
ಕಾಪು: ಇಲ್ಲಿನ ಪ್ರಸಿದ್ಧ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ಪುನಃ ಪ್ರತಿಷ್ಠೆಯ ಪ್ರಥಮ ವರ್ಷದ ವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ‘ಮಾತೃ ವೈಭವ’ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶನಿವಾರ (ಫೆ. 28) ಅತ್ಯಂತ ಭಕ್ತಿಭಾವದಿಂದ ಚಾಲನೆ ನೀಡಲಾಯಿತು.
ದೇವಸ್ಥಾನದ ಪ್ರಧಾನ ತಂತ್ರಿ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಹಾಗೂ ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯ ಅವರ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಅಭಿವೃದ್ಧಿ ಸಮಿತಿ ಹಾಗೂ ಮಾತೃ ವೈಭವ ಸೇವಾ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಅವರ ಯಜಮಾನತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ದಿನದ ವಿಶೇಷವಾಗಿ ಅರಣಿಮಥನ, ಗಣಯಾಗ, ನವಗ್ರಹ ಹೋಮ, ಮೃತ್ಯುಪಂಚಕ ಪೂಜೆ ಹಾಗೂ ಶ್ರೀ ಚಂಡೀಪುರಶ್ಚರಣಂ ನಡೆದವು. ಸಂಜೆ ವಾಸ್ತುಹೋಮ, ವಾಸ್ತು ಪೂಜೆ ಮತ್ತು ಸುದರ್ಶನ ರಕ್ಷಾ ಪ್ರಕ್ರಿಯೆಗಳು ನೆರವೇರಿದವು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಮಂಜುಳಾ ಟಿ. ಎನ್., ಶ್ರುತಿ ಹರಿರಾಮ್ ಶಂಕರ್, ಬೀನಾ ವಾಸುದೇವ ಶೆಟ್ಟಿ, ರಂಜನಿ ಸುಧಾಕರ ಹೆಗ್ಡೆ ತುಂಗಾ, ಅನುರಾಧ ಮನೋಹರ್ ಶೆಟ್ಟಿ, ಮಮತಾ ಯೋಗೀಶ್ ಶೆಟ್ಟಿ, ವಿದ್ಯಾ ರವಿಕಿರಣ್, ಲಕ್ಷ್ಮೀ ಶ್ರೀನಿವಾಸ ತಂತ್ರಿ ಹಾಗೂ ಸುಗುಣಾ ರತ್ನಾಕರ್ ಶೆಟ್ಟಿ ನಡಿಕೆರೆ ಸೇರಿದಂತೆ ಒಟ್ಟು 81 ಮಂದಿ ಸುಮಂಗಲೆಯರು ‘ಮಾತೃ ವೈಭವ’ದ ದೀಪ ಪ್ರಜ್ವಲಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಚಿಕ್ಕನಾಯಕಹಳ್ಳಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಪಾಲ್ಗೊಂಡಿದ್ದರು.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಮನೋಹರ ಎಸ್. ಶೆಟ್ಟಿ, ಗಂಗಾಧರ ಸುವರ್ಣ ಹಾಗೂ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ ಉಪಸ್ಥಿತರಿದ್ದರು.
ಮುಂಬಯಿ ಸಮಿತಿ ಗೌರವಾಧ್ಯಕ್ಷ ಸುಧಾಕರ ಹೆಗ್ಡೆ (ತುಂಗಾ ಗ್ರೂಪ್ಸ್), ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ಮಾತೃ ವೈಭವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಬಾಲಾಜಿ, ಕಾರ್ಯಾಧ್ಯಕ್ಷರಾದ ಭಗವಾನ್ ದಾಸ್ ಶೆಟ್ಟಿಗಾರ್, ಪ್ರಭಾಕರ ಎಸ್. ಪೂಜಾರಿ, ಹರಿಯಪ್ಪ ಕೋಟ್ಯಾನ್, ಲಕ್ಷ್ಮೀಶ ತಂತ್ರಿ ಕಲ್ಯ ಹಾಗೂ ಕಾರ್ಯದರ್ಶಿ ಜಯರಾಮ ಆಚಾರ್ಯ ಉಪಸ್ಥಿತರಿದ್ದರು.
ಮೊಕ್ತೇಸರರಾದ ಶೇಖರ್ ಸಾಲ್ಯಾನ್, ಮನೋಹರ ರಾವ್, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತಾ ದೇವಾಡಿಗ ಹಾಗೂ ಮುಂಬಯಿ ಸಮಿತಿಯ ಸಂದೀಪ್ ಶೆಟ್ಟಿ, ರಮೇಶ್ ಶೆಟ್ಟಿ, ಪಾಂಡು ಶೆಟ್ಟಿ, ವಸಂತ ಶೆಟ್ಟಿ, ಪ್ರೇಮನಾಥ ಶೆಟ್ಟಿ, ಆರ್. ಜಿ. ಶೆಟ್ಟಿ, ಅಶ್ವಿನ್ ಶೆಟ್ಟಿ ಭಾಗವಹಿಸಿದ್ದರು.
ಸ್ಥಳೀಯ ಸಮಿತಿ ಪ್ರಮುಖರಾದ ಶ್ರೀಕರ ಶೆಟ್ಟಿ ಕಲ್ಯ, ವಿಕ್ರಂ ಕಾಪು, ನಿರ್ಮಲ್ ಕುಮಾರ್ ಹೆಗ್ಡೆ, ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಎಂ. ಸುವರ್ಣ, ಸಾವಿತ್ರಿ ಗಣೇಶ್, ಸುರೇಶ್ ಶೆಟ್ಟಿ ಅಯೋಧ್ಯ, ರಮೇಶ್ ಶೆಟ್ಟಿ ಕೊಲ್ಯ, ಡಾ| ಪ್ರಶಾಂತ್ ಶೆಟ್ಟಿ, ಸುಧಾಕರ ಶೆಟ್ಟಿ ಮಕರ, ಕೆ. ವಿಶ್ವನಾಥ್, ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು, ರಘುರಾಮ್ ಶೆಟ್ಟಿ, ಸುನೀಲ್ ಪೂಜಾರಿ, ರಮೇಶ್ ಕಲ್ಮಾಡಿ, ರೇಣುಕಾ ಜೋಗಿ ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.




