್ನು ಪಡೆಯುತ್ತದೆ. ಇಂತಹ ಭಕ್ತಿ ಮಾರ್ಗದೆಡೆಗೆ ಸಾಗಲು ಭಜನೆ ದೇವರ ಮಾಡಬೇಕು. ಮತ್ತು ಬ್ರಹ್ಮ ಶಕ್ತಿಯನ್ನು ಪಡೆದ ಜ್ಞಾನ ದೇವತೆಯಾದ ಸರಸ್ವತಿ ದೇವಿಗೆ ಪೂಜೆ ಸಲ್ಲಿಸಿದರೆ ಜ್ಞಾನ ಸಂಪನ್ನವಾಗುತ್ತದೆ ಎಂದು ಯಶಸ್ವಿ ಭಜನಾ ಮಂಡಳಿ ಡೊಂಬಿವಲಿಯ ಮುಖ್ಯ ರೂವಾರಿ ಯಕ್ಷಗಾನದ ಭಾಗವತರಾದ ಶ್ರೀ ನಾರಾಯಣ ಪೂಜಾರಿ ಅವರು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪೂಜಾರಾಧನೆಯನ್ನು ಭಜನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಭಕ್ತಿ ಸುಧೆಯನ್ನು ಉಣ ಪಡಿಸಿ ಜ್ಞಾನದ ಬೆಳಕನ್ನು ಹರಿಸಿದರು.ಯಶಸ್ವಿ ಭಜನಾ ಮಂಡಳಿ ಡೊಂಬಿವಲಿ ಇದರ ಮುಖ್ಯ ಪಾತ್ರದಾರಿ ಯಕ್ಷಗಾನದ ಭಾಗವತರಾಗಿರುವ ಶ್ರೀ ನಾರಾಯಣ ಪೂಜಾರಿ ಅವರಿಗೆ ಶಾಲಾ ಸಮಿತಿಯ ಸಲಹೆಗಾರ ಮಾರ್ಗದರ್ಶಕ ಶ್ರೀ ಬನ್ನಂಜೆ ರವೀಂದ್ರ ಅಮೀನ ಅವರು ಶಾಲು ಹೊದಿಸಿ ಪುಷ್ಪ ಗುಚ್ಚಮತ್ತು ನೆನಪಿನ ಕಾಣಿಕೆಯನ್ನು ಕೊಟ್ಟು ಗೌರವಿಸಿದರು. ಮತ್ತು ಇನ್ನೊರ್ವ್ ಸದಸ್ಯೆ ಶೀಲಾ ಸುವರ್ಣ ಅವರಿಗೆ ಶ್ರೀಮತಿ ನಮಿತಾ ಸುವರ್ಣರು ಶಾಲು ಹೊದಿಸಿ ಗುಚ್ಚ ನೀಡಿ ಸತ್ಕರಿಸಿದರು.ಬೋರ್ಡ ಪರೀಕ್ಷೆ ಬರೆಯುತ್ತಿರುವ ನಮ್ಮ ಶಾಲಾ ಹತ್ತನೇ ವಿದ್ಯಾರ್ಥಿಗಳಿಗೆ ಶುಭ ಕೋರಲಾಯಿತು.

ಶಾಲೆಯಲ್ಲಿ ನಡೆದ ಸರಸ್ವತಿ ದೇವಿ ಕಾರ್ಯಕ್ರಮದಲ್ಲಿ ಯಶಸ್ವಿ ಭಜನಾ ಮಂಡಳಿ ಡೊಂಬಿವಲಿ ಇವರು ಸುಂದರವಾಗಿ ಹಾಡುಗಾರಿಕೆಯಿಂದ ವಿದ್ಯಾರ್ಥಿಗಳನ್ನು ಮುಗ್ಧಗೊಳಿಸಿದರು.ಈ ಸುಂದರವಾದ ಭಕ್ತಿ ಕಾರ್ಯಕ್ರಮದಲ್ಲಿ ಎಸ್ ಎಮ್ ಡಿ ಸಿ ಅಧ್ಯಕ್ಷೆ ಶ್ರೀಮತಿ ತಾಹಿರ ಶೇಕ್,ವಕೋಲಾ ಶಾಲಾ ಶಿಕ್ಷಕ ಆನಂದ ಭಾವಿಕಟ್ಟಿ,ಹಳೆ ವಿದ್ಯಾರ್ಥಿಗಳಾದ ಸುಷ್ಮಾ ಪೂಜಾರಿ, ನಿಕಿತಾ ಪೂಜಾರಿ ರಶ್ಮಿ ಸ್ವಾಮಿ ಮೀನಾಕ್ಷಿ ಪೂಜಾರಿ ವಾಸು ಗೌಡ ಸುದರ್ಶನ ಗೌಡ ಅಶೋಕ ಗೌಡ ಉಪಸ್ಥಿತಿದ್ದು ಶೋಭೆ ತಂದರು.

ಸರಸ್ವತಿ ದೇವಿಯ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಾಧ್ಯಾಪಕ ಶ್ರೀ ಮಲ್ಲಿಕಾರ್ಜುನ ಬಡಿಗೇರರು ಪ್ರಾರ್ಥನೆ ಸಲ್ಲಿಸಿದರು.ಪೂಜಾ ಕಾರ್ಯಕ್ರಮದ ಯಶಸ್ವಿಗೆ ಶಿಕ್ಷಕ-ಶಿಕ್ಷಕೇತರರು ಸಹಕರಿಸಿದರು.ಸರ್ವರು ದೇವಿ ಪ್ರಸಾದ ಸ್ವೀಕರಿಸಿ ದೇವಿ ಕೃಪೆಗೆ ಪಾತ್ರರಾದರು.ಕೊನೆಗೆ ಉಪಹಾರದ ವ್ಯವಸ್ಥೆಯನ್ನು ಮಸೂಮ ಸಂಸ್ಥೆಯವರು ಮಾಡಿದ್ದರು.

===============================

Related posts

ನಾಲಾಸೋಪಾರ ದ ಉದ್ಯಮಿ, ಸಮಾಜ ಸೇವಕ. ಸಂಘಟಕ,  ಶಶಿಧರ. ಕೆ ಶೆಟ್ಟಿ ಇನ್ನಂಜೆಯವರಿಗೆ ಪೋಲಿಸ್ ಇಲಾಖೆಯ ಅತ್ಯುತ್ತಮ  ಸೇವಕರ್ತ ಪ್ರಶಸ್ತಿ ಪ್ರದಾನ .

Mumbai News Desk

ವಿಶ್ವ ರಂಗ ದಿನಾಚರಣೆ- 2024ರ ಅಂಗವಾಗಿನಾಟಕ ರಚನಾ ಕಮ್ಮಟ ಮತ್ತು ರಂಗ ನಿರ್ದೇಶಕರ ಸಮ್ಮಿಲನ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಗ್ರೀಷ್ಮ ಪ್ರಕಾಶ್ ಕರ್ಕೇರ ಗೆ ಶೇ 82 ಅಂಕ.

Mumbai News Desk

ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಮಹಾಶಿವರಾತ್ರಿ ಉತ್ಸವ

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ

Mumbai News Desk

ಬಿಲ್ಲವರ ಅಸೋಸಿಯೇಶನ್, ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿ – 170 ನೇ ಗುರು ಜಯಂತಿ ಆಚರಣೆ – 2024

Mumbai News Desk