32 C
Mumbai
March 7, 2026
Mumbai News Kannada
ಪ್ರಕಟಣೆ

ಡಿ. 19ರಂದು ದಹಿಸರ್‌ನಲ್ಲಿ 19ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ





ಮುಂಬಯಿ, ಡಿ. 17: ದಹಿಸರ್ ಪೂರ್ವದ ಜಯಸ್ವಾಮಿ ಅತ್ತೂರು ಗುಂಡ್ಯಡ್ಕ ಅವರ ಆಯೋಜನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 19ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆಯು ಇದೇ ಬರುವ ಡಿಸೆಂಬರ್ 19, ಶುಕ್ರವಾರದಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

​ದಹಿಸರ್ ಪೂರ್ವದ ರಾವಲ್ಪಾಡದಲ್ಲಿರುವ ಸೇಂಟ್ ಥಾಮಸ್ ಸ್ಕೂಲ್ ಸಮೀಪದ ರಾಧಾಕೃಷ್ಣ ಮಂದಿರ ಸಭಾಂಗಣದಲ್ಲಿ ಈ ಧಾರ್ಮಿಕ ಕಾರ್ಯಕ್ರಮವು ಅಂಧೇರಿಯ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ವಿವರಗಳು:

  • ಬೆಳಿಗ್ಗೆ 5.30: ಮಹಾಗಣಪತಿ ಹೋಮ.
  • ಬೆಳಿಗ್ಗೆ 7.30: ಪ್ರಾಣಪ್ರತಿಷ್ಠೆ ಪೂಜೆ ಮತ್ತು ಅರ್ಚನೆ.
  • ಬೆಳಿಗ್ಗೆ 8.00 ರಿಂದ 9.00: ಕೇರಳ ಗ್ರೂಪ್ ತಂಡದವರಿಂದ ‘ನಾರಾಯಣೀಯಂ’ ಪಾರಾಯಣ.
  • ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.30: ಶ್ರೀ ದುರ್ಗಾಪರಮೇಶ್ವರಿ – ಶನೀಶ್ವರ ದೇವಸ್ಥಾನ (ರಾವಲ್ಪಾಡ, ದಹಿಸರ್ ಪೂರ್ವ) ಇವರಿಂದ ಭಜನಾ ಕಾರ್ಯಕ್ರಮ.
  • ಮಧ್ಯಾಹ್ನ 12.30 ರಿಂದ 1.00: ದೀಪಾರಾಧನೆ ಮತ್ತು ಮಹಾಪೂಜೆ.
  • ಮಧ್ಯಾಹ್ನ 1.00 ರಿಂದ 3.00: ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ.

​ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕರು ಹಾಗೂ ಆಯೋಜಕರಾದ ಶ್ರೀ ಜಯಸ್ವಾಮಿ ಅತ್ತೂರು ಗುಂಡ್ಯಡ್ಕ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9902581150



Related posts

ಮಾ.8. ಶ್ರೀ ಕ್ಷೇತ್ರ ಶಂಕರಪುರದಲ್ಲಿ ಮಹಾಶಿವರಾತ್ರಿ ಆಚರಣೆ

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬಯಿ : ಅಂಧೇರಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಜ. 31ಕ್ಕೆ ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮುಂಬೈ ಭೇಟಿಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ. 

Mumbai News Desk

ಇಂದು :ನ್ಯೂ ಪನ್ವೇಲ್ ನ ಶ್ರೀ ಜೈ ಅಂಬೇ ಮಾತಾ ಮಂದಿರ ದ ಲ್ಲಿ ಶ್ರೀ ರಾಮ ಮಹೋತ್ಸವ ಕಾರ್ಯಕ್ರಮ.

Mumbai News Desk

ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಅಸಲ್ಪ :ಜ. 18ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಪರಿವಾರ ದೇವತೆಗಳಿಗೆ ದೀಪಾರಾಧನೆ.

Mumbai News Desk

   ನ. 19 ;   ಕುಲಾಲ ಸಂಘ ಮುಂಬಯಿ  93ನೇ ವಾರ್ಷಿಕ ಮಹಾಸಭೆ.

Mumbai News Desk