ಮುಂಬೈ ತುಳು ಕನ್ನಡಿಗರ ಪ್ರಪ್ರಥಮ ಧಾರ್ಮಿಕ ಸಂಸ್ಥೆ ಶ್ರೀಮದ್ಭಾರತ ಮಂಡಳಿಯ 147ನೇ ವಾರ್ಷಿಕ ಮಂಗಳೋತ್ಸವ ಹಾಗೂ 23ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಫೆಬ್ರವರಿ 22 ಹಾಗೂ 23 ರಂದು ಅಂಧೇರಿ ಪಶ್ಚಿಮ ವೀರ ದೇಸಾಯಿ ಮಾರ್ಗದ ಎಂ ವಿ ಎಮ್ ಎಜುಕೇಶನಲ್ ಕ್ಯಾಂಪಸ್ ಬಳಿಯ ಶ್ರೀಮದ್ಭಾರತ ಮಂಡಳಿ ಸಂಚಾಲಿತ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ನಡೆಯಲಿದೆ.
ಫೆಬ್ರವರಿ 22ರಂದು ಶನಿವಾರ ಸಂಜೆ 5 ರಿಂದ 6ರ ತನಕ ಶೃಂಗರಿಸಿದ ಶ್ರೀ ಲಕ್ಷ್ಮಿನಾರಾಯಣ ದೇವರ ಮೂರ್ತಿಯ ಪ್ರತಿಷ್ಠಾಪನೆ, 6 ರಿಂದ 7 ರ ತನಕ ಹೋಮ, ಬ್ರಾಹ್ಮಣ ಸತ್ಕಾರ, 7:30 ರಿಂದ 9:30 ತನಕ ಗ್ರಂಥ ಪಾರಾಯಣ, ಬಳಿಕ ಮಹಾ ಆರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ತಾರೀಕು 23 ರಂದು ಆದಿತ್ಯವಾರ, ಬೆಳಿಗ್ಗೆ 8 ರಿಂದ 10ರ ತನಕ ಉತ್ತರ ಪೂಜೆ, ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಹವಾಚನ, ಹೋಮ, ಶ್ರೀ ಲಕ್ಷ್ಮೀನಾರಾಯಣ ಹಾಗೂ ಪರಿವಾರ ದೇವರಿಗೆ ನವಕ ಕಲಶ ಪೂಜೆ, ಪಂಚಾಮೃತ ಅಭಿಷೇಕ ಮತ್ತು ಕಳಶಾಭಿಷೇಕ, ಭಜನೆ ನಡೆಯಲಿದೆ.
10ರಿಂದ 10:30ರ ತನಕ ಕುಣಿತ ಭಜನೆ, 11 ರಿಂದ 12.30ರ ತನಕ ಉತ್ಸವ ಬಲಿ, 12.30 ರಿಂದ 12:45ರ ತನಕ ಶ್ರೀ ದೇವರಿಗೆ ಮಹಾ ಆರತಿ ನಡೆಯಲಿದೆ.
12.45 ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ಆರಂಭವಾಗಲಿದೆ.
ಶ್ರೀ ಮದ್ಭಾರತ ಮಂಡಳಿಯ 147ನೇ ವಾರ್ಷಿಕ ಮಂಗಳೋತ್ಸವ, ಹಾಗೂ 23ನೇ ವಾರ್ಷಿಕ ಪ್ರತಿಷ್ಠ ಮಹೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ತೀರ್ಥ ಪ್ರಸಾದ ಸ್ವೀಕರಿಸುವಂತೆ ಮಂಡಳಿಯ ಟ್ರಸ್ಟಿಗಳಾದ ಜಗನ್ನಾಥ್ ಪಿ ಪುತ್ರನ್, ನಾಗೇಶ್ ಎಲ್ ಮೆಂಡನ್, ಗೋವಿಂದ ಪುತ್ರನ್, ಹರಿಶ್ಚಂದ್ರ ಸಿ ಕಾಂಚನ್, ಮೋಹನ್ ದಾಸ್ ಓಡಿ ಮೆಂಡನ್, ಅಧ್ಯಕ್ಷರಾದ ಜಗನ್ನಾಥ ಪಿ ಪುತ್ರನ್ ಉಪಾಧ್ಯಕ್ಷರುಗಳಾದ ನಾಗೇಶ್ ಐ ಮೆಂಡನ್ ಲೋಕನಾಥ್ ಪಿ ಕಾಂಚನ್ ಗೌರವ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಸಿ ಕಾಂಚನ್, ಗೌರವ ಪ್ರಧಾನ ಕೋಶಧಿಕಾರಿ ಕೇಶವ ಆರ್ ಪುತ್ರನ್, ಜೊತೆ ಕಾರ್ಯದರ್ಶಿಗಳಾದ ಸುರೇಂದ್ರನಾಥ್ ಹಳೆಯಂಗಡಿ, ಶ್ಯಾಮ್ ಕೆ ಪುತ್ರನ್, ಜೊತೆ ಕೋಶಾಧಿಕಾರಿಗಳಾದ ಜಗನ್ನಾಥ್ ಆರ್ ಕಾಂಚನ್, ರಮೇಶ್ ಎಸ್ ಅಮೀನ್ ಮತ್ತು ಸದಸ್ಯರು ವಿನಂತಿಸಿದ್ದಾರೆ.