
ಮುಲ್ಕಿ: ಪ್ರತಿಷ್ಠಿತ ಹೊಸ ಅಂಗಳ ಮಾಸಿಕ ಪತ್ರಿಕೆಯ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬುಧವಾರ ನಡೆಯಿತು.
ಕ್ಷೇತ್ರದ ಅರ್ಚಕರಾದ ಶ್ರೀಪತಿ ಉಪಾಧ್ಯಾಯ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರುರವರು ಹೊಸ ಅಂಗಣ ಪತ್ರಿಕೆಯ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಈ ಸಂದರ್ಭ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಸುನಿಲ್ ಆಳ್ವ ,ಮಹೀಮ್ ಹೆಗ್ಡೆ, ಕೃಷ್ಣರಾಜ ಬಪ್ಪನಾಡು, ನಾಗರಾಜ್ ಪೂಜಾರಿ, ಚಿರಾಗ್, ಭಾನುಮತಿ ಶೆಟ್ಟಿ ಕಕ್ವಗುತ್ತು, ಸರೋಜಿನಿ ಸುವರ್ಣ,ದಿನೇಶ್ ಕೊಲ್ನಾಡು, ವಾಸು ಪೂಜಾರಿ ಚಿತ್ರಾಪು, ಗಿರೀಶ್ ಮೆಂಡನ್, ಸತೀಶ್ ಬಂಗೇರ, ವಾಸು ಪೂಜಾರಿ ಕೊಲಕಾಡಿ, ಸುರೇಂದ್ರ ಜಿ. ಶೆಣೈ, ರವಿ ಅಂಚನ್, ಜೆಸಿ ದಿನೇಶ್ ಶೆಟ್ಟಿ, ರಾಜೇಶ್ ಅಮೀನ್ ಕಿಲ್ಪಾಡಿ, ಮತ್ತಿತರರು ಉಪಸ್ಥಿತರಿದ್ದರು. ಹೊಸ ಅಂಗಣ ಪತ್ರಿಕೆಯ ಡಾ.ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿ ನಿರೂಪಿಸಿದರು.
.
.
.
.




















































































