32 C
Mumbai
March 7, 2026
Mumbai News Kannada
ಪ್ರಕಟಣೆ

ಮದರ್ ಇಂಡಿಯಾದ 19th east ಬಾಂಬೆ ಸ್ಕೌಟ್ ಮಿತ್ರರ ಮತ್ತು ಮದರ್ ಇಂಡಿಯಾ ಹಳೆ ವಿದ್ಯಾರ್ಥಿ ಫೌಂಡೇಶನ್ ನ ಜಂಟಿ ಆಶ್ರಯದಲ್ಲಿ ನವೆಂಬರ್ 15 ಮತ್ತು 16 ರಂದು ಫಾರ್ಮ್ ರಿಜೆನ್ಸಿಯಲ್ಲಿ 6 ನೇ ವರ್ಷದ ಗುರುವಂದನಾ ಕಾರ್ಯಕ್ರಮ.





ಬರಹ: ಜಯ ಸಿ ಪೂಜಾರಿ

ಫೋರ್ಟ್ ಪರಿಸರದ ಮದರ್ ಇಂಡಿಯಾದ 19th ಈಸ್ಟ್ ಬಾಂಬೆ ಸ್ಕೌಟ್ ಮಿತ್ರರ ಮತ್ತು ಶಾಲೆಯ ಹಳೆ ವಿದ್ಯಾರ್ಥಿ ಫೌಂಡೇಶನ್ ಜಂಟಿ ಆಶ್ರಯದಲ್ಲಿ ನವೆಂಬರ್ 15 / 11/ 2025 ಶನಿವಾರ ಮತ್ತು 16/11/2025 ಆದಿತ್ಯವಾರ ಬೊರಿವಲಿ ಪಶ್ಚಿಮದ ಫಾರ್ಮ್ ರಿಜೆನ್ಸಿಯಲ್ಲಿ 6 ನೇ ವರ್ಷದ ಎರಡು ದಿನದ ಸ್ಕೌಟ್ ಶಿಬಿರದೊಂದಿಗೆ ಗುರುವಂದನಾ ಕಾರ್ಯಕ್ರಮವು ಶಾಲೆಯ ಸ್ಕೌಟ್ ಶಿಕ್ಷಕರಾದ ರಾಮದಾಸ್ ಎಚ್ ನಾಯ್ಕ್ ರವರ ನೇತೃತ್ವದಲ್ಲಿ ಜರಗಲಿರುವುದು.
ಈ ಕಾರ್ಯಕ್ರಮದ ಶಿಬಿರದ ಉದ್ಘಾಟನೆಯನ್ನು ತಾರೀಕು 15 ರಂದು ಶನಿವಾರ ಸಂಜೆ 7 ಗಂಟೆಗೆ ಮದರ್ ಇಂಡಿಯಾ ಶಾಲೆಯ ಹಳೆ ವಿದ್ಯಾರ್ಥಿ ಫೌಂಡೇಶನ್ ನ ಅಧ್ಯಕ್ಷ ಹಾಗೂ ಶಾಲೆಯ ಪ್ರಶಿಡೆಂಟ್ ಸ್ಕೌಟ್ ಆಗಿರುವ ಸುರೇಂದ್ರ ಎ ಪೂಜಾರಿಯವರು ಉದ್ಘಾಟಿಸಲಿರುವರು.
ಮಾರನೇ ದಿನ ಆದಿತ್ಯವಾರ ಅಪರಾನ್ಹ 2 ಗಂಟೆಗೆ ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಯಾಗಿ ಗ್ರೀನ್ ಇಂಡಿಯಾದ ಮೋಹನ್ ಬಾಬು ಭಂಡಾರಿ, ಗೌರವ ಅತಿಥಿಗಳಾಗಿ ಕೆನರಾ ವಿದ್ಯಾದಾಯನಿ ಕನ್ನಡ ರಾತ್ರಿ ಶಾಲೆಯ ಸ್ಕೌಟ್ ಶಿಕ್ಷಕ ಹಾಗೂ ಈಸ್ಟ್ ಬಾಂಬೆ ಸ್ಕೌಟ್ ಅಶೋಸಿಯೇಷನ್ ನ ಮಾಜಿ ಸ್ಕೌಟ್ ಕಮಿಷ್ನರ್ ಗೋಪಾಲ್ ಆರ್ ಕಾಂಚನ್, ಬಾಂಬೆ ಫೋರ್ಟ್ ಕನ್ನಡ ರಾತ್ರಿ ಶಾಲೆಯ ಸ್ಕೌಟ್ ಶಿಕ್ಷಕ ಕೃಷ್ಣ ಪೂಜಾರಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮಾಜಿ ಅಧ್ಯಕ್ಷ ಉದ್ಯಮಿ ಗೋಪಾಲ್ ಎಸ್ ಪುತ್ರನ್, ಶಾಲೆಯ ಹಳೆ ವಿದ್ಯಾರ್ಥಿಗಳಾದ ಉದ್ಯಮಿ (ಬಿ ಸಿ ಸಿ ಐ) ಇದರ ಚೆಯರ್ ಮ್ಯಾನ್ ಎನ್ ಟಿ ಪೂಜಾರಿ, ಶಾಲೆಯ ಫೌಂಡೇಶನ್ ಉಪಾಧ್ಯಕ್ಷ ಉದ್ಯಮಿ ಸಂತೋಷ್ ಶೆಟ್ಟಿ (ಸಾನ್ವಿ ಸ್ಟಾರ್), ಅಲ್ಲದೆ ಶಾಲೆಯ ಹಳೆ ವಿದ್ಯಾರ್ಥಿ ಫೌಂಡೇಶನ್ ನ ಕಾರ್ಯದರ್ಶಿ ಹರೀಶ್ ಮೈಂದನ್ ಕೋಶಾಧಿಕಾರಿ ಟಿ ವಿ ಪೂಜಾರಿ ಇತರ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿಗಳು ಆಗಮಿಸಲಿರುವರು.
ಈ ಕಾರ್ಯಕ್ರಮದ ಆರಂಬದ ದಿನದಲ್ಲಿ ಅನೇಕ ಸ್ಕೌಟ್ ಬ್ಯಾಜಗಳನ್ನು ಮಾಡಿದ ಸಾಧಕರಾದ ಜಯರಾಮ್ ಪಿ ಪೂಜಾರಿ( ಕಲ್ಯಾಣ್), ವಿಜಯ ಆರ್ ಭಂಡಾರಿ (ಮೀರಾರೋಡ್), ಮಂಜುನಾಥ್ ಎಮ್ ದೇವಾಡಿಗ (ಅಂದೇರಿ), ರಘು ಎನ್ ಪೂಜಾರಿ (ನೇಪಾನ್ಸಿ ರೋಡ್) ಸತೀಶ್ ಒ ದೇವಾಡಿಗ (ಚೆoಬೋರ್) ಸತೀಶ್ ಬೆಲ್ಚಡ (ಡೊಂಬಿವಲಿ) ಇವರನ್ನು ಸನ್ಮಾನಿಸಲಾಗುವುದು. ಮಾರನೇ ದಿನ ಆದಿತ್ಯವಾರ ಗಣ್ಯರೆಲ್ಲರ ಸಮ್ಮುಖದಲ್ಲಿ ಭಾರತದ ಗಡಿ ಪ್ರದೇಶವನ್ನು ಕಾಯುವ ದೇಶ ರಕ್ಷಕ ಯೋಧ ಶಾಲೆಯ ಸ್ಕೌಟ್ ಹಳೆ ವಿದ್ಯಾರ್ಥಿ ಯಾದ ಶ್ರೀನಾಥ್ ಡಿ ನಾಯ್ಕ್ ರವರನ್ನು ಸನ್ಮಾನಿಸುವುದು ಮತ್ತು ಈ ಸಂಧರ್ಭದಲ್ಲಿ ಭಾರತದ ಸ್ಕೌಟ್ ಪ್ರದಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಸ್ಕೌಟ್ ಕಮಿಷ್ನರ್ ಆದ ಪಿ ಜಿ ಆರ್ ಶಿಂದಿಯರವರು ಕಳೆದ ವರ್ಷ ಕುಂದಾಪುರದ ಬಸ್ರುರು ಸ್ಕೌಟ್ ಶಿಬಿರದ ತವರೂರ ಕಾಣಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮದರ್ ಇಂಡಿಯಾ ಶಾಲೆಯ ಸ್ಕೌಟ್ ಗಳಿಗೆಲ್ಲರಿಗೆ ಸರ್ಟಿಫಿಕೇಟ್ ಕಳುಹಿಸಿದ ಸರ್ಟಿಫಿಕೇಟ್ ನ್ನು ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ

ಜಯ ಸಿ ಪೂಜಾರಿ
ಕೆಳಾರ್ಕಳ ಬೆಟ್ಟು.



Related posts

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು : ಮೇ. 8ರಂದು “ಕಚ್ಚೂರು ಶ್ರೀ ನಾಗೇಶ್ವರ ಉತ್ಸವ”

Mumbai News Desk

ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಆಗಸ್ಟ್ 10ರಂದು ‘ಪ್ರತಿಭಾ ಪುರಸ್ಕಾರ’, “ಆಟಿಡೊಂಜಿ ದಿನ”

Mumbai News Desk

ಎ. 13ರಂದು ಮಾಡೂರು ಶ್ರೀ ಪಾಡಾಂಗರ ಭಗವತಿ ಕ್ಷೇತ್ರದಲ್ಲಿ ಕುಮಾರ್ ಬಂಗೇರ ಮತ್ತು ಮನೆಯವರಿಂದ ಹರಕೆಯ ಕೋಲ

Mumbai News Desk

ಫೆ. 02 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತದಾನ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ

Mumbai News Desk

ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ದೀಪಾವಳಿ ಸಾಹಿತ್ಯ ಸ್ಪರ್ಧೆ 2024 : ಸಣ್ಣ ಕಥೆ ಮತ್ತು ಲೇಖನಗಳ ಸ್ಪರ್ಧೆ

Mumbai News Desk

ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆ ನಾಲಸೋಪಾರ : ಜ. 4ರಂದು 30ನೇ ವರ್ಷದ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk