September 25, 2026
Mumbai News Kannada
ಪ್ರಕಟಣೆ

ಸೆ. 26: ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ತಾಳಮದ್ದಳೆ ಸರಣಿಯ 15ನೇ ಪ್ರಸ್ತುತಿ, ಕಲಾವಿದರಿಗೆ ಸನ್ಮಾನ



ಮುಂಬಯಿ: ಪರಮಪೂಜ್ಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಶಿಷ್ಯರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಅಮೃತಹಸ್ತದಿಂದ 2026ರ ಫೆಬ್ರವರಿ 1ರಂದು ಉದ್ಘಾಟನೆಗೊಂಡ, ಪೂಜ್ಯ ಶ್ರೀ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ, ವಿದ್ಯಾವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಹರಿದಾಸ ಗೋಪಾಲ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ, ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ ಪ್ರಭು ಶ್ರೀರಾಮಚಂದ್ರ ದೇವರ ಅವತಾರದ ಆರಂಭದಿಂದ ನಿರ್ಯಾಣದವರೆಗಿನ ಸಂಪೂರ್ಣ ರಾಮ ಚರಿತ್ರೆಯನ್ನೊಳಗೊಂಡ ‘ಶ್ರೀ ರಾಮ ಕಥಾ ಹೃದಯಂ’ 24 ಕಂತುಗಳ ಪುಣ್ಯಪ್ರದ ಸರಣಿ ತಾಳಮದ್ದಳೆಯ ಹದಿನೈದನೇ ಪ್ರಸ್ತುತಿಯಾಗಿ ‘ಅತಿಕಾಯ ಮೋಕ್ಷ’ ಪ್ರಸಂಗವು ದಿನಾಂಕ 26-09-2026ರ ಶನಿವಾರ ಅಪರಾಹ್ನ 2:15ಕ್ಕೆ ವಿದ್ಯಾವಿಹಾರ (ಪಶ್ಚಿಮ) ಗಾಂವ್‌ದೇವಿಯ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರುಗಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಮೇಶ ಶೆಟ್ಟಿ ಪೊಲ್ಯ ಹಾಗೂ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾದ ಮಧುಸೂದನ ಟಿ. ಆರ್. ಆಗಮಿಸಲಿದ್ದಾರೆ.

ಅಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಅವರ ಆಶಯದಂತೆ ಮುಂಬಯಿ ಮಹಾನಗರದ ಹಿರಿಯ ಯಕ್ಷಗಾನ ಕಲಾವಿದರಾದ ಸದಾನಂದ ನಾಯಕ್, ಶೇಖರ ಸಸಿಹಿತ್ಲು, ಎಳ್ಳಾರೆ ಶಂಕರ ನಾಯಕ್, ರಾಮಚಂದ್ರ ಸಾಲ್ಯಾನ್, ನರೇಂದ್ರ ಸುವರ್ಣ, ಶೈಲೇಶ್ ಪುತ್ರನ್, ಶಶಿಕಾಂತ್ ನಾಯಕ್, ರಮಾನಂದ ನಾಯಕ್, ಕಡ್ತಲಾ ಕೃಷ್ಣ ನಾಯಕ್, ನಡೂರು ಸುರೇಂದ್ರ ಶೆಟ್ಟಿ, ಭಾಸ್ಕರ ಪೂಜಾರಿ ಉಡುಪಿ, ಭುವನೇಂದ್ರ ಪೂಜಾರಿ ಹಾಗೂ ಪ್ರಶಾಂತ್ ಶೆಟ್ಟಿ ಮಂಗಲ್ಪಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.

ತಾಳಮದ್ದಳೆ ಪ್ರಸ್ತುತಿ:

  • ಹಿಮ್ಮೇಳ: ಭಾಗವತರಾಗಿ ಪೃಥ್ವಿರಾಜ್ ಕವತ್ತಾರ್, ಚೆಂಡೆ-ಮದ್ದಳೆಯಲ್ಲಿ ಪ್ರವೀಣ್ ಶೆಟ್ಟಿ ಕಟೀಲು, ಹರೀಶ ಸಾಲ್ಯಾನ್, ಸುರೇಶ ಶೆಟ್ಟಿ ಹಾಗೂ ಆಶೀಷ್ ದೇವಾಡಿಗ ಸಹಕರಿಸಲಿದ್ದಾರೆ.
  • ಮುಮ್ಮೇಳ (ಅರ್ಥಧಾರಿಗಳು): ಪ್ರಕಾಶ್ ಪಣಿಯೂರು, ವಾಸು ಮಾರ್ನಾಡ್, ಸುರೇಶ್ ನಂದ್ರೊಳ್ಳಿ, ರವೀಂದ್ರ ಉಚ್ಚಿಲ್, ನಾರಾಯಣ ಕುಂಬ್ಳೆ ಹಾಗೂ ರಾಘು ಬಗ್ವಾಡಿ ಪಾಲ್ಗೊಳ್ಳಲಿದ್ದಾರೆ.

ಈ ಎಲ್ಲ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಯಶಸ್ವಿಗೊಳಿಸಬೇಕಾಗಿ ವಾಸು ಮಾರ್ನಾಡ್ ಮತ್ತು ಸುರೇಶ್ ನಂದ್ರೊಳ್ಳಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ : ಡಿ. 15ರಂದು ಕಲ್ಲುರ್ಟಿ -ಪಂಜುರ್ಲಿ -ಗುಳಿಗ ದೈವದ ನೇಮ (ಕೋಲ )

Mumbai News Desk

ಜ.7ರಂದು ಶ್ರೀ ಅಯ್ಯಪ್ಪ ಭಕ್ತ ವೃಂದ, ಸಾಮಾಜಿಕ ಸಂಸ್ಥೆ, ನಾಲಾಸೋಪರ, ಇದರ ವಾರ್ಷಿಕ ಅಯ್ಯಪ್ಪ ಮಹಾಪೂಜೆ.

Mumbai News Desk

ಶ್ರೀ ಕ್ಷೇತ್ರ ಕಾಂತವರ : ಜ. 14ರಿಂದ ವರ್ಷಾವಧಿ ಜಾತ್ರೆ

Mumbai News Desk

ಉಬಾರಮಣ್ಣು ಶ್ರೀ ಕೋಡ್ಬಬ್ಬು ದೈವಸ್ಥಾನ ಕೊಳುವೈಲು, ಪಾವಂಜೆ : ಎ. 4 ಹಾಗೂ ಎ. 5ರಂದು ವಾರ್ಷಿಕ ನೇಮೋತ್ಸವ

Mumbai News Desk

ಮಲಾಡ್ ಕನ್ನಡ ಸಂಘದ ಆಶ್ರಯದಲ್ಲಿ ಡಿ. 29 ರಂದು ಸದಸ್ಯ ಬಾಂಧವರಿಗೆ ಮತ್ತು ಮಕ್ಕಳಿಗಾಗಿ ಒಳಾಂಗಣ ಕ್ರೀಡಾಕೂಟ

Mumbai News Desk

ಡಿ. 19ರಂದು ದಹಿಸರ್‌ನಲ್ಲಿ 19ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk