
” ಮೂಲತ್ವ ನಾನೇ ನೀನು ನೀನೇ ನಾನು” ಎಂಬ ತತ್ವದಡಿಯಲ್ಲಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಹಲವಾರು ವರ್ಷಗಳಿಂದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಇದೀಗ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆ ಪದವು, ಉಳ್ಳಾಲ ತಾಲೂಕ್ ಇಲ್ಲಿ ವಿದ್ಯಾರ್ಥಿಗಳಿಗೆ ವಿಶ್ರಾಂತಿ ಕೊಠಡಿ “ಸಾಂತ್ವನ” ನಿರ್ಮಿಸಿದ್ದು, ಇದರ ಲೋಕಾರ್ಪಣೆ ಕಾರ್ಯಕ್ರಮವು ಎಪ್ರಿಲ್ 27ರಂದು ಬೆಳಿಗ್ಗೆ 10 ಗಂಟೆಗೆ ಜರಗಲಿದೆ.
ಕರ್ನಾಟಕ ವಿಧಾನಸಭೆಯ ಸಭಾಪತಿ ಯು ಟಿ ಖಾದರ್ ಅವರು ಕೊಠಡಿಯನ್ನು ಉದ್ಘಾಟಿಸಲಿರುವರು. ನರಿಂಗಾನ ಗ್ರಾಮ ಪಂಚಾಂಯತ್ ನ ಅಧ್ಯಕ್ಷ ನವಾಜ್ ಕಲ್ಲರಕೋಡಿ ಅವರು ಅಧ್ಯಕ್ಷತೆ ವಹಿಸಲಿರುವರು.
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್, ಪದವಿ ಪೂರ್ವ ಕಾಲೇಜು ವಿಭಾಗ ಮೊಂಟುಗೋಳಿ ಇದರ ಕಾರ್ಯಧ್ಯಕ್ಷ ಅಬ್ದುಲ್ ಜಲೀಲ್, ಕೆಪಿಎಸ್ ಹೈಸ್ಕೂಲ್ ಮೊಂಟೆಪದವು ಇದರ ಕಾರ್ಯಾಧ್ಯಕ್ಷ ಮುರುಳಿಧರ್ ಶೆಟ್ಟಿ ಮೋರ್ಲ, ಪ್ರಾಥಮಿಕ ಶಾಲಾ ವಿಭಾಗದ ಕಾರ್ಯ ಧ್ಯಕ್ಷ ಮೊಹಮ್ಮದ್ ಹನೀಫ್ ಚಂದಹಿತ್ಲು, ಬಂಟ್ವಾಳದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಎಂ ಜಿ, ವಿಶ್ವ ಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಉಪಾಧ್ಯಕ್ಷ ಹರೀಶ್ ಕೆ ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಕೆ. ಪಿ. ಎಸ್. ಮೊಂಟೆಪದವು ಇದರ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಎಸ್ ಡಿ ಎಂ ಸಿ ಸದಸ್ಯರು, ಹಾಗೂ ಅಧ್ಯಾಪಕ ವೃಂದದವರು, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಪ್ರಕಾಶ್ ಕೋಟ್ಯಾನ್, ಅಧ್ಯಕ್ಷರು, ಹಾಗೂ ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಸ್ವಾಗತ ಬಯಸಿದ್ದಾರೆ.