
ಭಗವತಿ ಮಾತೆಯ ಅಪ್ಪಣೆಯಂತೆ ಹದಿನೆಂಟು ಕ್ಷೇತ್ರಗಳೂ ಲೋಕಾರ್ಪಣೆಗೊಂಡಿದೆ – ಚಂದ್ರಶೇಖರ ಬೆಳ್ಚಡ
ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರ ಕಡೆಮೆಯಾಗಿದ್ದು ತುಳಸಿಯಂತೆ ದೇವರಿಗೆ ಹತ್ತಿರವಾಗುರುವ ಕೃಷ್ಣ ಎನ್ ಉಚ್ಚಿಲ್ ಅವರು ಭಗವತಿ ಮಾತೆಯ ಅಪ್ಪಣೆಯಂತೆ ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರವನ್ನು ಸಮಾಜಕ್ಕೆ ಅರ್ಪಿಸಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಬೆಳ್ಚಡ ನುಡಿದರು.

ಬಂಟ್ವಾಳ ತಾಲೂಕು ಅಳಿಕೆ ಸಮೀಪ ಸಿಂಹಮೂಲೆ ಎರುಂಬು ಎಂಬಲ್ಲಿನ ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಸಂಪೂರ್ಣ ಜೀರ್ಣೊದ್ದಾರ ಮಾಡಿ ಮಾ. 16ರಂದು ಜರಗಿದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.
ಡಾ. ಜಿ. ಪಿ. ಮೊಗಶಾಲೆಯವರು ಧಾರ್ಮಿಕ ಉಪನ್ಯಾಸ ನೀಡಿದರು.
ಮುಂಬಯಿಯ ಉದ್ಯಮಿ, ಕ್ಷೇತ್ರದ ಅಧ್ಯಕ್ಷರೂ ಆದ ಕೃಷ್ಣ ಎನ್ ಉಚ್ಚಿಲ್ ಇವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಜೀರ್ಣೋದ್ದಾರದ ಬಗ್ಗೆ ನನಗೆ ಸಿಕ್ಕಿದ ಎಲ್ಲಾ ಗೌರವ ಸನ್ಮಾನ ಗಳನ್ನು ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರದ ಜೋರ್ಣೋದ್ದಾರಕ್ಕಾಗಿ ರಾತ್ರಿ ಹಗಲೆನ್ನದೆ ದುಡಿದ ಎಲ್ಲರಿಗೂ ಅರ್ಪಿಸುತ್ತಿರುವೆನು. ಹದಿನೈದು ವರ್ಷಗಳ ಹಿಂದೆ ಕನಸಲ್ಲಿ ಸಿಂಹದ ರೂಪದಲ್ಲಿ ಬಂದ ಮಾತೆ ಭಗವತೀ ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ, ಸುಮಾರು 600 ವರ್ಷಗಳ ಹಿಂದೆ ಅನ್ಯರ ದಾಳಿಯಿಂದಾಗಿ ಸಂಪೂರ್ಣ ನಾಶ ಹೊಂದಿದ್ದ ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಜೀರ್ಣೋದ್ದಾರವನ್ನು ಎಷ್ಟೇ ಕಷ್ಟ, ನಷ್ಟ ಬಂದರೂ ಮಾತೆಯ ಆಪ್ಪಣೆಯಂತೆ ಮುಂದಿಟ್ಟ ಕಾಲನ್ನು ಹಿಂದಿಡದೆ ಜಾತಿ ಬಾಂಧವರ ಹಾಗೂ ಊರಿನ ಎಲ್ಲಾ ಭಕ್ತಾಭಿಮಾನಿಗಳ ಸಹಾಯದಿಂದ ಮಾತೆಯ ಆಶೀರ್ವಾದದಿಂದ ಜೀರ್ಣೋದ್ದಾರ ಮಾಡಿದ್ದೇವೆ ಎಂದರು.

ತೀಯಾ ಸಮಾಜ ಮುಂಬಯಿಯ ಟ್ರಷ್ಟಿ ಡಾ. ದಯಾನಂದ ಕುಂಬ್ಳೆ, ಸಮಾಜದ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಮುಂಬಯಿಯ ಸಿ.ಎ. ರಾಧೇಶ್ ನಾಯರ್ ಮೊದಲಾದವರು ಮಾತನಾಡಿದರು.
ವೇದಿಕೆಯಲ್ಲಿ ಜಗಜೀವನ್ ರಾಮ್ ಶೆಟ್ಟಿ, ಯತೀಂದ್ರನಾಥ ಪುತ್ತೂರು, ಮಲೈಕಾ ಗ್ರೂಪಿನ ನಿರ್ದೇಶಕ ಸುಶಾಂತ್, ಮುಂಬಯಿಂದ ಆಗಮಿಸಿದ ಸಮಾಜ ಸೇವಕ ತಿಮ್ಮಪ್ಪ ಬಂಗೇರ, ತೀಯಾ ಸಮಾಜದ ಮಾಜಿ ಕೋಶಾಧಿಕಾರಿ ರಮೇಶ್ ಉಳ್ಳಾಲ್, ಪದ್ಮನಾಭ ಕರ್ಕೇರ, ಚಂದ್ರಿಕಾ ಕೃಷ್ಣ ಉಚ್ಚಿಲ್, ತೀಯಾ ಸಮಾಜದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾಲತಾ ಉಳ್ಳಾಲ್, ಶಶಿಪ್ರಭಾ ಬಂಗೇರ, ಸವಿತಾ ಶೆಟ್ಟಿ, ಸರಸ್ವತಿ ಬಜ್ಪೆ, ತೀಯಾ ಸಮಾಜ ದುಬಾಯಿಯ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತ ಈಶ್ವರ ಎಂ. ಐಲ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ವಿವಿಧ ಕ್ಷೆತ್ರದಲ್ಲಿ ಸಾಧನೆಗೈದ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬ್ರಹ್ಮಕಲಶ ಸಮಾರಂಭದಲ್ಲಿ ತೀಯಾ ಸಮಾಜ ಮುಂಬಯಿಯ ಸದಸ್ಯರುಗಳು ನೂರಾರು ಸಂಖ್ಯೆಯಲ್ಲಿ ಬಾಗವಹಿಸಿದರು. ಕರಾವಳಿಯ ಎಲ್ಲಾ 18 ಭಗವತೀ ಕ್ಷೇತ್ರಗಳ ಸಮಿತಿಯ ಸದಸ್ಯರು, ಭಕ್ತಾಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.