September 3, 2026
Mumbai News Kannada
ತುಳುನಾಡು

ಕೂತಲ್ಲೇ ಸಿಕ್ತು ಬೂತಾಯಿ ಮೀನಿನ ‘ಲಾಟರಿ’: ಉಳ್ಳಾಲ ತೀರದಲ್ಲಿ ಪ್ರಕೃತಿಯ ‘ಬಂಪರ್ ಆಫರ್





ಮಂಗಳೂರಿನ ಪ್ರಸಿದ್ಧ ಉಳ್ಳಾಲ ಸಮುದ್ರ ತೀರದಲ್ಲಿ ಪ್ರಕೃತಿಯ ಅಪರೂಪದ ಚಮತ್ಕಾರವೊಂದು ನಡೆದಿದ್ದು, ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರಿಗೆ ಬೂತಾಯಿ ಮೀನಿನ ಬಂಪರ್ ಸುಗ್ಗಿಯಾಗಿದೆ. ಶುಕ್ರವಾರ ಮಧ್ಯಾಹ್ನ ಸುಮಾರು 11 ಗಂಟೆಯ ವೇಳೆಗೆ ಭಾರಿ ಪ್ರಮಾಣದ ಬೂತಾಯಿ ಮೀನುಗಳ ಹಿಂಡು ಒಮ್ಮಿಂದೊಮ್ಮೆಗೆ ದಡಕ್ಕೆ ಅಪ್ಪಳಿಸಿದ್ದು, ತೀರದುದ್ದಕ್ಕೂ ಬೆಳ್ಳಿಯ ಹಾಸಿನಂತೆ ಮೀನುಗಳು ಮಿನುಗತೊಡಗಿದವು. ಸಮುದ್ರದಲ್ಲಿ ಚಲಿಸುತ್ತಿದ್ದ ದೋಣಿಯೊಂದರ ಸದ್ದಿಗೆ ಹೆದರಿದ ಮೀನುಗಳ ಹಿಂಡು ದಿಕ್ಕು ತಪ್ಪಿ, ರಕ್ಷಣೆಯ ಆತುರದಲ್ಲಿ ದಡದ ಕಡೆಗೆ ನುಗ್ಗಿ ಬಂದಿದ್ದೇ ಈ ಅಪರೂಪದ ವಿದ್ಯಮಾನಕ್ಕೆ ಕಾರಣ ಎನ್ನಲಾಗಿದೆ.
ಈ ದೃಶ್ಯವನ್ನು ಕಂಡ ತಕ್ಷಣ ಸ್ಥಳೀಯ ನಿವಾಸಿಗಳು ಮತ್ತು ಮೀನುಗಾರರು ಅಲೆಗಳ ಅಬ್ಬರವನ್ನು ಲೆಕ್ಕಿಸದೆ ಸಮುದ್ರಕ್ಕೆ ಇಳಿದು, ಕೈಗೆ ಸಿಕ್ಕ ಪಾತ್ರೆ, ಬಕೆಟ್ ಹಾಗೂ ಚೀಲಗಳಲ್ಲಿ ಮೀನುಗಳನ್ನು ತುಂಬಿಸಿಕೊಳ್ಳಲು ಮುಗಿಬಿದ್ದರು. ಕೆಲವರು ತಮಗೆ ಸಿಕ್ಕ ಮೀನಿನ ರಾಶಿಯನ್ನು ಸ್ಥಳದಲ್ಲೇ ಮಾರಿ ಕೈತುಂಬಾ ಕಾಸು ಮಾಡಿಕೊಂಡರೆ, ಇನ್ನು ಕೆಲವರು ನೆರೆಹೊರೆಯವರಿಗೆ ಹಂಚಿ, ಮನೆಗೆ ಕೊಂಡೊಯ್ದು ಬೂತಾಯಿ ಮೀನಿನ ಖಾದ್ಯ ಸವಿದು ಸಂಭ್ರಮಿಸಿದರು. ಸಮುದ್ರ ತೀರದಲ್ಲಿ ಇಂತಹ ಮೀನಿನ ಸುಗ್ಗಿ ಬರುವುದು ಅತ್ಯಂತ ಅಪರೂಪವಾಗಿದ್ದು, ಕೆಲವು ತಿಂಗಳುಗಳ ಹಿಂದೆ ಉಡುಪಿಯ ಮಲ್ಪೆ ತೀರದಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಪ್ರಕೃತಿಯ ಈ ಧಾವಂತ ಸ್ಥಳೀಯರ ಪಾಲಿಗೆ ಮಾತ್ರ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು.



Related posts

ತೊಕ್ಕೊಟ್ಟಿನಲ್ಲಿ ಶ್ರೀ ಸಾಯಿ ಪರಿವಾರ್ ಟ್ರಸ್ಟ್‌ನಿಂದ ವಿಜೃಂಭಣೆಯ ಗುರುಪೂರ್ಣಿಮೆ ಕಾರ್ಯಕ್ರಮ: ಯಕ್ಷಗಾನ ಕಲಾವಿದ ಅಶ್ವಥ್ ಮಂಜನಾಡಿ ಅವರಿಗೆ ಸನ್ಮಾನ ಹಾಗೂ ನೂತನ ವೆಬ್‌ಸೈಟ್ ಲೋಕಾರ್ಪಣೆ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಮುಷ್ಟಿ ಕಾಣಿಕೆ ಸಮರ್ಪಣೆ

Mumbai News Desk

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು : ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ, ಅ. 29ರ ತನಕ ಸ್ವರ್ಣ ಸಮರ್ಪಣೆಗೆ ಭಕ್ತರಿಗೆ ಅವಕಾಶ

Mumbai News Desk

ಮೂಲ್ಕಿ : ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ, ಸಮಾಜಿಕ ಕಾರ್ಯಕರ್ತ ಜನಾರ್ಧನ ಬಂಗೇರ ಅವರಿಗೆ ಸನ್ಮಾನ

Mumbai News Desk

ಮೂಲ್ಕಿ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ಉದ್ಘಾಟನೆ

Mumbai News Desk

ಮೂಲ್ಕಿ: “ಅಮ್ಮನ ಆಸರೆ” ಕಾರ್ಯಕ್ರಮಕ್ಕೆ ಚಾಲನೆ

Mumbai News Desk