ಮುಲ್ಕಿ, ಜ. 30: ಮುಲ್ಕಿಯ ಹೊಸ ಆಂಗಣ ತಿಂಗಳ ಬೆಳಕು ಕಾರ್ಯಕ್ರಮವು ಜ. 29 ರಂದು ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಇದರ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಾಧಕರ ನೆಲೆಯಲ್ಲಿ ದೈವ ಪಾತ್ರಿ ಮಾನಂಪಾಡಿ ಯಾದವ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕ.ಸಾ.ಪ ಮಾಜಿ ಅದ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು. ಧಾರ್ಮಿಕತೆಯ ಸೇವೆಯಲ್ಲಿ ನಿರತರಾಗಿರುವವರನ್ನು ಆರಿಸಿ ಸನ್ಮಾನಿಸುವ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು.
ಅತಿಥಿಗಳಾಗಿ ಆಗಮಿಸಿದ್ದ ಮುಲ್ಕಿ ವಿಜಯ ರೈತರ ಸೊಸೈಟಿಯ ಅದ್ಯಕ್ಷ ರಂಗನಾಥ ಶೆಟ್ಟಿ, ಮುಲ್ಕಿ ತಾಲೂಕು ಕ. ಸಾ. ಪ ಹೋಬಳಿ ಅದ್ಯಕ್ಷ ಜೊಸ್ಸಿ ಪಿಂಟೋರವರು ಸಂದರ್ಭೋಚಿತವಾಗಿ ಮಾತನಾಡಿದರು. ಕೆ. ಎಸ್. ರಾವ್ ನಗರದ ಬಿಲ್ಲವ ಸಮಾಜ ಸೇವಾ ಸಂಘದ ಅದ್ಯಕ್ಷ ಮಹಾಬಲ ಸನಿಲ್, ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ಉಪಾದ್ಯಕ್ಷ ಮನೋಹರ್ ಕೋಟ್ಯಾನ್, ಜಯಪಾಲ್ ಶೆಟ್ಟಿ ಐಕಳ, ಉದ್ಯಮಿ ಜಾನ್ ಕ್ವಾಡ್ರಸ್, ವಿಜಯ ಕುಮಾರ್ ಕುಬೆವೂರು, ಬಂಕಿ ನಾಯಕ್, ರವಿಚಂದ್ರ ಹಾಗೂ ವಾಸು ಪೂಜಾರಿ ಚಿತ್ರಾಪು ಮೊದಲಾದವರು ಉಪಸ್ಥಿತರಿದ್ದರು.
ಹೊಸ ಆಂಗಣ ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು. ದಿನೇಶ್ ಶೆಟ್ಟಿ ದನ್ಯವಾದ ಅರ್ಪಿಸಿದರು. ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು.
