32 C
Mumbai
March 7, 2026
Mumbai News Kannada
ಸುದ್ದಿ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ಜಂಟಿ ಆಯೋಜನೆಯಲ್ಲಿ ನಡೆಯಲಿರುವ ‘ತುಳು ಸಮ್ಮೇಳನ’ದ ಪೂರ್ವಭಾವಿ ಸಭೆ.






ಚಿತ್ರ,ವರದಿ: ಉಮೇಶ್ ಕೆ ಅಂಚನ್
ಮುಂಬಯಿ, ಜ.17: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ಇದರ ಜಂಟಿ ಆಯೋಜನೆಯಲ್ಲಿ ನಡೆಯಲಿರುವ ತುಳು ಸಮ್ಮೇಳನದ ಪೂರ್ವಭಾವಿ ಸಭೆಯು ಜ. 11ರಂದು ಮೀರಾ ರೋಡ್ ಪೂರ್ವದ ಎಮ್ ಟಿ ಎನ್ ಎಲ್ ರಸ್ತೆಯಲ್ಲಿರುವ ನಾರಾಯಣ ಗುರು ಸಭಾಗ್ರಹದಲ್ಲಿ ಡಾ.ರವಿರಾಜ್ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಮ್ಮೇಳನವನ್ನು ಫೆ.21ರಂದು ಮೀರಾ ರೋಡ್ ಪೂರ್ವದ ಸ್ಟೇಶನ್ ರಸ್ತೆ, ಸಹಕಾರಿ ಭಂಡಾರದ ಎದುರಿನಲ್ಲಿರುವ ಆರ್.ಕೆ.ಲಾನ್-2 ಸಭಾಂಗಣದಲ್ಲಿ ಜರುಗಿಸಲು ನಿಶ್ಚಯಿಸಲಾಯಿತು.
ಅಂದು ಮಧ್ಯಾಹ್ನ 2 ಗಂಟೆಯಿಂದ ತುಳು ಜಾನಪದ ನೃತ್ಯ ಸ್ಪರ್ಧೆಯೊಂದಿಗೆ ಕಾರ್ಯಕ್ರಮವು ದೀಪ ಪ್ರಜ್ವಲಿಸಿ ಚಾಲನೆ ಗೊಳ್ಳಲಿದೆ. ತದನಂತರ ಯಕ್ಷಗಾನ ನೃತ್ಯ ರೂಪಕ, ಹಾಸ್ಯ, ಹಾಡು ಹಾಗೂ ತುಳು ನಾಟಕ ಸಾದರಗೊಳ್ಳಲಿದ್ದು ರಾತ್ರಿ 8ರಿಂದ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಲಿದೆ.
ತುಳು ಜಾನಪದ ಸ್ಪರ್ಧೆಯಲ್ಲಿ ಭಾಗವಹಿಸಲು ಕೇವಲ ಹತ್ತು ತಂಡಗಳಿಗೆ ಅವಕಾಶವಿದ್ದು ಸ್ಪರ್ಧೆಯ ನಿಯಮಗಳು, ಹೆಸರು ನೊಂದಾವಣೆ ಹಾಗೂ ಹೆಚ್ಚಿನ ವಿವರಗಳಿಗೆ ಶಾಂತ ಆಚಾರ್ಯ 7977766959 ಅಥವಾ ಅಮಿತಾ ಶೆಟ್ಟಿ 8850274225 ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಸಭೆಯಲ್ಲಿ ತುಳುನಾಡ ಸೇವಾ ಸಮಾಜದ ಉಪಾಧ್ಯಕ್ಷರುಗಳಾದ ಪುತ್ತಿಗೆ ನಾರಾಯಣ ಗೌಡ, ವಸಂತ್ ಶೆಟ್ಟಿ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಸೂಡ, ಮುಖ್ಯ ಸಲಹೆಗಾರ ಜಿ.ಕೆ.ಕೆಂಚನಕೆರೆ ಹಾಗೂ ಸದಸ್ಯರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸರ್ವ ತುಳು ಕನ್ನಡಿಗರು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ತುಳುನಾಡ ಸೇವಾ ಸಮಾಜದ ಸರ್ವ ಪದಾಧಿಕಾರಿಗಳು,ಸದಸ್ಯರು ವಿನಂತಿಸಿದ್ದಾರೆ.



Related posts

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಆರೋಗ್ಯ ಇಲಾಖೆಯಿಂದ ಅಯ್ಯಪ್ಪ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ವಸಯಿಯ ಮೋಹಿತ್ ಆನಂದ ಪೂಜಾರಿಗೆ ಶೇ 86.50%

Mumbai News Desk

ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವದಲ್ಲಿ ಧಾರ್ಮಿಕ ಸಭೆ

Mumbai News Desk

ಮುಲುಂಡ್ ಕ್ಷೇತ್ರದ ‌ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ರಾಕೇಶ್ ಶೆಟ್ಟಿ  ಕಣಕ್ಕೆ

Mumbai News Desk

ಸಿ ಎ ಪರೀಕ್ಷೆ ಫಲಿತಾಂಶ 2024 ಪ್ರತೀಕ್ಷಾ ಪ್ರಕಾಶ್ ಆಚಾರ್ಯ ಉತ್ತೀರ್ಣ

Mumbai News Desk

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ಅಧ್ಯಕ್ಷರಾಗಿ ಲವ ಎನ್. ಕರ್ಕೇರ ಮರು ಆಯ್ಕೆ.

Mumbai News Desk