
ಮಹಾನಗರ ಕನ್ನಡ ಸಂಸ್ಥೆಯ ಡೊಂಬಿವಲಿ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ ಶನಿವಾರ 15 ಮಾರ್ಚ್ 2025 ರಂದು ವಿನಾಯಕ ಸಭಾಗೃಹ ಡೊಂಬಿವಿಲಿಪೂರ್ವ ದಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಯಾಗಿ ಡಾ. ರಜನಿ ಪೈ ಸಮಾಜ ಸೇವಕಿ ಹಾಗು ಗೌರವ ಅತಿಥಿಯಾಗಿ ಶ್ರೀಮತಿ ಶ್ರೀದೇವಿ ರಾವ್ ಮತ್ತು ಶ್ರೀಮತಿ ವಾಣಿ ಕೇರಕಲಮಟ್ಟಿ ಅವರು ಆಗಮಿಸಲಿದ್ದಾರೆ. ಸಭಾ ಅಧ್ಯಕ್ಷತೆ ಯನ್ನು ಶ್ರೀಮತಿ ಲೀಲಾ ಮಸಳಿಯವರು ವಹಿಸಲಿದ್ದಾರೆ.
ಮಹಾನಗರ ಕನ್ನಡ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತಿದೆ. ಮಹಾನಗರ ಸಂಸ್ಥೆಯ ಮಹಿಳಾ ವಿಭಾಗವು ಪ್ರತಿವರ್ಷ ಜಾಗತಿಕ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ. ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ವಿದ್ಯಾವತಿ ಆಲಗುರ, ಉಪಾಧ್ಯಕ್ಷೆ ಶ್ರೀಮತಿ ವಾಸಂತಿ ದೇಶಪಾಂಡೆ, ಕಾರ್ಯದರ್ಶಿ ಶ್ರೀಮತಿ ಲೀಲಾ ಮಸಳಿ ಮತ್ತು ಕೋಶಾಧಿಕಾರಿ ಪ್ರತಿಭಾ ಕುಲಕರ್ಣಿ ಇವರು ಕಾರ್ಯಕ್ರಮದ ಕಾರ್ಯಕ್ರಮದ ರೂಪುರೇಷೆಗಳನ್ನು ಪ್ರಕಟಿಸಿದರು. ಮಹಿಳಾ ವಿಭಾಗವು ಪ್ರತಿವರ್ಷ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.