
ಮುಂಬಯಿ : ಆಸ್ಟ್ರೇಲಿಯಾದ ರೋಯಲ್ ಮೆಲ್ ಬೋರ್ನ ಇನ್ಸ್ಟಿಟ್ಯೂಟ್ ಅಫ್ ಟೆಕ್ನೋಲಜಿಯಿಂದ ಮಾಷ್ಟರ್ ಅಫ್ ಅರ್ಬನ್ ಆಂಡ್ ಎನ್ವಯರ್ ಮೆಂಟ್ ಪರೀಕ್ಷೆಯಲ್ಲಿ (ನಗರ ಯೋಜನೆ ಮತ್ತು ಪರಿಸರ) ಸಾಕ್ಷಿ ಚಂದ್ರಹಾಸ ಬೆಳ್ಚಡ ಇವರು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ. ಬೊರಿವಲಿ ಪಶ್ಚಿಮದ ಸೇಂಟ್ ಲಾರೆನ್ಸ್ ಶಾಲೆಯಲ್ಲಿ ಎಸ್ಎಸ್ಸಿ, ಕಾಂದಿವಲಿ ಪಶ್ಚಿಮದ ಟಿ.ಪಿ. ಬಾಟಿಯಾ ಕಾಲೇಜುನಲ್ಲಿ ಎಚ್. ಎಸ್. ಸಿ. ಮುಗಿಸಿ ಪುಣೆಯ ತಲೆಗಾಂವ್ನ ಡಾ. ಡಿ.ವೈ. ಪಾಟೀಲ್ ಕಾಲೇಜ್ ಆಫ್ ಆರ್ಕಿಟೆಕ್ಚರ್ನಲ್ಲಿ ಆರ್ಕಿಟೆಕ್ಚರ್ ಪದವಿ ನಂತರ ಆಸ್ಟ್ರೇಲಿಯಾದ ಮೆಲ್ಬೋರ್ನ್ನ RMIT ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದಿರುವರು.
ಇವರು ಬೊರಿವಲಿ ಪಶ್ಚಿಮ ನಿವಾಸಿ, ಜನಪ್ರಿಯ ರಂಗ ನಟ ಚಂದ್ರಹಾಸ ಬೆಳ್ಚಡ ದಂಪತಿಯ ಸುಪುತ್ರಿ.




