
ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘದ ಸಂಯುಕ್ತ ಆಶ್ರಯದಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 29-11-2025, ಶನಿವಾರದಂದು, ಅಪರಾಹ್ನ 2.30 ರಿಂದ, ಸಾಂತಾಕ್ರೂಜ್ ಪೂರ್ವದಲ್ಲಿರುವ ಕಲೀನಾ ಕ್ಯಾಂಪಸ್‌ನ ಜೆ.ಪಿ.ನಾಯಕ್ ಭವನದಲ್ಲಿ ಈ ಸಮಾರಂಭ ನಡೆಯಲಿದೆ.
ಸಮಾರಂಭದಲ್ಲಿ ಲೇಖಕ ಶ್ರೀನಿವಾಸ ಜೋಕಟ್ಟೆ ಅವರ ಮೂರು ಕೃತಿಗಳು ಮತ್ತು ಅನಿತಾ ಪಿ. ತಾಕೊಡೆ ಅವರ ಒಂದು ಕೃತಿ ಲೋಕಾರ್ಪಣೆಗೊಳ್ಳಲಿವೆ.
ಬಿಡುಗಡೆಗೊಳ್ಳಲಿರುವ ಕೃತಿಗಳ ವಿವರ:
- “ಅದೆಲ್ಲಾ ಬಿಟ್ಟು” (ಕತೆಗಳು – ಸಾಹಿತ್ಯ ಸುಗ್ಗಿ ಪ್ರಕಾಶನ, ಬೆಂಗಳೂರು) – ಶ್ರೀನಿವಾಸ ಜೋಕಟ್ಟೆ
- “ಪ್ರಚಂಡ ಮತ್ತು ಮಹಾಕಾಲ” (ಲೇಖನಗಳು) – ಶ್ರೀನಿವಾಸ ಜೋಕಟ್ಟೆ
- “ಬದುಕು ಬತ್ತದ ಭರವಸೆ” (ಲೇಖನಗಳು – ಶ್ರೀರಾಮ ಪ್ರಕಾಶನ, ಮಂಡ್ಯ) – ಶ್ರೀನಿವಾಸ ಜೋಕಟ್ಟೆ
- “ಮೇಣಕ್ಕಂಟಿದ ಬತ್ತಿ” (ತಾಕೊಡೆ ಎಂಟರ್ ಪ್ರೈಸಸ್, ಮುಂಬಯಿ) – ಅನಿತಾ ಪಿ. ತಾಕೊಡೆ (ಈ ಕೃತಿಯು ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ವಿಜೇತವಾಗಿದೆ.)

ಕಾರ್ಯಕ್ರಮದ ವಿವರ:
- ಅಧ್ಯಕ್ಷತೆ: ಡಾ. ಜಿ.ಎನ್. ಉಪಾಧ್ಯ (ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥರು)
- ಕೃತಿಗಳ ಬಿಡುಗಡೆ:
- ಸೂರ್ಯಕಾಂತ್ ಜಯ ಸುವರ್ಣ (ಕಾರ್ಯಾಧ್ಯಕ್ಷರು: ಭಾರತ್ ಬ್ಯಾಂಕ್, ಅಧ್ಯಕ್ಷರು: ರಾಷ್ಟ್ರೀಯ ಬಿಲ್ಲವ ಮಹಾಮಂಡಲ)
- ಮಿತ್ರಾ ವೆಂಕಟ್ರಾಜ್ (ಪ್ರಶಸ್ತಿ ಪುರಸ್ಕೃತ ಕತೆಗಾರರು, ಕಾದಂಬರಿಕಾರರು)
- ವಿಕ್ರಾಂತ್ ಎಸ್. ಉರ್ವಲ್ (ಆಡಳಿತ ನಿರ್ದೇಶಕರು: ಐಐಟಿಸಿ ಮುಂಬಯಿ)
- ಕೃತಿಗಳ ಪರಿಚಯ:
- ಡಾ| ದಿನೇಶ್ ಶೆಟ್ಟಿ ರೆಂಜಾಳ (ಪತ್ರಕರ್ತರು, ಉದಯವಾಣಿ – ಮುಂಬಯಿ)
- ಅಮಿತಾ ಭಾಗ್ವತ್ (ಸಾಹಿತಿ, ‘ಹವ್ಯಕ ಸಂದೇಶ’ದ ಮಾಜಿ ಸಂಪಾದಕರು)
- ಪ್ರಾಸ್ತಾವಿಕ: ಸರಿತಾ ಸುರೇಶ ನಾಯಕ್ (ಉಪಾಧ್ಯಕ್ಷರು: ಗೋರೆಗಾಂವ್ ಕರ್ನಾಟಕ ಸಂಘ)
- ಕಾರ್ಯಕ್ರಮ ನಿರ್ವಹಣೆ: ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ (ಸಹಪ್ರಾಧ್ಯಾಪಕರು, ಕನ್ನಡ ವಿಭಾಗ ಮುಂಬಯಿ ವಿ.ವಿ.)
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘದ ಪದಾಧಿಕಾರಿಗಳು ಎಲ್ಲಾ ಪುಸ್ತಕ ಪ್ರೇಮಿಗಳಿಗೆ ಈ ಸಮಾರಂಭಕ್ಕೆ ಹಾರ್ದಿಕ ಸ್ವಾಗತವನ್ನು ಕೋರಿದ್ದಾರೆ.




