July 23, 2026
Mumbai News Kannada
ಪ್ರಕಟಣೆ

ಜ. 31ರಿಂದ ಹೆಜಮಾಡಿಯಲ್ಲಿ ಮಹಿಳಾ ಕ್ರಿಕೆಟ್ ಹಬ್ಬ:ಪಡುಬಿದ್ರಿ ಯುವವಾಹಿನಿಯಿಂದ ಬಿಲ್ಲವ ಮಹಿಳಾ ಪ್ರೀಮಿಯರ್ ಲೀಗ್







ಯುವವಾಹಿನಿ ಪಡುಬಿದ್ರಿ ಘಟಕದ ಆಶ್ರಯದಲ್ಲಿ ಜ.31, ಫೆ.1ರಂದು ಹೆಜಮಾಡಿಯ ಬಸ್ತಿಪಡ್ಪು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬಿಲ್ಲವ ಪ್ರೀಮಿಯರ್ ಲೀಗ್-2026 ಮಹಿಳಾ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ, ದುಬೈ, ಕುವೈಟ್ 2, ಬೆಂಗಳೂರು, ಕೊಲ್ಯ, ಕಾರ್ಕಳ, ಪಡುಬಿದ್ರಿ ಮತ್ತು ಹೆಜಮಾಡಿಯ ಒಟ್ಟು 8 ಮಹಿಳಾ ತಂಡಗಳು ಭಾಗವಹಿಸುವ ಲೀಗ್ ಮಾದರಿ ಕ್ರಿಕೆಟ್ ಪಂದ್ಯಾವಳಿಯ ಪ್ರತಿಯೊಂದು ತಂಡದಲ್ಲೂ ಇತರ ಸಮಾಜದ ಐವರು ಮಹಿಳಾ ಕ್ರಿಕೆಟಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಮಹಿಳಾ ಕ್ರಿಕೆಟ್ ಪ್ರತಿಭೆಗಳಿಗೆ ಮುನ್ನೆಲೆಗೆ ಬರಲು ಉತ್ತಮ ಅವಕಾಶ ಕಲ್ಪಿಸಲಾಗಿದೆ ಎಂದರು.
ಜ.31ರಂದು ಬೆಳಗ್ಗೆ 10ಗಂಟೆಗೆ ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ವಿಧಿತ್ ಪೂಜಾರಿ karnire ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ರಕ್ಷಾ ಪೂಜಾರಿ ಕಾರ್ಕಳ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಕಾರ್ಯದ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ ಉಪಸ್ಥಿತರಿರುವರು.
ಫೆ.1ರಂದು ಸಂಜೆ 6ಗಂಟೆಗೆ ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ಗಣ್ಯರು ಭಾಗಿಯಾಗಲಿದ್ದಾರೆ.
ಲೀಗ್ ಮಾದರಿಯಲ್ಲಿ ತಲಾ 6 ಓವರ್‌ಗಳ ಪಂದ್ಯ ನಡೆಯಲಿದ್ದು ವಿಜೇತರಿಗೆ ಪ್ರಥಮ ಪ್ರಶಸ್ತಿ ರೂಪದಲ್ಲಿ 1 ಲಕ್ಷ ರೂ., ದ್ವಿತೀಯ 50 ಸಾವಿರ ರೂ., ತೃತೀಯ 25 ಸಾವಿರ ರೂ. ಜೊತೆಗೆ ಸರಣಿ ಶ್ರೇಷ್ಠರಿಗೆ ನಗದು 20 ಸಾವಿರ, ಅತ್ಯುತ್ತಮ ಬ್ಯಾಟರ್ ನಗದು 10 ಸಾವಿರ ರೂ., ಅತ್ಯುತ್ತಮ ಬೌಲರ್ ನಗದು 10 ಸಾವಿರ ವೈಯಕ್ತಿಕ ಬಹುಮಾನಗಳಿವೆ.
ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ವಿಧಿತ್ ಪೂಜಾರಿ ಕರ್ನಿರೆ, ಮಾಜಿ ಅಧ್ಯಕ್ಷರಾದ ಯಶೋದಾ, ರವಿರಾಜ್ ಕೋಟ್ಯಾನ್ ಮತ್ತು ಅಶೋಕ್ ಪೂಜಾರಿ ಉಪಸ್ಥಿತರಿದ್ದರು.



Related posts

ಮಾ. 24: ಮಹಿಳಾ ದಿನಾಚರಣೆ ಅಂಗವಾಗಿ ಸ್ಟೇಫೈನ್ (Stay Fine) ಸೂಪರ್‌ಮಾರ್ಟ್‌ನಿಂದ ‘ನಾರಿ ಶಕ್ತಿ’ ಸನ್ಮಾನ ಮತ್ತು ಹಳದಿ-ಕುಂಕುಮ ಸಮಾರಂಭ, ಮಹಿಳೆಯರಿಗೆ ಆಕರ್ಷಕ ಉಡುಗೊರೆ

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ), ಮುಂಬೈ: ಜೂನ್ 21ರಂದು ಯೋಗ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ

Mumbai News Desk

ಕರ್ನಾಟಕ ಸಂಘ, ಕಲ್ಯಾಣ: 23 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು 23ನೇ ವಾರ್ಷಿಕೋತ್ಸವ

Mumbai News Desk

ಮಲಾಡ್ ಪೂರ್ವ ಶ್ರೀ ದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೆ. 22 ರಿಂದ ಅ. 2ರ ವರೆಗೆ ನವರಾತ್ರಿ ಉತ್ಸವ

Mumbai News Desk

ಓಂ ಶ್ರೀ ಜಗದೀಶ್ವರಿ ದೇವಸ್ಥಾನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬೊರಿವಲಿಜ.20ಕ್ಕೆ ಸುವರ್ಣ ಮಹೋತ್ಸವದ ನಿಮ್ಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ.

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮುಂಬೈ : ಜ. 4ರಂದು, 80ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk