
ಮುಂಬಯಿ: ಮುಂಬಯಿ ಮಹಾನಗರದ ಅತ್ಯಂತ ಹಿರಿಯ ಹಾಗೂ ಪ್ರತಿಷ್ಠಿತ ಜಾತಿಯ ಸಂಸ್ಥೆಗಳೊಂದಾದ ಕುಲಾಲ ಸಂಘ ಮುಂಬಯಿ ಇದರ 93ನೇ ವಾರ್ಷಿಕ ಮಹಾಸಭೆಯು ನ. 19 ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10ಕ್ಕೆ ಸರಿಯಾಗಿ ಪೇಜಾವರ ಮಠದ ಸಭಾಗ್ರಹ, ಯೋಗ ಇನ್ಸ್ಟಿಟ್ಯೂಟ್ ನ ಹಿಂಬದಿ , ಪ್ರಭಾತ್ ಕಾಲೊನಿ, ಸಂತಾಕ್ರುಜ್ (ಪೂ) ಮುಂಬಯಿ 400055 ಇಲ್ಲಿ ಸಂಘದ ಅಧ್ಯಕ್ಷರಾದ ರಘು ಎ .ಮೂಲ್ಯ ಪಾದೆ ಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಜರಗಲಿರುವುದು.
ಮಹಾಸಭೆಯಲ್ಲಿ ವಾರ್ಷಿಕ ವರದಿ, ಆಯ – ವ್ಯಯ ವಿವರವನ್ನು ಸಭೆಯ ಮುಂದಿಟ್ಟು ಮಂಜೂರು ಮಾಡುವುದು, ನೂತನ ಲೆಕ್ಕ ಪರಿಶೋಧಕರ ನೇಮಕ , ಸಂಘದ ಹಿರಿಯ ಸಮಾಜ ಸಾಧಕರಾದ ಕುಲಾಲ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಹಾಗೂ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲಿಯಾನ್, ಸಂಘದ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಹಾಗೂ ಗೋರೆಗಾಂವ್ ನ ಸದ್ಗುರು ನಿತ್ಯಾನಂದ ಆಶ್ರಮದ ಅಧ್ಯಕ್ಷ ರಾಘು ಆರ್ ಮೂಲ್ಯ ಗೋರೆಗಾಂವ್, ಸಂಘದ ಮೀರರೋಡ್ – ವಿರಾರ್ ಸ್ಥಳೀಯ ಸಮಿತಿಯ ಸಕ್ರಿಯ ಸದಸ್ಯ ಹಾಗೂ ಅಮೂಲ್ಯ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯ ರಘುನಾಥ್ ಕರ್ಕೇರ ಬಾಯಂಧರ್ ಇವರನ್ನು ಸನ್ಮಾನಿಸಲಾಗುವುದು.
ಸಂಘಕ್ಕೆ ವಿಶೇಷವಾಗಿ ಶ್ರಮಿಸಿದ ದಿ. ಪಿ.ಕೆ . ಸಾಲಿಯಾನ್ ಸ್ಮರಣಾರ್ಥ ರೋಲಿಂಗ್ ಶೀಲ್ಡ್ ಸ್ಮರಣಿಕೆಯನ್ನು ರೇಣುಕಾ. ಎಸ್. ಸಾಲಿಯಾನ್, ದಿ. ಪಿ .ಜಿ.ಮೂಲ್ಯ ಸ್ಮರಣಾರ್ಥ ನೀಡುವ ರೋಲಿಂಗ್ ಕಪ್ ನ್ನು ಹರಿಯಪ್ಪ .ಕೆ. ಮೂಲ್ಯ ದೊಂಬಿವಲಿ, ದಿ. ಆರ್. ಎಂ.ಮಡ್ವ ಸ್ಮರಣಾರ್ಥ ರೋಲಿಂಗ್ ಶೀಲ್ಡ್ ನ್ನು ಜಯ ಅಂಚನ್ ರವರಿಗೆ ನೀಡಿ ಗೌರವಿಸಲಾಗುವುದು.
ಈ ಸಲದ ವಿಧ್ಯಾರ್ಥಿಗಳಿಗೆ ಪ್ರತಿಭೆ ಪುರಸ್ಕಾರ,ವಿಧ್ಯಾರ್ಥಿ ವೇತನ ,ದತ್ತು ಸ್ವೀಕಾರ ದಾನಿಗಳಿಗೆ ಸನ್ಮಾನ, ಘನ ಪೋಷಕ ಮತ್ತು ಮಹಾ ಪೋಷಕರನ್ನು ಸತ್ಕರಿಸಲಾಗುವುದು .
ಮನರಂಜನೆಯ ಕಾರ್ಯಕ್ರಮದ ಅಂಗವಾಗಿ ಉಪಸಮಿತಿಯ ಮಹಿಳಾ ವಿಭಾಗದವರಿಂದ ನೃತ್ಯ ಕಾರ್ಯಕ್ರಮ ಜರಗಲಿದೆ. ಸದಸ್ಯರೆಲ್ಲರೂ ಕ್ಲಪ್ತ ಸಮಯಕ್ಕೆ ಹಾಜರಿದ್ದು ಈ ಮಹಾಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಗೌ ಅಧ್ಯಕ್ಷರಾದ ದೇವದಾಸ್ ಕುಲಾಲ್, ಉಪಾಧ್ಯಕ್ಷರು ಡಿ ಐ ಮೂಲ್ಯ . ಗೌ.ಪ್ರ. ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್ .,ಕೋಶಾಧಿಕಾರಿ ಜಯ ಅಂಚನ್. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್ ಮತ್ತು ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರು ವಿನಂತಿಸಿದ್ದಾರೆ.