25 C
Mumbai
March 7, 2026
Mumbai News Kannada
ಸುದ್ದಿ

ನಾಸಿಕ್‌ನಲ್ಲಿ ಮುಂಬಯಿ ಕುಲಾಲ ಸಂಘದ ಕುಲಾಲ ಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ವಿತರಣೆ





ಮಂಗಳೂರಿನ ಕುಲಾಲ ಭವನ ಸಾರ್ವಜನಿಕರಿಗೆ ಸಹಕಾರಿಯಾಗಲಿ: ಜನಾರ್ದನ ಸಾಲಿಯಾನ್, ನಾಸಿಕ್.

​ಮುಂಬಯಿ ಕುಲಾಲ ಸಂಘದ ವತಿಯಿಂದ ಬಹುಕೋಟಿ ವೆಚ್ಚದಲ್ಲಿ ಮಂಗಳಾದೇವಿ ದೇವಸ್ಥಾನದ ಸಮೀಪ ನಿರ್ಮಾಣವಾಗಿರುವ ಕುಲಾಲ ಭವನದ ಉದ್ಘಾಟನೆಯು ನವೆಂಬರ್ 23, 2025ರಂದು ನಡೆಯಲಿದೆ. ಈ ಪ್ರಯುಕ್ತ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮವು ಅಕ್ಟೋಬರ್ 28, 2025ರಂದು ನಾಸಿಕ್‌ನ ಹೋಟೆಲ್ ತಪಸ್ವಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜರುಗಿತು.

​ಈ ಕಾರ್ಯಕ್ರಮವು ಸಂಘದ ಗೌರವ ಅಧ್ಯಕ್ಷರಾದ ದೇವದಾಸ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಡಿ.ಐ. ಮೂಲ್ಯ, ಬಿಲ್ಡಿಂಗ್ ಕಮಿಟಿ ಕಾರ್ಯಾಧ್ಯಕ್ಷರಾದ ಗಿರೀಶ್ ಸಾಲಿಯಾನ್ ಬಂಟ್ವಾಳ, ಉಪ ಕಾರ್ಯಾಧ್ಯಕ್ಷರಾದ ಸುನಿಲ್ ಸಾಲಿಯಾನ್, ಕಮಿಟಿ ಸದಸ್ಯರಾದ ರಘು ಆರ್. ಮೂಲ್ಯ ಹಾಗೂ ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಉಮೇಶ್ ಬಂಗೇರ ಅವರು ಅತಿಥಿ ಗಣ್ಯರಾಗಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

​ಕುಲಾಲ ಒಕ್ಕೂಟ ನಾಸಿಕ್ ಇದರ ಅಧ್ಯಕ್ಷರಾದ ಜನಾರ್ದನ ಸಾಲಿಯಾನ್ ಅವರು, ಉದಾರ ದಾನಿಗಳಾದ ತಪಸ್ವಿ ಹೋಟೆಲ್ ಮಾಲೀಕರಾದ ಸಂಜೀವ್ ಕೆ. ಬಂಗೇರ ಮತ್ತು ಅವರ ಧರ್ಮಪತ್ನಿ ಕಲ್ಪನಾ ಎಸ್. ಬಂಗೇರ ಹಾಗೂ ಮಹಾದಾನಿಗಳಾದ ನಂದ ಟೆಕ್ಸ್‌ಟೈಲ್ಸ್ ಮಾಲೀಕರಾದ ರಮಾನಂದ ಬಂಗೇರ ಅವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವದಾಸ್ ಕುಲಾಲ್ ಅವರು ಪ್ರಸ್ತಾವಿಕ ಭಾಷಣದಲ್ಲಿ ಮಾತನಾಡಿ, “ಎಲ್ಲರ ಸಹಕಾರದಿಂದ ಮಂಗಳಾದೇವಿ ದೇವಸ್ಥಾನದ ಸಮೀಪ ಭವ್ಯ ಭವನ ನಿರ್ಮಾಣವಾಗುತ್ತಿದೆ. ಇದಕ್ಕೆ ನಮ್ಮ ನಾಸಿಕ್ ವಲಯದ ಕುಲಾಲ ಬಾಂಧವರ ಸಹಕಾರ ದೊರೆತಿದೆ ಮತ್ತು ಮುಂದೆ ಸಹ ನಿಮ್ಮ ಸಹಕಾರ ಸಿಗಲಿದೆ. ನಾಸಿಕ್ ವಲಯದ ಊವಯ್ಯ ಬಂಗೇರ ಮತ್ತು ಟಿ.ಎಸ್. ರಾಮಚಂದ್ರ ಅವರ ಅಮೂಲ್ಯ ದೇಣಿಗೆ ಕೊಡುಗೆಯನ್ನು ಸ್ಮರಿಸಲಾಗಿದ್ದು, ಅವರ ನೆನಪು ನಮ್ಮ ಕುಲಾಲ ಬಾಂಧವರಲ್ಲಿ ಸದಾ ಅಚ್ಚಳಿಯದೆ ಉಳಿಯುವುದು. ನೀವು ನಿಮ್ಮ ಸದಸ್ಯ ಪರಿವಾರದೊಂದಿಗೆ ನವೆಂಬರ್ 21, 22, 23, 2025ರಂದು ವಿಜೃಂಭಣೆಯಿಂದ ನಡೆಯುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ವಿನಂತಿಸಿದರು.

​ದಾನಿಗಳಾದ ನಾಸಿಕ್ ತುಳು ಕೂಟದ ಮಾಜಿ ಅಧ್ಯಕ್ಷ ಸಂಜೀವ್ ಬಂಗೇರ ಮತ್ತು ರಮಾನಂದ ಬಂಗೇರ ಅವರು ಮಾತನಾಡಿ, “ಮಂಗಳೂರಿನಲ್ಲಿ ಲೋಕಾರ್ಪಣೆಯಾಗಲಿರುವ ಈ ಭವ್ಯ ಭವನಕ್ಕೆ ನಮ್ಮ ನಾಸಿಕ್ ವಲಯದಿಂದ ನಮ್ಮವರಿಗಾಗಿ ಮಾಡಿರುವ ಬಹು-ವೆಚ್ಚದ ನಿರ್ಮಾಣಕ್ಕೆ ಮೊದಲಿನಿಂದಲೂ ನಮ್ಮ ಸಹಕಾರವಿತ್ತು. ಇನ್ನು ಸಹ ನಾವು ನಮ್ಮ ತನು, ಮನ, ಜನ, ಬಲದಿಂದ ಕುಲಾಲ ಸಂಘಕ್ಕೆ ಸಹಕಾರ ಕೊಡುತ್ತೇವೆ. ನಮ್ಮ ಮಂಗಳೂರಿನಲ್ಲಿ ನಡೆಯುವ ಈ ಕಾರ್ಯಕ್ರಮವು ಶ್ರೀ ವೀರನಾರಾಯಣ ದೇವರ ದಯೆಯಿಂದ ಯಾವುದೇ ವಿಘ್ನಗಳು ಬಾರದೆ ನಿರ್ವಿಘ್ನವಾಗಿ ನಡೆಯಲಿ” ಎಂದು ಶುಭ ಹಾರೈಸಿದರು.

​ನಾಸಿಕ್ ಕುಲಾಲ ಒಕ್ಕೂಟದ ಅಧ್ಯಕ್ಷರಾದ ಜನಾರ್ದನ ಸಾಲಿಯಾನ್ ಅವರು ಮಾತನಾಡಿ, “ಮಂಗಳಾದೇವಿ ದೇವಸ್ಥಾನದ ಸಮೀಪದ ನಮ್ಮ ಈ ಕುಲಾಲ ಭವನವು ನಮ್ಮ ಜಾತಿ ಬಾಂಧವರಿಗೆ ಹೆಮ್ಮೆಯ ವಿಷಯ. ಇದಕ್ಕೆ ನಮ್ಮ ವಲಯದ ಎಲ್ಲರ ಸಹಕಾರವಿದೆ. ನಮ್ಮ ಈ ಕಾರ್ಯಕ್ರಮವು ದೇವರ ದಯೆಯಿಂದ ಯಶಸ್ವಿಯಾಗಿ ನಡೆಯಲಿ” ಎಂದು ಶುಭ ಹಾರೈಸಿದರು. ಅಲ್ಲದೆ, “ನಾಸಿಕ್ ವಲಯದ ದಾನಿ ಹಾಗೂ ದೊಡ್ಡ ಉದ್ಯಮಿಗಳಾದ ಸಂಜೀವ್ ಕೆ. ಬಂಗೇರ, ರಮಾನಂದ ಬಂಗೇರ, ಮತ್ತು ಗಣೇಶ್ ಬಂಗೇರ ಅವರು ದೊಡ್ಡ ಮೊತ್ತದ ದೇಣಿಗೆ ಕೊಟ್ಟು ಸಹಕರಿಸಿದ್ದಾರೆ, ಇವರಿಗೆ ಅಭಿನಂದನೆಗಳು” ಎಂದು ಹೇಳಿದರು.

ಸುನಿಲ್ ರಾಜು ಸಾಲಿಯಾನ್ ಅವರು ಮಾತನಾಡಿ, “ನಮ್ಮ ಜಾತಿ ಬಾಂಧವರು ಎಲ್ಲಿ ಯಾವ ಊರಿನಲ್ಲಿದ್ದರೂ ನಮ್ಮ ಊರಿನ ಸಂಸ್ಕಾರ-ಸಂಸ್ಕೃತಿಯನ್ನು ಬಿಟ್ಟುಕೊಡದವರು. ಎಲ್ಲಿದ್ದರೂ ನಮ್ಮ ಜಾತಿ ಬಾಂಧವರು ಒಗ್ಗಟ್ಟಾಗಿ ಇರಲು ಪ್ರೇರೇಪಿಸುವವರು ನಮ್ಮ ಕುಲಾಲ ಬಾಂಧವರು. ಪುಣೆ ಮತ್ತು ನಾಸಿಕ್ ವಲಯದ ದೊಡ್ಡ ದೊಡ್ಡ ಉದ್ಯಮಿ ದಾನಿಗಳಿಂದ ನೆರವು ಸಿಕ್ಕಿದೆ. ನಮ್ಮವರೇ ನಮ್ಮ ದಾನಿಗಳು, ಇನ್ನು ಸಹ ನಿಮ್ಮವರಿಂದ ಸಹಾಯ ಸಿಗಬಹುದು. ಇದು ನಮ್ಮ ಮುಂದಿನ ಪೀಳಿಗೆಗೆ ಮತ್ತು ಅವಶ್ಯಕತೆ ಇರುವವರಿಗೆ ದೊಡ್ಡ ವರದಾನವಾಗಲಿದೆ. ನವೆಂಬರ್ 23ರಂದು ನಡೆಯುವ ನಮ್ಮ ಭವನದ ಕಾರ್ಯಕ್ರಮಕ್ಕೆ ನೀವೆಲ್ಲರೂ ಬಂದು ಒಗ್ಗಟ್ಟು ಮತ್ತು ಒಮ್ಮತವನ್ನು ತೋರಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ವಿನಂತಿಸಿದರು.

ಗಿರೀಶ್ ಬಿ. ಸಾಲಿಯಾನ್ ಬಂಟ್ವಾಳ ಅವರು ಮಾತನಾಡಿ, “ನಾವು ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದರೂ, ನಮಗೆ ಇಂತಹ ಭವ್ಯ ಭವನವನ್ನು ನಕ್ಷತ್ರದಂತೆ ಮಿನುಗುವಂತೆ ಮಾಡಿ ತೋರಿಸಲು ಬಹಳ ಕಷ್ಟವಾಯಿತು. ಆದರೂ ನಮ್ಮ ಧನಬಲ ಮತ್ತು ಜನಬಲದಿಂದ ಅದು ಈಗ ಸಾಧ್ಯವಾಯಿತು. ದೇಶದ ಮೂಲೆ ಮೂಲೆಯಲ್ಲಿದ್ದ ನಮ್ಮ ಬಂಧುಬಾಂಧವರ ಹಾಗೂ ದಾನಿಗಳ ಸಹಾಯದಿಂದ ಬಹು-ವೆಚ್ಚದ ಭವನ ಲೋಕಾರ್ಪಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಅತಿ ವೇಗದಲ್ಲಿ ಕೆಲಸ ಆಗುತ್ತಿದೆ. ಇದು ದೇವರ ದಯೆ ಮತ್ತು ನಿಮ್ಮೆಲ್ಲರ ಸಹಕಾರದಿಂದಾಗಿ ನೋಡುವ ಭಾಗ್ಯ ನಮಗೆ ಸಿಕ್ಕಿದೆ. ಇಂತಹ ಅವಕಾಶ ಯಾವಾಗಲೂ ಸಿಗುವುದಿಲ್ಲ, ಇದರ ಉಪಯೋಗವನ್ನು ನೀವೂ ಪಡೆದು ಆದಷ್ಟು ನಮ್ಮ ನಾಸಿಕ್ ಪರಿಸರದ ಜನರು ಉಪಸ್ಥಿತರಿದ್ದು ನಿಮ್ಮ ಇರುವಿಕೆಯನ್ನು ತೋರಿಸಬೇಕು” ಎಂದು ವಿನಂತಿಸಿದರು.

​ಈ ಸಂದರ್ಭದಲ್ಲಿ ದಾನಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

​ನಾಸಿಕ್‌ನ ಸುರೇಖಾ ಗಣೇಶ್ ಬಂಗೇರ, ಮುಂಬಯಿ ಸಂಘದ ಸುಂದರ್ ಎನ್. ಮೂಲ್ಯ, ದೇವಕಿ ಸುನಿಲ್ ಸಾಲಿಯಾನ್, ಮತ್ತು ರಮೇಶ್ ಬಂಜನ್ ಉಪಸ್ಥಿತರಿದ್ದರು.

​ಕಾರ್ಯಕ್ರಮದ ನಿರೂಪಣೆ, ಗೌರವಾರ್ಪಣೆ, ಮತ್ತು ಧನ್ಯವಾದ ಸಮರ್ಪಣೆಯನ್ನು ದಿನೇಶ್ ಕುಲಾಲ್ ಅವರು ನೆರವೇರಿಸಿದರು.



Related posts

ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಗೆ ಬೆಂಕಿ – 20 ಪ್ರಯಾಣಿಕರು ಸಜೀವ ದಹನ

Mumbai News Desk

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ, 20ಕ್ಕೂ ಹೆಚ್ಚು ಜನರಿಗೆ ಗಾಯ, 11 ಸಾವು

Mumbai News Desk

ರಂಗಚಾವಡಿ” ವರ್ಷದ ಹಬ್ಬ, ಹಿರಿಯ ರಂಗಕರ್ಮಿ ಲಯನ್ ಕಿಶೋರ್ ಡಿ.ಶೆಟ್ಟಿ ಅವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ* 

Mumbai News Desk

ತುಳುವ ಸಿರಿ ಕಲಾವಿದೆರ್ ನಂದಳಿಕೆ ನಾಟಕ ತಂಡ – “ಆಯೆ ಮನಿಪುಜೆ” ವರ್ಷದ ನೂತನ ತುಳು ನಾಟಕದ ಶೀರ್ಷಿಕೆ ಬಿಡುಗಡೆ.

Mumbai News Desk

ಮುಲ್ಕಿ ವಿಜಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಮಿನಾ ಆಳ್ವ ಆಯ್ಕೆ 

Mumbai News Desk

ಮುಲ್ಕಿ ಬಪ್ಪನಾಡು ಕ್ಷೇತ್ರದ ಅನುವಂಶೀಯ ಮೊಕ್ತೇಸರ ಎಸ್. ಎಸ್. ಮನೋಹರ ಶೆಟ್ಟಿ ನಿಧನ.

Mumbai News Desk