32 C
Mumbai
March 7, 2026
Mumbai News Kannada
ಸುದ್ದಿ

ಬಜೆ ಮೊಗವೀರ ಸುವರ್ಣ ಆದಿ ಮೂಲಸ್ಥಾನ, ಮುಂಬಾಯಿ ಶಾಖೆಯ 100ನೇ ಮಹಾಸಭೆ





ಶತಮಾನೋತ್ಸವದ ಆಚರಣೆ ಸ್ಮರಣೀಯಗೊಳಿಸೋಣ – ಗೋವರ್ಧನ್ ಸುವರ್ಣ
ಮುಂಬಾಯಿ : ಬಜೆ ಮೊಗವೀರ ಸುವರ್ಣ ಮೂಲಸ್ಥಾನ ಸಭಾ (ರಿ ) ಮುಂಬಾಯಿ ಇದರ 100ನೇ ವಾರ್ಷಿಕ ಮಹಾ ಸಭೆಯು ರವಿವಾರ ಡಿ. 21ರಂದು ಅಂಧೇರಿಯ ಮೊಗವೀರ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಸಭಾದ ಅಧ್ಯಕ್ಷರಾದ ಗೋವರ್ಧನ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಭೆಯಲ್ಲಿ 2026,2027 ಮತ್ತು 2028 ಈ ಮೂರು ವರ್ಷಗಳ ಹೊಸ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಉದ್ಯಾವರ ಗೋವರ್ಧನ್ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ಒಡೆಯರಬೆಟ್ಟು ಅಶೋಕ್ ಸುವರ್ಣ, ಕೋಶಾಧಿಕಾರಿಯಾಗಿ ಕೈಪುಂಜಾಲ್ ಧನರಾಜ್ ಕುಂದರ್, ಉಪಾಧ್ಯಕ್ಷರಾಗಿ ಪಲಿಮಾರು ಗಂಗಾಧರ್ ಎನ್. ಸುವರ್ಣ, ಮುಳೂರು ಗಿರಿಧರ್ ಸುವರ್ಣ, ಪಲಿಮಾರು ಹರಿಶ್ಚಂದ್ರ ಕಾಂಚನ್ ಮತ್ತು ಕಾಪು ಇಂದಿರಾ ವಿ. ಮೆಂಡನ್, ಜತೆ ಕಾರ್ಯದರ್ಶಿಯಾಗಿ ಪಲಿಮಾರು ಸದಾಶಿವ ಎನ್. ಸುವರ್ಣ, ಜತೆ ಕೋಶಾಧಿಕಾರಿಯಾಗಿ ವಾಮನ್ ಎನ್. ಸುವರ್ಣ ಸಮಿತಿ ಸದಸ್ಯರಾಗಿ ಎಚ್. ಕೆ. ಸುವರ್ಣ, ಸದಾನಂದ ಎಲ್. ಸುವರ್ಣ, ಭೂಪತಿ ಕೋಟ್ಯಾನ್, ದಾಮೋದರ ಟಿ. ಕುಂದರ್, ಉಮೇಶ್ ಕೆ. ಮೆಂಡನ್, ಮನೋಜ್ ಕರ್ಕೇರ, ಓಂದಾಸ್ ಕಣ್ಣಂಗಾರ್, ನರೇಶ್ ಕರ್ಕೇರ, ಸತೀಶ್ ಕುಂದರ್, ಕುಸುಮಾ ಸುವರ್ಣ, ವಾಮನ್ ಸುವರ್ಣ, ಸುಮಿತ್ರಾ ಕುಂದರ್ ಮತ್ತು ಸುರೇಖಾ ಕೋಟ್ಯಾನ್ ಆಯ್ಕೆಯಾದರು. ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಅಶೋಕ್ ಸುವರ್ಣ ಅವರು ಸದಸ್ಯರನ್ನು ಸ್ವಾಗತಿಸಿ ಸಭೆಯ ಸುತ್ತೋಲೆಯನ್ನು ಓದಿದರು. ಬಳಿಕ ಅಧ್ಯಕ್ಷರು ಬಜೆಯಲ್ಲಿರುವ ಮೊಗವೀರ ಸಮಾಜದ ಸುವರ್ಣ ಬಳಿಯವರ ಮೂಲಸ್ಥಾನದ ಆರಾಧ್ಯ ಶಕ್ತಿಗಳಾದ ಬ್ರಹ್ಮರು, ನಾಗದೇವರು, ನಂದಿ, ರಕ್ತೇಶ್ವರಿ, ಕ್ಷೇತ್ರಪಾಲ, ಬೊಬ್ಬರ್ಯ, ಮೂಲ ಮೈಸಂದಾಯ, ಜುಮಾದಿ, ಪಂಜುರ್ಲಿ ಹಾಗೂ ಇತರ ಪರಿವಾರ ದೇವರ ಸನ್ನಿದಾನಕ್ಕೆ ಪ್ರಾರ್ಥನೆ ಸಲ್ಲಿಸಿದರು.ನಂತರ ವರದಿ ವರ್ಷ ದಲ್ಲಿ ನಿಧನ ಹೊಂದಿರುವ ಸದಸ್ಯರ ಆತ್ಮಕ್ಕೆ ಸದ್ಗತಿ ಕೋರಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಬಳಿಕ ಕಾರ್ಯದರ್ಶಿ ಅವರು ಗತ 99 ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿಯನ್ನು ಓದಿದರು. ಅದು ಪಾಂಡುರಂಗ ಟಿ. ಸುವರ್ಣ ಅವರ ಸೂಚನೆ ಮತ್ತು ಸಂಜೀವ ಸಾಲ್ಯಾನ್, ವಸಯಿ ಅವರ ಅನುಮೋದನೆಯೊಂದಿಗೆ ಮಂಜೂರಾಯಿತು. ಬಳಿಕ ಕಾರ್ಯದರ್ಶಿ ಅವರು 2025ರ ವಾರ್ಷಿಕ ಕಾರ್ಯಾಚಟುವಟಿಕೆಗಳ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮ 5ರಂತೆ 2025ರ ಮಾರ್ಚ್ 31ಕ್ಕೆ ಅಂತ್ಯವಾದ ಸಭಾದ ಲೆಕ್ಕ ಪಟ್ಟಿ ಗಳನ್ನು ಆಂತರಿಕ ಲೆಕ್ಕ ಪರಿಶೋಧಕರಾದ ಧನ್ ರಾಜ್ ಕುಂದರ್ ಅವರು ಓದಿದರು. ಅದು ವಾಮನ್ ಎನ್. ಸುವರ್ಣ ಅವರ ಸೂಚನೆ ಮತ್ತು ವಾಮನ್ ಸುವರ್ಣ, ಸಾಂತಕ್ರೂಜ್ ಅವರ ಅನುಮೋದನೆ ಯೊಂದಿಗೆ ಸ್ವಿಕೃತಗೊಂಡಿತು.ಈ ಸಭೆ ಯಲ್ಲಿ ಮೂಲಸ್ಥಾನದ ಮುಂಬಯಿ ಶಾಖೆಯ ಶತಮಾನೋತ್ಸವ ಆಚರಿಸುವ ಬಗ್ಗೆ ನಿರ್ಣಯ ತೆಗೆದು ಕೊಳ್ಳಲಾಯಿತು.
ಅಧ್ಯಕ್ಷರು ತಮ್ಮ ಭಾಷಣದಲ್ಲಿ ಮುಂಬೈಯ ಮೂಲಸ್ಥಾನಗಳ ಇತಿಹಾಸದಲ್ಲಿ ವಿಶೇಷವಾಗಿ ಸುವರ್ಣ ಮೂಲಸ್ಥಾನವು ಶತಮಾನೋತ್ಸವ ಆಚರಣೆಯನ್ನು ಮಾಡುವುದು ಅತ್ಯಂತ ಅಭಿಮಾನದ ಸಂಗತಿಯಾದುದರಿಂದ ಇದನ್ನು ಸ್ಮರಣೀಯ ರೀತಿಯಲ್ಲಿ ಆಯೋಜಿಸಬೇಕಾಗಿದೆ ಅದಕ್ಕಾಗಿ ಕುಟುಂಬಸ್ಥರು ದುಡಿಯಬೇಕಾಗಿದೆ ಎಂದು ಹೇಳುತ್ತಾ ಕಾರ್ಯಕಾರಿ ಸಮಿತಿಗೆ ಹೊಸ ಕಾರ್ಯಕರ್ತರು ಸೇರಿರುವುದು ಸಂತೋಷವಾಗಿದೆ ಎಂದು ಹೇಳಿದರು.



Related posts

ಅರುಣೋದಯ ಎಜುಕೇಶನ್ ಟ್ರಸ್ಟ್‌ನ ‘ಸ್ಟಾರ್ ಕಿಡ್ಸ್’ ಶಾಲಾ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಜೆ ಸಿ ಐ ಶಂಕರಪುರ ಇದರ 2024 ರ ಸಾಲಿನ ಅಧ್ಯಕ್ಷರಾಗಿ ಇನ್ನಂಜೆ ಹರೀಶ್ ಪೂಜಾರಿ ಆಯ್ಕೆ.

Mumbai News Desk

*ಶ್ರೀ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವ, ಸೇವಕರ್ತ ಪ್ರೇಮಾನಂದ ಕುಲಾಲ್ ವರಿಗೆ ಗೌರವ,

Mumbai News Desk

ಸಾಣೂರು : ಮುಟ್ಟಿ ಸಿ.ಕುಕ್ಯಾನ್ ನಿಧನ.

Mumbai News Desk

ಕತಾರ್ ಬಂಟರ ಸಂಘದ ಪದಾಧಿಕಾರಿಗಳಿಗೆ ಒಕ್ಕೂಟದಿಂದ ಗೌರವ. 

Mumbai News Desk

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ * ಭಕ್ತವೃಂದದವರಿಂದ ಐದನೆಯ ವರ್ಷದ ಶ್ರೀ ದೇವೀ ಜಪಪಾರಾಯಣ ಅನುಷ್ಟಾನ ಸಂಪನ್ನ.

Mumbai News Desk