.
ನಾಳೆ ಸಂಭ್ರಮದ ಮನವಿ ಪತ್ರ ಬಿಡುಗಡೆ ಹಾಗೂ ಸಮಾಲೋಚನೆಯ ವಿಶೇಷ ಸಭೆ.
ಜೂ2.ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ, ಇದರ ಶತ ಸಂವತ್ಸರೋತ್ಸವ
ಸಂಭ್ರಮದ ಮನವಿ ಪತ್ರ ಬಿಡುಗಡೆ ಹಾಗೂ ಸಮಾಲೋಚನೆಯ ವಿಶೇಷ ಸಭೆ
ಜುಲೈ 4ರಂದು ಶುಕ್ರವಾರ ಸಂಜೆ ಗಂಟೆ 6ಕ್ಕೆ ಸರಿಯಾಗಿ ಹೊಟೇಲ್ ಮುಂಬೈ ಮೆಟ್ರೋ, ಮೊದಲನೆ ಮಹಡಿ, ಸಾಕಿನಾಕಾ ಜಂಕ್ಷನ್, ಸಾಕಿನಾಕಾ ಮೆಟ್ರೋ ಸ್ಟೇಶನಿನ ಹತ್ತಿರ, ಜರಗಲಿದೆ.
ಪ್ರಸಕ್ತ ವಿದ್ಯಾವರ್ಧಕ ಸಂಘ (ರಿ.) ಶಿರ್ವ ಇದರ ಆಡಳಿತಕ್ಕೆ ಒಳಪಟ್ಟಿರುವ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಗ್ರಾಮೀಣ ಪ್ರದೇಶದ ಕುತ್ಯಾರಿನಲ್ಲಿ ಸಹಸ್ರಾರು ಜನಕ್ಕೆ ವಿದ್ಯಾರ್ಜನೆ ಮಾಡಿದ ದೇಗುಲ.
ತನ್ನ ನೂರು ವರ್ಷಗಳ ಸುದೀರ್ಘ ದಾರಿಯಲ್ಲಿ 2000-2001ರಲ್ಲಿ ವೈಭವದ ಅಮೃತ ಮಹೋತ್ಸವನ್ನು ಆಚರಿಸಿದ ಈ ಸಂಸ್ಥೆಯು ಈಗ ಶತ ಸಂವತ್ಸರೋತ್ಸವದ ಹೊತ್ತಿನಲ್ಲಿದೆ. ಶತಮಹೋತ್ಸವದ ಆಚರಣೆ, ನಾಲ್ಕು ಅಂಕಿ ಮೀರದ ಗೌರವ ಧನ ಪಡೆಯುವ ಶಿಕ್ಷಕರ ಮತ್ತು ಶಾಲೆಯ ವಿವಿಧ ಮೂಲಭೂತ ಅವಶ್ಯಕತೆಗಳ ಪೂರೈಕೆಯ ಜವಾಬ್ದಾರಿಯು ಶಿಕ್ಷಣ ಪ್ರೇಮಿಗಳ ಜವಾಬ್ದಾರಿಯೂ ಹೌದು. ಈ ನಿಟ್ಟಿನಲ್ಲಿ ಮನವಿ ಪತ್ರವನ್ನು ಬಿಡುಗಡೆ ಮಾಡಲು ಹಾಗೂ ಮುಂಬೈ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ನಮ್ಮ ಎಲ್ಲಾ ಹಳೆ ವಿದ್ಯಾರ್ಥಿಗಳು, ಕುತ್ಯಾರು ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಮತ್ತು ಹಿತೈಷಿಗಳಿಗಾಗಿ ಸಮಾಲೋಚನೆ ಸಭೆಯನ್ನು ಆಯೋಜಿಸಿಕೊಂಡಿದೆ.
ಈ ಸಭೆಯಲ್ಲಿ ಗೌರವಾನ್ವಿತ ಗೌರವಾಧ್ಯಕ್ಷರಾದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಗೌರವಾಧ್ಯಕ್ಷರಾದ ಸಿಎ ಶಂಕರ್ ಬಿ. ಶೆಟ್ಟಿ, ಶತ ಸಂವತ್ಸರೋತ್ಸವ ಸಮಿತಿಯ ಅಧ್ಯಕ್ಷರಾದ ಕೆಂಜ ಶ್ರೀಧರ್ ತಂತ್ರಿ, ಮುಂಬಯಿ ವಲಯದ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಕೆಂಜ ನಡಿಗುತ್ತು, ಪ್ರಮುಖರಾದ ಶಮಿತ್ ರವೀಂದ್ರ ಅರಸ, ವಿದ್ಯಾವರ್ಧಕ ಆಡಳಿತ ಮಂಡಳಿಯ ಸದಸ್ಯ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಸಂಘಟನಾ ಕಾರ್ಯದರ್ಶಿಗಳಾದ ಕುತ್ಯಾರು ಪ್ರಸಾದ್ ಶೆಟ್ಟಿ, ಸಮನ್ವಯಕರಾದ ಕಿಶೋರ್ ಕುಮಾರ್ ಕುತ್ಯಾರು ಹಾಗೂ ಮುಂಬೈ ಸಮಿತಿಯ ಪದಾಧಿಕಾರಿಗಳು ಹಾಗೂ ಹಿರಿಯರ ಮತ್ತು ಶಾಲಾಭಿಮಾನಿಗಳ ಉಪಸ್ಥಿತರಿರುವರೆ.
ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಮುಂಬೈ ಸಮಿತಿಯ ಪರವಾಗಿ ಕಾರ್ಯದರ್ಶಿ ಸತೀಶ್ ಶೆಟ್ಟಿ ಕುತ್ಯಾರು ಹಾಗೂ ಪ್ರಧಾನ ಕಾರ್ಯದರ್ಶಿ ಶತಸಂವತ್ಸರೋತ್ಸವ ಸಮಿತಿಯ ಕುತ್ಯಾರು ನವೀನ್ ಶೆಟ್ಟಿಯವರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.




