ತುಳು – ಕನ್ನಡಿಗ 200 ಕ್ಕಿಂತ ಹೆಚ್ಚು ಕಲಾವಿದರಿಂದ ಯಕ್ಷ-ಗಾನ- ನಾಟ್ಯ ಸಂಭ್ರಮ.
ಮೀರಾ ರೋಡ್ :. ಪ್ರತಾಪ್ ಸರ್ ನಾಯಕ್ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಿರುವ
ಚೈತ್ರ ನವರಾತ್ರೋತ್ಸವ ಕಾರ್ಯಕ್ರಮದಲ್ಲಿ ಮೀರಾ – ಭಾಯಂದರ್ ಸಂಘಟಕ ಬಂಟರ ಸಂಘ, ಮುಂಬೈಯ ಬಂಟರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು ಮತ್ತು ಮೀರಾ – ಭಾಯಂದರ್ ಭಾರತೀಯ ಜನತಾ ಪಕ್ಷದ ಮುಖಂಡ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು ನೇತೃತ್ವದಲ್ಲಿ ತುಳು ಕನ್ನಡಿಗರ ಒಗ್ಗಟ್ಟಿನಲ್ಲಿ ಎ. 4 ರಂದು ಶುಕ್ರವಾರ ಸಂಜೆ ಗಂಟೆ 6:00 ರಿಂದ 9:00ರ ವರೆಗೆ
ನಾಮ್ಹಾರ್ ಗೋಖಲೆ ಮೈದಾನ, ಬೆವರ್ಲಿ ಪಾರ್ಕ್, ಆರ್.ಬಿ.ಕೆ ಶಾಲೆ ಹತ್ತಿರ, ಮೀರಾ ಭಾಯಂದರ್ ಇಲ್ಲಿ ಮಹಾರಾಷ್ಟ್ರದ ನೂತನ
ಸಾರಿಗೆ ಸಚಿವ ಪ್ರತಾಪ್ ಸರ್ ನಾಯಕ್ ಇವರಿಗೆವಿಶೇಷ ಸನ್ಮಾನ ಹಾಗೂ ತುಳು – ಕನ್ನಡಿಗ 200 ಕ್ಕಿಂತ ಹೆಚ್ಚು ಕಲಾವಿದರಿಂದ ಯಕ್ಷ-ಗಾನ ನಾಟ್ಯ ಸಂಭ್ರಮ ನಡೆಯಲಿದೆ.
ಮೀರಾ – ಭಾಯಂದರ್ ನ ತುಳು – ಕನ್ನಡಿಗರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ, ಹೋಟೆಲ್ ಉದ್ಯಮಿಗಳ, ರಾಜಕೀಯ ನಾಯಕರ ಉಪಸ್ಥಿತಿಯಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದೆ.
ಪ್ರಪ್ರಥಮ ಬಾರಿಗೆ ಸುಮಾರು 200 ತುಳು ಕನ್ನಡದ ಕಲಾವಿದರು ತಮ್ಮ ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ.
ಮೀರಾ – ಭಾಯಂದರ್ ನ ಜನಪ್ರಿಯ ಶಾಸಕರಾಗಿ ತುಳು ಕನ್ನಡಿಗರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಪ್ರತಾಪ್ ಸರ್ ನಾಯಕ್ ಈ ಬಾರಿಯ ಮಹಾರಾಷ್ಟ್ರ ಸರಕಾರದ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದು ಅವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
ತುಳು ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಘಟಕರಾದಗಿರೀಶ್ ಶೆಟ್ಟಿ ತೆಳ್ಳಾರು, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು ಹಾಗೂ ಮೀರಾ- ಭಾಯಂದರ್ ನ ತುಳು ಕನ್ನಡಿಗರು ವಿನಂತಿಸಿಕೊಂಡಿದ್ದಾರೆ.