July 23, 2026
Mumbai News Kannada
ತುಳುನಾಡು

ಕರ್ನಿರೆ: ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಕಾಲಾವಧಿ ನೇಮೋತ್ಸವ ಸಂಪನ್ನ







ಮೂಲ್ಕಿ: ಕಾರ್ನಿಕದ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದ ಕರ್ನಿರೆ ಗ್ರಾಮದ ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಕಾಲಾವಧಿ ನೇಮೋತ್ಸವವು ಏಪ್ರಿಲ್ 09 ರಿಂದ 11 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು:

ಏಪ್ರಿಲ್ 09: ರಾತ್ರಿ ಅಗರಗುತ್ತು ಕುಟುಂಬಿಕರ ಸೇವಾರ್ಥವಾಗಿ ದೀಪಾರಾಧನೆ ಬಲಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿಷ್ಣುಮೂರ್ತಿ ಕ್ರಿಕೆಟ್ ಕ್ಲಬ್ (ರಿ.) ಕರ್ನಿರೆ ಇವರ ಆಶ್ರಯದಲ್ಲಿ “ವೈರಲ್ ವೈಶಾಲಿ” ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡು ಜನಮನ ಸೆಳೆಯಿತು.

ಏಪ್ರಿಲ್ 10: ಮಧ್ಯಾಹ್ನ ಧ್ವಜಾರೋಹಣ ನೆರವೇರಿತು. ಬಳಿಕ ಮುಂಬೈ ಉದ್ಯಮಿ ಗಂಗಾಧರ ಎನ್. ಅಮೀನ್ (ಗುಲಾಬಿ ಭವನ, ಕರ್ನಿರೆ) ಇವರ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೀಪಾರಾಧನೆ ಬಲಿ ಹಾಗೂ ಭಂಡಾರ ಇಳಿಯುವ ಕಾರ್ಯಕ್ರಮ ಜರುಗಿತು.

ಏಪ್ರಿಲ್ 11: ಮಧ್ಯಾಹ್ನ ಕರ್ನಿರೆ ಪಟ್ಟೆಗುತ್ತು ದಿವಂಗತ ಐತಪ್ಪ ಪೂಜಾರಿಯವರ ಮೊಮ್ಮಗಳು ಹಾಗೂ ಕೃಷ್ಣ ಪೂಜಾರಿಯವರ ಪುತ್ರಿ ಚೇತನಾ ಕೃಷ್ಣ ಪೂಜಾರಿ ಇವರ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮುಂಬೈ ವಿರಾರ್‌ನ ಸಾಗರ್ ಹೋಟೆಲ್ ಮಾಲೀಕರಾದ ಶ್ರೀಮತಿ ಮತ್ತು ಶ್ರೀ ಪ್ರದೀಪ್ ಪೂಜಾರಿ ದಂಪತಿಯ ಸೇವಾರ್ಥವಾಗಿ ಅನ್ನಸಂತರ್ಪಣೆ ಜರುಗಿತು. ಅಂದು ರಾತ್ರಿ ಕ್ಷೇತ್ರದ ಪ್ರಧಾನ ಧಾರ್ಮಿಕ ವಿಧಿಯಾದ ಕಾಲಾವಧಿ ನೇಮೋತ್ಸವವು ಭಕ್ತಿ ಸೌರಭದೊಂದಿಗೆ ಸಂಪನ್ನಗೊಂಡಿತು.

:ಈ ಸಂದರ್ಭದಲ್ಲಿ ದೈವಸ್ಥಾನ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರು ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಬಿಲ್ಲವರ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ನಿರ್ದೇಶಕ ಗಂಗಾಧರ ಎನ್. ಅಮೀನ್ ಕರ್ನಿರೆ, ವಾಸುದೇವ ಶೆಟ್ಟಿ ಮಗಂದಾಡಿ, ಹರಿಶ್ಚಂದ್ರ ಶೆಟ್ಟಿ ಕರ್ನಿರೆಗುತ್ತು, ಗಣೇಶ್ ಸಾಲ್ಯಾನ್ ಅಗರಗುತ್ತು, ಜೈದೀಪ್ ಪಟ್ಟೆಗುತ್ತು, ಚಂದ್ರಶೇಖರ್ ಶೆಟ್ಟಿ ಕರ್ನಿರೆ ಹೊಸಮನೆ, ರವೀಂದ್ರ ಶೆಟ್ಟಿ ಸೇನರಬೆಟ್ಟು ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದರು.ಅಲ್ಲದೆ, ಮಹಾರಾಷ್ಟ್ರ ಹೋಟೆಲ್ ಆಂಡ್ ರೆಸ್ಟೋರೆಂಟ್ ಫೆಡರೇಶನ್‌ನ ವಿರಾರ್ ಶಂಕರ್ ಶೆಟ್ಟಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಮಾಜಿ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಬಿಲ್ಲವರ ಅಸೋಸಿಯೇಶನ್ ಮುಂಬೈ ಉಪಾಧ್ಯಕ್ಷ ಪುರುಷೋತ್ತಮ್ ಎಸ್. ಕೋಟ್ಯಾನ್, ಭಾರತ್ ಬ್ಯಾಂಕಿನ ಸಿಇಒ ಮತ್ತು ಎಂ.ಡಿ. ವಿದ್ಯಾನಂದ ಕರ್ಕೇರ ಮತ್ತಿತರ ಗಣ್ಯರು ನೇಮೋತ್ಸವದಲ್ಲಿ ಪಾಲ್ಗೊಂಡು ದೈವದ ಗಂಧಪ್ರಸಾದ ಸ್ವೀಕರಿಸಿದರು.



Related posts

ಮೂಲ್ಕಿ : ವಿಜಯಾ ಕಾಲೇಜು 1994-97ರ ಬಿಕಾಂ ಬ್ಯಾಚ್ ವತಿಯಿಂದ SSLC, PUC ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ

Mumbai News Desk

ಬಿಲ್ಲವ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ: ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಲಿ : ಪ್ರವೀಣ್‌ ಪೂಜಾರಿ ಆಗ್ರಹ.

Mumbai News Desk

ಮೂಲ್ಕಿ: ಪೂಂಜಾ ಚಾರಿಟೇಬಲ್ ಟ್ರಸ್ಟ್‌ನಿಂದ ಅಸಹಾಯಕರಿಗೆ ಚಿಕಿತ್ಸೆಗೆ ನೆರವು

Mumbai News Desk

ಹೆಜಮಾಡಿ : ವಿದ್ಯಾ ಪ್ರಸಾರ ವಿದ್ಯಾ ಮಂದಿರದಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಮತ್ತು ವನಮಹೋತ್ಸವ ಆಚರಣೆ

Mumbai News Desk

ಶ್ರೀ ಚಕ್ರ ಪೀಠ  ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣಗುಡ್ಡೆ ಮಹಾ ಚಂಡಿಕಾಯಾಗ ಮಹಾ ಮಂತ್ರಕ್ಷತೆ ಸಂಪನ್ನ

Mumbai News Desk

ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ : ಜುಲೈ. 28ಕ್ಕೆ ಆಟಿದ ಮದಿಪು

Mumbai News Desk