32 C
Mumbai
March 7, 2026
Mumbai News Kannada
ಮುಂಬಯಿ

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ರಾಯರ ಆರಾಧನೆ





 ಮುಂಬಯಿ ಆ 12.ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯಲ್ಲಿರುವ ಪೇಜಾವರ ಮಠದಲ್ಲಿ  ಶ್ರೀರಾಘವೇಂದ್ರ ಗುರು ಸ್ವಾಮಿಗಳ   354ನೇ ಆರಾಧನಾ ಮಹೋತ್ಸವವನ್ನು ವೈಭವದಿಂದ ಆಚರಿಸಲಾಯಿತು,

 ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ  ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಆದೇಶ, ಮಾರ್ಗದರ್ಶನದಂತೆ  ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ರಾಯರ ಪ್ರವಚನ, ಭಗವದ್ಗೀತಾ ಪಾಠ, ಆಲಂಕಾರ ಸೇವೆಯನ್ನು ಮಠದ ಮುಖ್ಯ ಪ್ರಬಂಧಕರಾದ  ರಾಮದಾಸ ಉಪಾಧ್ಯಾಯ ರೆಂಜಾಳ ನಡೆಸಿದರು,

 ಬೆಳಿಗ್ಗೆ ಶ್ರೀಕೃಷ್ಣನ ಸನ್ನಿಧಾನದಲ್ಲಿ ಪೂಜೆನೆರವೇರಿಸಿ ಬಳಿಕ  ಶ್ರೀರಾಘವೇಂದ್ರ ಗುರುಗಳಿಗೆ ವಿಶೇಷ ಪೂಜೆಯೊಂದಿಗೆ ನಡೆಯಿತು.

ಆನಂತರ ಭಕ್ತರಿಗೆ ರಾಘವೇಂದ್ರ ಸ್ವಾಮಿಗಳ ಬಗ್ಗೆ ಧಾರ್ಮಿಕ ಪ್ರವಚನವನ್ನು ರಾಮದಾಸ ಉಪಾಧ್ಯಾಯ ನೀಡಿದರು,

ಪೇಜಾವರ ಮಠದ ಮದ್ದೇಶ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು,

ಕಾರ್ಯಕ್ರಮದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅವಿನಾಶ್ ಶಾಸ್ತ್ರಿ ಮತ್ತಿತರ ಪದಾಧಿಕಾರಿಗಳು, ಶ್ರೀ ಪೇಜಾವರ ಮಠ ಮುಂಬಯಿ ಪ್ರಬಂಧಕರಾದ ಶ್ರೀಹರಿ ಭಟ್ ಪುತ್ತಿಗೆ ಮತ್ತು ನಿರಂಜನ್ ಗೋಗಟೆ, ಆರ್ಚಕರಾದ . ಪವನಕುಮಾ‌ರ್ ವಿಷ್ಣುತೀರ್ಥ ಸಾಲಿ, , ಪ್ರವೀಣ್ ಜೋಶಿ, ಶ್ರೀನಿವಾಸ ಭಟ್ ಪರೇಲ್ ಸೇರಿದಂತೆ ಸಹ ಪುರೋಹಿತರು, ಸದಸ್ಯರು ಹಾಗೂ ಭಕ್ತರನೇಕರು ಉಪಸ್ಥಿತರಿದ್ದು ರಾಯರ ಆರಾಧನೆಗೈದರು.

B. Dinesh Kulal

Mob.: 9821868674



Related posts

ಸಹಾರ್‌ಗಾಂವ್ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ – 36ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಮಂಡಲ ಪೂಜೆ.

Mumbai News Desk

ಕುಮಾರ ಕ್ಷತ್ರಿಯ ಸಂಘ ಮುಂಬಯಿ 60ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ವಾರ್ಷಿಕ ಮಹಾಸಭೆ

Mumbai News Desk

ಡೊಂಬಿವಲಿಯಲ್ಲಿ ‘ಚತುರ್ಜನ್ಮಮೋಕ್ಷ’ ಯಕ್ಷಗಾನ. ಅದ್ದೂರಿ ಸನ್ಮಾನ ಕಾರ್ಯಕ್ರಮ.

Mumbai News Desk

ಜನವರಿ 1, 26ರಿಂದ ಮತ್ಸ್ಯಗಂಧ ರೈಲು ಪ್ರಯಾಣದಲ್ಲಿ ವ್ಯತ್ಯಯ; ಪನ್ವೇಲ್‌ನಲ್ಲೇ ನಿಲ್ಲಲಿವೆ ನೇತ್ರಾವತಿ, ಮತ್ಸ್ಯಗಂಧ ಎಕ್ಸ್‌ಪ್ರೆಸ್

Mumbai News Desk

ಕುಲಾಲ ಸಂಘ ಮುಂಬಯಿ ನವರಾತ್ರಿ ಉತ್ಸವ.ದುರ್ಗಾ ಪೂಜೆ, ಗರ್ಬಾ ನೃತ್ಯ

Mumbai News Desk

ಮಂಜುನಾಥ ವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಅಕಾಡೆಮಿ ವರ್ಷದ ಪ್ರಶಸ್ತಿ ಪ್ರಧಾನ

Mumbai News Desk