ಮುಂಬೈಯ ಅಂಧೇರಿ ಮೂಲದ ಹೋಟೆಲ್ ಮಾಲಕನಿಗೆ ಆಸ್ತಿ ಮಾರಾಟ ಮಾಡುವಂತೆ ಕೊಲೆ ಬೆದರಿಕೆ ಹಾಕಿದ್ದ ಗ್ಯಾಂಗ್ಸ್ಟರ್ ರವಿ ಮಲ್ಲೇಶ್ ಬೋರ ಅಲಿಯಾಸ್ ಡಿ ಕೆ ರಾವ್ ಮತ್ತು ಆತನ ಆರು ಮಂದಿ ಸಹಾಯಕರನ್ನು ಮುಂಬೈ ಕ್ರೈಮ್ ಬ್ರಾಂಚ್ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
30ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ಹೋಟೆಲ್ ಅನ್ನು ಹಿರಿಯ ನಾಗರಿಕರೊಬ್ಬರು ನಡೆಸುತ್ತಿದ್ದು, ಅದನ್ನು 2.5 ಕೋಟಿ ರೂಪಾಯಿಗೆ ಮಾರಟ ಮಾಡುವಂತೆ ಡಿ ಕೆ ರಾವ್ ಕಳೆದ ಒಂದು ವರ್ಷದಿಂದ ಬೆದರಿಕೆ ಹಾಕುತಿದ್ದರು.
ಡಿ. ಕೆ ರಾವ್ ಮತ್ತು ಇತರ ಆರು ಜನ ತಮ್ಮ ಹೋಟೆಲ್ ಅನ್ನು ಸ್ವಾಧೀನ ಪಡಿಸಿಕೊಳ್ಳಲು ಸಂಚುರೂಪಿಸಿದ್ದಾರೆ ಎಂದು ಆರೋಪಿಸಿ ಅಪರಾಧ ವಿಭಾಗದ ಸುಲಿಗೆ ನಿಗ್ರಹ ದಳಕ್ಕೆ, ಹೋಟೆಲ್ ಉದ್ಯಮಿ ದೂರು ನೀಡಿದ ಆದಾರದಲ್ಲಿ ಡಿ ಕೆ ರಾವ್ ಮತ್ತು ಅವರ ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಡಿ. ಕೆ ರಾವ್ ಅವರ ವಿರುದ್ಧ 41 ಪ್ರಕರಣಗಳು ದಾಖಲಾಗಿವೆ. ಅವರು ಕುಖ್ಯಾತ ಡಾನ್ ಚೋಟ ರಾಜನ್ ನ ಗ್ಯಾಂಗ್ ನ ಪ್ರಮಖ ಸದಸ್ಯನಾಗಿದ್ದು, ಮುಂಬೈಯ ಧಾರವಿ ನಿವಾಸಿ.
ರಾವ್ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ 6 ಕೊಲೆ, ಐದು ಡಕಾಯಿತಿ, ಮತ್ತು ಇತರ ಸುಲಿಗೆಗೆ ಸಂಬಂಧಿಸಿದ ಪ್ರಕರಣಗಳು ಸೇರಿವೆ. 2022ರ ಅಕ್ಟೋಬರ್ ನಲ್ಲಿ ಸಂಘಟಿತ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನಿಂದ ಡಿ ಕೆ ರಾವ್ ಅವರಿಗೆ ಜಮೀನು ನೀಡಲಾಯಿತು.

previous post