32 C
Mumbai
October 4, 2026
Mumbai News Kannada
ಮುಂಬಯಿ

ವಿಶಿಷ್ಟ ಮಾನವ ಸರಪಳಿಯೊಂದಿಗೆ ಸ್ವಾತಂತ್ರ್ಯೋತ್ಸವ ಸಂಭ್ರಮ: ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಭಾರತಮಾತೆಗೆ ಆರತಿಯ ಗೌರವ



ನವಿ ಮುಂಬಯಿ: ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನವಿ ಮುಂಬಯಿ ಮಹಾನಗರದಲ್ಲಿ ವಿಶಿಷ್ಟವಾದ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾವಿರಾರು ದೇಶಪ್ರೇಮಿಗಳು ಉತ್ಸಾಹದಿಂದ ಭಾಗವಹಿಸಿ, ‘ವಂದೇ ಮಾತರಂ’ ಗೀತೆಯನ್ನು ಸಾಮೂಹಿಕವಾಗಿ ಹಾಡುವ ಮೂಲಕ ದೇಶಭಕ್ತಿಯನ್ನು ಮೆರೆದರು. ಆಯೋಜಕರ ಆಹ್ವಾನದ ಮೇರೆಗೆ ಪರಮಪೂಜ್ಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾರತಮಾತೆಗೆ ಆರತಿ ಬೆಳಗಿ ಗೌರವ ಸಮರ್ಪಿಸಿದರು.

ಬಳಿಕ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡು ನೆರೆದಿದ್ದ ಜನತೆಗೆ ಆಶೀರ್ವಚನ ನೀಡಿದರು. ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಕಾರ್ಯಕ್ರಮವಾಗಿ ಆಯೋಜಿಸಲಾದ ಈ ಬೃಹತ್ ಮಾನವ ಸರಪಳಿ ನವಿ ಮುಂಬಯಿಯ ಜನತೆಯ ಗಮನ ಸೆಳೆದು, ದೇಶಪ್ರೇಮ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನು ಸಾರಿತು.



Related posts

ಅನಿತಾ ಪಿ.ತಾಕೊಡೆಯವರಿಗೆ ಚೆಂಬೂರು ಕರ್ನಾಟಕ ಸಂಘ ಕೊಡಮಾಡುವ “ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ”

Mumbai News Desk

ಭಾರತ್ ಬ್ಯಾಂಕ್: 48 ನೇ ಸಂಸ್ಥಾಪನಾ ದಿನಾಚರಣೆ ವಿಜೃಂಭಣೆಯಿಂದ ಆಚರಣೆ

Mumbai News Desk

ಮೀರಾ-ಭಾಯಂದರ್ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದಕ್ಷಿಣ ಭಾರತ ಭವನವನ್ನು ವೀಕ್ಷಿಸಿದ ಶಾಸಕ ಪ್ರತಾಪ್ ಸರ್ನಾಯಕ್

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಆಯುಷ್ ಬಿ ಸನಿಲ್ ಗೆ ಶೇ. 88.40 ಅಂಕ.

Mumbai News Desk

ಮುಂಬೈನಲ್ಲಿ ಈದ್ -ಎ -ಮಿಲಾದ್ ರಜೆಯನ್ನು ಸೆಪ್ಟಂಬರ್ 8ಕ್ಕೆ ಬದಲಾಯಿಸಿದ ಮಹಾರಾಷ್ಟ್ರ ಸರಕಾರ

Mumbai News Desk

ಮುಂಬೈ : ಕುರ್ಲಾದಲ್ಲಿ ಭಾರೀ ಮಳೆಗೆ ಮರ ಕುಸಿದು ವ್ಯಕ್ತಿ ಸಾವು, ವಿದ್ಯುತ್ ವ್ಯತ್ಯಯ

Mumbai News Desk