
ಮುಂಬಯಿ, ಸೆಪ್ಟೆಂಬರ್ 16: ಬಂಟರ ಸಂಘ ಮುಂಬಯಿ – ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಮತ್ತು ಬೊರಿವಲಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜಂಟಿ ಆಶ್ರಯದಲ್ಲಿ, ಸೆಪ್ಟೆಂಬರ್ 14ರಂದು ಬೊರಿವಲಿ ಪಶ್ಚಿಮದ ಜಯರಾಜ್ ನಗರದಲ್ಲಿರುವ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಆವರಣದಲ್ಲಿ ಕಲಾ ಪ್ರಕಾಶ ಪ್ರತಿಷ್ಠಾನ (ರಿ.), ಮುಂಬಯಿ ಸಂಚಾಲಕತ್ವದಲ್ಲಿ ಭವ್ಯವಾದ “ಭೀಷ್ಮ ಸೇನಾಧಿಪತ್ಯ – ಕರ್ಮಬಂಧ” ಯಕ್ಷಗಾನ ತಾಳಮದ್ದಳೆ ನಡೆಯಿತು.
ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಅವರು –
“ಯಕ್ಷಗಾನವು ಧರ್ಮಾತೀತವಾದ ಕಲೆ. ಎಲ್ಲ ಧರ್ಮದವರೂ ಅದನ್ನು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಅನ್ಯ ಧರ್ಮದವರೂ ಈ ಕಲೆ ಮೇಲೆ ಆಕರ್ಷಿತರಾಗಿದ್ದಾರೆ. ಜಬ್ಬಾರ್ ಸಮೋ ಸಂಪಾಜೆಯವರು ಮಹಾಭಾರತ, ರಾಮಾಯಣದ ಯಾವುದೇ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವ ಶ್ರೇಷ್ಠ ಕಲಾವಿದರು. ಇಂತಹ ಶ್ರೀಮಂತ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ನುಡಿದರು.

ಈ ಸಂದರ್ಭದಲ್ಲಿ ಬಂಟರ ಸಂಘ ಮುಂಬಯಿಯ ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ, ಜೋಗೇಶ್ವರಿ-ದಹಿಸರ್ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ, ಸಲಹೆಗಾರರಾದ ಮುಂಡಪ್ಪ ಎಸ್. ಪಯ್ಯಡೆ, ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಣಂಜಾರು ಕೊಳಕೆಬೈಲ್ ಪ್ರದೀಪ್ ಸಿ. ಶೆಟ್ಟಿ, ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ. ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಹೆಚ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಪ್ರೇಮನಾಥ ಶೆಟ್ಟಿ ಕೊಂಡಾಡಿ ಸ್ವಾಗತಿಸಿದರು.
ಸಂಚಾಲಕರಾಗಿ ಶೈಲಜಾ ಎ. ಶೆಟ್ಟಿ ನಿರ್ವಹಿಸಿದರು.

ಮಹಿಳಾ ಘಟಕದ ಉಪ ಕಾರ್ಯಾಧ್ಯಕ್ಷೆ ರೇಖಾ ವೈ. ಶೆಟ್ಟಿ, ಕಾರ್ಯದರ್ಶಿ ಸರಿತಾ ಎಂ. ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ಯೋಗಿನಿ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಹೆಚ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಎಸ್. ಶೆಟ್ಟಿ, ಮುಖ್ಯ ಸಲಹೆಗಾರರಾದ ಮುಂಡಪ್ಪ ಎಸ್. ಪಯ್ಯಡೆ, ಮನೋಹರ ಎನ್. ಶೆಟ್ಟಿ, ಎನ್. ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ, ರವೀಂದ್ರ ಎಸ್. ಶೆಟ್ಟಿ, ಎರ್ಮಾಳು ಹರೀಶ್ ಶೆಟ್ಟಿ, ಹಾಗೆಯೇ ಬೊರಿವಲಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಮೊಕ್ತೇಸರರಾದ ಕಲ್ಲಮುಂಡ್ಕೂರು ಹರಿಯಾಳಗುತ್ತು ಜಯರಾಜ್ ಶ್ರೀಧರ ಶೆಟ್ಟಿ, ಜಯಪಾಲಿ ಅಶೋಕ್ ಶೆಟ್ಟಿ, ಕಣಂಜಾರು ಕೊಳಕೆಬೈಲ್ ಪ್ರದೀಪ್ ಸಿ. ಶೆಟ್ಟಿ, ವೆಂಕಟ್ರಮಣ ತಂತ್ರಿ, ಅರ್ಚಕ ವೃಂದ, ಕಾರ್ಯಕಾರಿ ಸಮಿತಿ ಹಾಗೂ ಭಜನಾ ಮಂಡಳಿಯವರು ಕಾರ್ಯಕ್ರಮಕ್ಕೆ ಬೆಂಬಲ ನೀಡಿದರು.
ತಾಳಮದ್ದಳೆಗೆ ಹಿಮ್ಮೇಳದಲ್ಲಿ ಭಾಗವಹಿಸಿದವರು –
ಭಾಗವತರು: ಮಹೇಶ್ ಕನ್ಯಾಡಿ
ಮದ್ದಳೆ: ಮಧುಸೂದನ ಪಾಲನ್
ಚೆಂಡೆ: ಅಶೀಷ್ ಆರ್. ದೇವಾಡಿಗ
ಮುಮ್ಮೇಳದಲ್ಲಿ –
ಜಬ್ಬಾರ್ ಸಮೋ (ಸಂಪಾಜೆ), ಪ್ರೊ. ಪವನ್, ಕಿರಣ್ ಕೆರೆಗಣೇಶ್ ಶೆಟ್ಟಿ (ಕನ್ನಡಿಕಟ್ಟೆ), ಸುರೇಶ್ ಶೆಟ್ಟಿ (ನಂದ್ರೊಳ್ಳಿಡಾ), ಮಹೇಶ್ ಸಾಣೂರು ಅಭಿನಯಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜೋಗೇಶ್ವರಿ-ದಹಿಸರ್ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ –
“ಮುಂಬಯಿಯ ತುಳು-ಕನ್ನಡಿಗರಿಗೆ ಯಕ್ಷಗಾನ ತಾಳಮದ್ದಳೆಯ ಸವಿಯನ್ನು ನೀಡುವುದು ನಮ್ಮ ಉದ್ದೇಶ. ಕರಾವಳಿ ಕರ್ನಾಟಕದ ಶ್ರೀಮಂತ ಕಲೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಸಂಕಲ್ಪದಿಂದಲೇ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಿರುವುದು ಸಂತೋಷಕರ. ಒಂದೇ ತಿಂಗಳಲ್ಲಿ ಎರಡು ತಾಳಮದ್ದಳೆ, ವೈದ್ಯಕೀಯ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡಿದ್ದೇವೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೋಗೇಶ್ವರಿ-ದಹಿಸರ್ ಸಮಿತಿಯ ಸದಸ್ಯರು, ಬಂಟರ ಸಂಘ ಮುಂಬಯಿಯ ಕಾರ್ಯಕರ್ತರು, ಕಲಾಭಿಮಾನಿಗಳು ಹಾಗೂ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಭಕ್ತಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




