
ಮುಂಬಯಿ : ಶ್ರೀ ಗುರು ನಾರಾಯಣ ಸೇವಾ ಸಮಿತಿ ವಸಯಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿಯವರ 29ನೇ ವಾರ್ಷಿಕ ಮೂರ್ತಿ ಪ್ರತಿಷ್ಠಾಪನಾ ದಿನಾಚರಯು ವಸಯಿ ಪಶ್ಚಿಮ, ೭, ಗಣೇಶ್ ದೀಪ್, ಮೈತ್ರಿ ಪಾರ್ಕ್, ಶ್ರೀ ನಾರಾಯಣ ಲೇನ್ ಇಲ್ಲಿ ನಡೆಯಲಿರುವುದು.
ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರ ತನಕ ಭಜನೆ, ಮಧ್ಯಾಹ್ನ 12ರಿಂದ 1ರ ತನಕ ಆರತಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರ ತನಕ ಹಳದಿ ಕುಂಕುಮ, ಮಧ್ಯಾಹ್ನ 1ರಿಂದ
೩ ರ ತನಕ ಅನ್ನ ಸಂತರ್ಪಣೆ ನಡೆಯಲಿದೆ.
ಸಮಾಜ ಬಾಂಧವರು ಹಾಗೂ ಭಕ್ತಾಭಿಮಾನಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಬೇಕಾಗಿ ಶ್ರೀ ಗುರು ನಾರಾಯಣ ಸೇವಾ ಸಮಿತಿಯ ಬೋರ್ಡ್ ಆಫ್ ಟ್ರಸ್ಟಿನ ಪರವಾಗಿ ಕಾರ್ಯಧ್ಯಕ್ಷರಾದ ಜಯರಾಮ ಕೆ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಓ ಪಿ ಪೂಜಾರಿ, ಜೊತೆ ಕಾರ್ಯದರ್ಶಿ ಎನ್ ಪಿ ಮಲ್ಲಾರ್, ಕೋಶಾಧಿಕಾರಿ ಬೋಜ ಟ ಅಂಚನ್, ಸದಸ್ಯರುಗಳಾದ ಕೆ ಬಿ ಸುವರ್ಣ, ಎಚ್ ಜಿ ಕುಂದರ್ , ದಾಸು ಎ ಕುಂದರ್, ವಿಶ್ವೇಂದ್ರ ಅಮೀನ್, ಪೂಜಾ ಸಮಿತಿಯ ಕಾರ್ಯಧ್ಯಕ್ಷ ಕೇಶವ ಜಿ ಪೂಜಾರಿ, ಕಾರ್ಯದರ್ಶಿ ಶೇಕರ್ ಕೆ ಪೂಜಾರಿ, ಮಹಿಳಾ ವಿಭಾಗದ ಪರವಾಗಿ ಕಾರ್ಯಾಧ್ಯಕ್ಷೆ
ಜಯಂತಿ ಎಸ್ ಕೋಟ್ಯಾನ್, ಕಾರ್ಯದರ್ಶಿ ಜಯಶ್ರೀ ಪಿ. ಅಂಚನ್, ಕೋಶಾಧಿಕಾರಿ ಜಯಂತಿ ಎನ್ ಮಲ್ಲಾರ್ ಮತ್ತು ಸದಸ್ಯರುಗಳು, ಯುವ ವಿಭಾಗದ ಕಾರ್ಯಧ್ಯಕ್ಷ ರಾಜೇಶ್ ಡಿ ಕುಂದರ್, ಕಾರ್ಯದರ್ಶಿ ಯೋಗೇಶ್ ಕೆ ಕರ್ಕೆರ, ಕೋಶಾಧಿಕಾರಿ ವೇಣು ಗೋಪಾಲ್, ಕಾರ್ಯಕ್ರಮ ಸಮಿತಿಯ ಎಲ್ಲಾ ಸದಸ್ಯರುಗಳು ವಿನಂತಿಸಿದ್ದಾರೆ.