
ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ–ಮೀರಾರೋಡ್ ಸ್ಥಳೀಯ ಸಮಿತಿಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಸಮಾಜದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ‘ಮೃಗ ನಯನಿ–ಸೀಜನ್ 2’ ಮೊಗವೀರ ಯುವ ಪ್ರತಿಭೋತ್ಸವವನ್ನು ನವೆಂಬರ್ 1ರಂದು ಮಧ್ಯಾಹ್ನ 2 ಗಂಟೆಗೆ ಅಂಧೇರಿ ಪಶ್ಚಿಮದ ವೀರ ದೇಸಾಯಿ ರಸ್ತೆಯಲ್ಲಿರುವ ಮೊಗವೀರ ಭವನ, ಮೊಗವೀರ ವ್ಯವಸ್ಥಾಪಕ ಮಂಡಳಿಯಲ್ಲಿ ಆಯೋಜಿಸಲಾಗಿದೆ.
ಮೊಗವೀರ ಸಮಾಜದ ಯುವ ಪ್ರತಿಭೆಗಳಿಗೆ ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ವಿಶೇಷ ವೇದಿಕೆ ಕಲ್ಪಿಸುವ ಈ ಪ್ರತಿಭೋತ್ಸವದಲ್ಲಿ Solo Dance (Age Group 14 to 25), Group Dance (Age 15 & Above), Master & Miss Mogaveera (Age 14 to 20 Boys & Girls), Stand-up Comedy Competitions (Age 15 & Above), Anuraga Dampati / Jeevana Jodi (Age 25 to 45) ಸೇರಿದಂತೆ ವಿವಿಧ ಪ್ರತಿಭಾ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮವು ಸಂಘದ ಗೌರವ ಅಧ್ಯಕ್ಷರಾದ ಸುರೇಶ್ ಆರ್. ಕಾಂಚನ್, ಅಧ್ಯಕ್ಷರಾದ ಸಂತೋಷ್ ಕೆ. ಪುತ್ರನ್, ಉಪಾಧ್ಯಕ್ಷರಾದ ಮಹಾಬಲ ಕುಂದರ್, ರಮೇಶ್ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್ ಹಾಗೂ ಕೋಶಾಧಿಕಾರಿ ನಾಗರಾಜ್ ಶ್ರೀಯನ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಮೀರಾರೋಡ್ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಗೋಪಾಲ ಎಸ್. ಪುತ್ರನ್, ಕಾರ್ಯಾಧ್ಯಕ್ಷ ರಘುರಾಮ ಚಂದನ್, ಕಾರ್ಯದರ್ಶಿ ಭಾಸ್ಕರ್ ನಾಯ್ಕ್ ಹಾಗೂ ಕೋಶಾಧಿಕಾರಿ ವೈಶಾಲಿ ನಾಯ್ಕ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲಿದ್ದಾರೆ. ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಸುಚಿತ್ರ ಸಂತೋಷ್ ಪುತ್ರನ್ ಹಾಗೂ ಉಪ ಕಾರ್ಯಾಧ್ಯಕ್ಷೆ ಭಾರತಿ ಎಸ್. ನಾಯ್ಕ್ ಸೇರಿದಂತೆ ಮತ್ತಿತರ ಸಮಾಜದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವ ‘ಮೃಗ ನಯನಿ–ಸೀಜನ್ 2’ ಮೊಗವೀರ ಯುವ ಪ್ರತಿಭೋತ್ಸವವು ಸಮಾಜದ ಸಾಂಸ್ಕೃತಿಕ ಮತ್ತು ಕಲಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮಹತ್ವದ ವೇದಿಕೆಯಾಗಲಿದೆ. ಸಮಾಜದ ಯುವ ಪ್ರತಿಭೆಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವಂತೆ ಸಂಘದ ವತಿಯಿಂದ ಮನವಿ ಮಾಡಲಾಗಿದೆ.
ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ–ಮೀರಾರೋಡ್ ಶಾಖೆಯ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಸರ್ವ ಸದಸ್ಯರು; ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ–ಮುಖ್ಯ ಕಚೇರಿ, ಮುಂಬೈಯ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಸರ್ವ ಸದಸ್ಯರು; ಮೊಗವೀರ ಮಹಾಜನ ಸೇವಾ ಸಂಘದ ಮಹಿಳಾ ವಿಭಾಗದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಸರ್ವ ಸದಸ್ಯರು; ಮೊಗವೀರ ಮಹಾಜನ ಸೇವಾ ಸಂಘ–ಠಾಣೆ ಶಾಖೆಯ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಸರ್ವ ಸದಸ್ಯರು; ಮೊಗವೀರ ಮಹಾಜನ ಸಂಘ–ಡೊಂಬಿವಲಿ ಶಾಖೆಯ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಸರ್ವ ಸದಸ್ಯರು; ಮೊಗವೀರ ಮಹಾಜನ ಸೇವಾ ಸಂಘ–ಕುಂದಾಪುರ ಶಾಖೆಯ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9820135067 ಸಂಪರ್ಕಿಸಬಹುದು.



