September 6, 2026
Mumbai News Kannada
ಪ್ರಕಟಣೆ

ಸಾಲಿಯಾನ್ ಆದಿ ಮೂಲಸ್ಥಾನ ಫಲಿಮಾರು : ಮೇ. 3ರಿಂದ ಮೇ 9ರ ತನಕ ನಾಗದೇವರಿಗೆ ಅಶ್ಲೇಷ ಬಲಿ, ನೂತನ ಗೋಪುರ ಸಮರ್ಪಣೆ, ನಾಗದೇವರ ಧರ್ಮದೈವಗಳ ವಾರ್ಷಿಕ ಉತ್ಸವ, ಧರ್ಮದೈವಗಳ ನೇಮೋತ್ಸವ.





ಸಾಲಿಯಾನ್ ಕುಟುಂಬಸ್ಥರು ನಂಬಿಕೊಂಡು ಬಂದಿರುವ ಫಲಿಮಾರು ಸಾಲಿಯಾನ್ ಆದಿ ಮೂಲಸ್ಥಾನದಲ್ಲಿ ತಾ. 03/05/25 ರಿಂದ 09/05/25ರ ವರೆಗೆ ನಾಗದೇವರಿಗೆ ಆಶ್ಲೇಷಾ ಬಲಿ, ದೇವಸ್ಥಾನದ ನೂತನ ಗೋಪುರ ಸಮರ್ಪಣೆ, ನಾಗದೇವರ, ಧರ್ಮದೈವಗಳ ವಾರ್ಷಿಕ ಉತ್ಸವ ಹಾಗೂ ಧರ್ಮದೈವಗಳ ನೇಮೋತ್ಸವ ಜರಗಲಿರುವುದು.
ಫಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ, ಫಲಿಮಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪಿ ಆರ್ ಶ್ರೀನಿವಾಸ್ ಉಡುಪರ ಪೌರೋಹಿತದಲ್ಲಿ ನಡೆಯುವ ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಸಕುಟುಂಬ ಸಮೇತರಾಗಿ ಆಗಮಿಸಿ ನಾಗದೇವರ ಹಾಗೂ ಧರ್ಮದೇವಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಸದಾಶಿವ ಪಡುಬಿದ್ರಿ ಮತ್ತು ಸಮಿತಿಯ ಸರ್ವ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಕಾಶ್ ಸಫಲಿಗ ಮತ್ತು ಸರ್ವ ಸದಸ್ಯರು, ಮುಂಬೈ ಶಾಖೆಯ ಅಧ್ಯಕ್ಷರಾದ ಮುಂಡ್ಕುರು ಸುರೇಂದ್ರ ಸಾಲಿಯನ್ ಮತ್ತು ಸರ್ವ ಸದಸ್ಯರು, ಮಹಿಳಾ ಸಮಿತಿಯ ಅಧ್ಯಕ್ಷೆ ಮೋಹಿನಿ ಎಸ್ ಪುತ್ರನ್ ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ.
ಕಾರ್ಯಕ್ರಮಗಳ ವಿವರ :
ತಾ. 03/05/25ನೇ ಶನಿವಾರ- ನೂತನ ಗೋಪುರದಲ್ಲಿ ವಾಸ್ತು ಪೂಜೆ,ವಾಸ್ತು ಹೋಮ, ವಾಸ್ತು ಬಲಿ
ತಾ. 04/05/25 ರವಿವಾರ – ಬೆಳಿಗ್ಗೆ ಗಂಟೆ 8 ರಿಂದ ಧರ್ಮ ದೈವಗಳಿಗೆ ಪಂಚವಿಂಶತಿ, ಕಲಶಾರಾಧನೆ, ಅದಿವಾಸ, ಹೋಮ, ಅಶ್ಲೇಷಾ ಬಲಿ, ಬೆಳಿಗ್ಗೆ ಗಂಟೆ 10ಕ್ಕೆ ನೂತನ ಗೋಪುರ ಲೋಕಾರ್ಪಣೆ ( ಅನುವಂಶಿಕ ಅರ್ಚಕರಾದ ವೇದಮೂರ್ತಿ ಪಿ ಆರ್ ಶ್ರೀನಿವಾಸ್ ಉಡುಪ ಇವರ ದಿವ್ಯ ಹಸ್ತದಲ್ಲಿ ) ಮಧ್ಯಾಹ್ನ ಗಂಟೆ 1.00ರಿಂದ ಅನ್ನ ಸಂತರ್ಪಣೆ (ಯಶೋಧಾ ದಾಮೋದರ ಮತ್ತು ಫ್ಯಾಮಿಲಿ ಬೆಂಗಳೂರು ಹೆಜಮಾಡಿ ಇವರ ಸೇವೆ )
ಸಂಜೆ ಗಂಟೆ 4ಕ್ಕೆ ನಾಗ ಸನ್ನಿಧಿಯಲ್ಲಿ ಪಂಚದೈವ ತುಂಬಿಲ.
ತಾ. 06/05/25 ಮಂಗಳವಾರ – ಬೆಳಿಗ್ಗೆ ಗಂಟೆ 8ರಿಂದ ವಾರ್ಷಿಕ ನಾಗತಂಬಿಲ – ನಾಗದರ್ಶನ, ಮಧ್ಯಾಹ್ನ ಗಂಟೆ 1.00ರಿಂದ ಅನ್ನ ಸಂತರ್ಪಣೆ ( ಶೇಖರ್ ಶೇರಿಗಾರ ಮತ್ತು ಫ್ಯಾಮಿಲಿ, ಮುಂಬೈ – ಸಚ್ಚರಿಪೇಟೆ ಅವರ ಸೇವೆ)
ಸಂಜೆ 6ರಿಂದ ಧರ್ಮದೈವಗಳ ನೇಮಹೋತ್ಸವ.
ತಾ. 07/05/25ನೇ ಬುಧವಾರ – ಸಂಜೆ ಗಂಟೆ 6ರಿಂದ ಧರ್ಮದೈಗಳ ನೇಮೋತ್ಸವ
ತಾ.08/05/25 ಗುರುವಾರ -ಏಕಾದಶಿ (ಕಾರ್ಯಕ್ರಮಗಳು ಇರುವುದಿಲ್ಲ)
ತಾ. 09.05.2025 ಶುಕ್ರವಾರ – ಸಂಜೆ ಗಂಟೆ 6ರಿಂದ ಧರ್ಮದೈವಗಳ ವಾರ್ಷಿಕ ತಂಬಿಲ.

ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ 👇🏻
ಸದಾಶಿವ ಪಡುಬಿದ್ರಿ – 9 8 8 0 7 9 1 6 2 2
ಪ್ರಕಾಶ್ ಸಪಲಿಗ – 9 8 4 5 1 6 8 1 9 7
ಚಂದ್ರಕಾಂತ್ ಹೆಜಮಾಡಿ – 7 3 5 3 1 5 3 4 7 1
ಯೋಗೀಶ್ ಸಾಲಿಯಾನ್ – 9 3 7 9 0 0 9 4 9 1
ಸಂದೀಪ್ ಸಾಲಿಯಾನ್ – 9 7 4 2 5 4 3 7 3 8



Related posts

ಮೇ. 10 : ವಿದ್ಯಾವಿಹಾ‌ರ್ ಪಶ್ಚಿಮದ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘ : ಮಾ. 9ರಂದು 66ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸಮಿತಿಯ ವತಿಯಿಂದ ಪೆ. 2 ರಂದು ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ,ಪೋರ್ಟ್; ಡಿ.21 ರಂದು 80ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಹಾಗೂ ಶನೀಶ್ವರ ಮಹಾಪೂಜೆ

Mumbai News Desk

ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬೊರಿವಿಲಿ 35ನೇ ವಾರ್ಷಿಕ ಶರನ್ನವರಾತ್ರಿ ಉತ್ಸವ.

Mumbai News Desk

ನ. 1ರಂದು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋದಯ 70ರ ಸಂಭ್ರಮ.

Mumbai News Desk