35 C
Mumbai
October 4, 2026
Mumbai News Kannada
ತುಳುನಾಡು

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ನಿಖಿಲ್ ಗುಪ್ತಾ ಭೇಟಿ: ಕಾಪು ಮಾರಿಯಮ್ಮ ದರ್ಶನ



ಕಾಪು: ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಡಾ. ನಿಖಿಲ್ ಗುಪ್ತಾ, ಐ.ಪಿ.ಎಸ್. ಅವರು ತಮ್ಮ ಪತ್ನಿ ಡಾ. ಶಾಲಿನಿ ಹಾಗೂ ಪುತ್ರನೊಂದಿಗೆ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರ್ಶನ ಪಡೆದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಅಮ್ಮನವರ ಅನುಗ್ರಹ ಪ್ರಸಾದ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಯ ವತಿಯಿಂದ ಅವರನ್ನು ಗೌರವಿಸಲಾಯಿತು.

ನೂತನ ದೇಗುಲ ನಿರ್ಮಾಣ ಕಾಮಗಾರಿ ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಸಮಿತಿಯ ಪದಾಧಿಕಾರಿಗಳು ಮಾಹಿತಿ ನೀಡಿದರು. ದೇಗುಲದ ವಾಸ್ತುಶಿಲ್ಪ ಹಾಗೂ ಸ್ವಚ್ಛತೆಯನ್ನು ಕಂಡು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಡಾ. ಶಾಲಿನಿ ಗುಪ್ತಾ ಅವರು ‘ನವದುರ್ಗಾ ಲೇಖನ ಯಜ್ಞ’ ಮತ್ತು ಶಾಶ್ವತ ಸೇವೆಗಳ ವಿವರ ಪಡೆದುಕೊಂಡು, ತಾವೂ ಮನೆಯಲ್ಲಿ ಒಂಬತ್ತು ದಿನಗಳ ಕಾಲ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿ ಲೇಖನ ಪುಸ್ತಕವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ವ್ಯವಸ್ಥಾಪಕ ಗೋವರ್ಧನ್ ಶೇರಿಗಾರ್, ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



Related posts

ಮೂಲ್ಕಿ : ವಿಜಯಾ ರೈತರ ಸೇವಾ ಸಂಘದ ಮಹಾಸಭೆ ಸದಸ್ಯರಿಗೆ ಶೇ ೧೨ ಡಿವಿಡೆಂಡ್

Mumbai News Desk

ಮೂಲ್ಕಿ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ಉದ್ಘಾಟನೆ

Mumbai News Desk

ಉಡುಪಿ ಇಂದ್ರಾಣಿ ನದಿ ಮಾಲಿನ್ಯ ನಿವಾರಣೆಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಿಲ್ಲಾಡಳಿತಕ್ಕೆ ತುರ್ತು ಮನವಿ

Mumbai News Desk

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕಿ ಮತ್ತು ನಟಿ ರೂಪ ಐಯ್ಯರ್ : ನವದುರ್ಗಾ ಲೇಖನ ಯಜ್ಞ ಸಂಕಲ್ಪ

Mumbai News Desk

ತುಳುವೆರೆ ‘ತುಡರ ಪರ್ಬ’: ಬಲಿ ಚಕ್ರವರ್ತಿ ಬೊಕ್ಕ ಬೆನ್ನಿ ಸಂಸ್ಕೃತಿದ ಸಂಗಮ

Mumbai News Desk

ಸಂಸ್ಕೃತಿ, ಬಾಂಧವ್ಯ ಮತ್ತು ಸಾಮರಸ್ಯದ ಸಂಗಮ: ಹೆಜಮಾಡಿಯಲ್ಲಿ ಕಳೆಗಟ್ಟಿದ ‘ಆಟಿಡೊಂಜಿ ದಿನ’ ಉತ್ಸವ

Mumbai News Desk