
ತಾಯಿಯ ಋಣದಲ್ಲಿ ಬದುಕನ್ನು ಕಟ್ಟಿ ಕೊಳ್ಳೋಣ : ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ
ಹೆತ್ತ ತಾಯಿಯ ಋಣವನ್ನು ನಮ್ಮ ಆತ್ಮಸ್ಥೈರ್ಯವನ್ನಾಗಿ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳೋಣ, ನೋವನ್ನು ಪಡೆದುಕೊಂಡು ಪ್ರೀತಿಯನ್ನು ಹಂಚುವ ಅಮ್ಮನ ಅಸರೆಯನ್ನು ವಿಶ್ವಾಸಕ್ಕೆ ಪರಿವರ್ತಿಸಿಕೊಳ್ಳುವುದೇ ಮಾನವನ ಧರ್ಮವಾಗಬೇಕು. ಉಸಿರಿನ ಕೊನೆಯವರೆಗೂ ತಾಯಿಯನ್ನು ಕಣ್ಣಮುಂದೆಯೇ ಸಾಕು ಸಲಹುವುದು ಮಕ್ಕಳ ಕರ್ತವ್ಯ ಎಂದು ಆಧ್ಯಾತ್ಮಿಕ ವಿಶ್ವಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು
ಅವರು ಮಾತೃಶ್ರೀ ಶ್ರೀಮತಿ ಶಾರದಮ್ಮ ಗೋವಿಂದ ಭಟ್ ರವರ 91ನೇಜನ್ಮದಿನಾಚರಣೆಯ ಅಂಗವಾಗಿ ಮುಲ್ಕಿ ಸಿಎಸ್‌ಐ ಬಾಲಿಕಾಶ್ರಮದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಸಂಯೋಜನೆಯಲ್ಲಿ ನಡೆದ “ಅಮ್ಮನ ಆಸರೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ಉದ್ಯಮಿ ರಾಹುಲ್ ಚಂದ್ರಶೇಖರ್ ಅವರು “ಅಮ್ಮನ ಆಸರೆ” ಸರಣಿ ಕಾರ್ಯಕ್ರಮವನ್ನು ಸಂಯೋಜಿಸಿ, ಎಲ್ಲಾ ಮಕ್ಕಳಿಗೆ ದೈನಂದಿನ ವಸ್ತುಗಳನ್ನು ವಿತರಿಸಿ,ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಸೂಕ್ತವಾದ ಸ್ಪಂದನೆಯನ್ನು ಸೇವಾಶ್ರಮದ ಮೂಲಕ ನೀಡುವ ಭರವಸೆ ನೀಡಿದರು.
ಶಾರದಮ್ಮ ಗೋವಿಂದ ಭಟ್, ಸೇವಾಶ್ರಮದ ನಿರ್ದೇಶಕಿ ರಜನಿ ಸಿ. ಭಟ್, ರಾಘವ ಸೂರ್ಯ, ನ್ಯಾಯವಾದಿ ರೋಶನಿ ಚಂದ್ರಶೇಖರ್ ಸ್ವಾಮೀಜಿ ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.ಆಶ್ರಮದ ವಕ್ತಾರ ನರೇಂದ್ರಕೆರೆಕಾಡು ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ತಾಯಿ ಶಾರದಮ್ಮ ಗೋವಿಂದ ಭಟ್ ಅವರು ಮುಗ್ದ ಮಕ್ಕಳಿಗೆ ಬದುಕಿನ ನೀತಿ ಪಾಠವನ್ನು ತಿಳಿಸಿದರು. ಭವಿಷ್ಯದಲ್ಲಿ ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಜೀವನ ನಿರ್ವಹಿಸಲು ಸಲಹೆ ನೀಡಿದರು. ಮಕ್ಕಳೊಂದಿಗೆ ಸಂವಾದ ನಡೆಸಿ, ತಮ್ಮ ಅನುಭವವನ್ನು ಹಂಚಿಕೊಂಡರು.




