ಜೋಗೆಶ್ವರಿ ಪೂರ್ವ ಇಲ್ಲಿ ನಡೆದ ದುರಂತದಲ್ಲಿ ಮಡಿದ ಸಂಸ್ಕೃತಿ ಅಮೀನ್ ಅವರ ಮನೆಗೆ ನಗರದ ಮೊಗವೀರ ಸಮಾಜದ ಪ್ರತಿಷ್ಠಿತ ಸಂಘಟನೆಗಳಾದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಗಣೇಶ್ ಕಾಂಚನ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್, ಅಧ್ಯಕ್ಷ ಸಂತೋಷ್ ಪುತ್ರನ್ ಮತ್ತಿತರ ಪದಾಧಿಕಾರಿಗಳು, ಮುಖಂಡರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಅವರ ಕಾನೂನು ಹೋರಾಟಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಶ್ರದ್ದಾ ಬಿಲ್ಡರ್ ನ ಮಾಲಕ ನ ಮೇಲೆ ಪೊಲೀಸ್ ಯಾವುದೇ ಕೇಸ್ ದಾಖಲಿಸದೇ ಮೀನಾಮೇಷ ಏಣಿಸುವುದರ ಬಗ್ಗೆ ಸಂಸ್ಕೃತಿ ಅಮೀನ್ ಅವರ ತಂದೆ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ.




