September 6, 2026
Mumbai News Kannada
ಮುಂಬಯಿ

ಶ್ರೀ ಜಗದಂಬಾ ಮಂದಿರ ಡೊಂಬಿವಲಿ – ನಾಗರ ಪಂಚಮಿ ಆಚರಣೆ






ಡೊಂಬಿವಲಿಯ ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಶ್ರೀ ಜಗದಂಬ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನಾಗರ ಪಂಚಮಿ ಪೂಜೆಯು ಮಂದಿರದ ಪ್ರದಾನ ಅರ್ಚಕರಾದ ಸುಬ್ರಹ್ಮಣ್ಯ ರಾವ್ ಭಟ್ ಮೀರಾ ರೋಡ್ ಹಾಗು ಜಗದೀಶ್ ಭಟ್ ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಿತು.

ಬೆಳಿಗ್ಗೆ ಪ್ರಾತಃ ಕಾಲ ಶ್ರೀ ದೇವಿಗೆ ಅಭಿಷೇಕ, ನಿತ್ಯ ಪೂಜೆ ನಡೆದು 8.30 ರಿಂದ ನಾಗ ತನು, ಅಭಿಷೇಕ ಹಾಗು 11.30 ರಿಂದ ಆಶ್ಲೇಷ ಬಲಿ ಪೂಜೆ ನಡೆದು 12:30 ಗೆ ಮಹಾಮಂಗಳಾರತಿ ಬೆಳಗಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.

ಈ ಧಾರ್ಮಿಕ ಉತ್ಸವದಲ್ಲಿ ಮಂದಿರದ ಅಧ್ಯಕ್ಷರಾದ ದಿವಾಕರ್ ರೈ ದಂಪತಿಗಳು ಉಪಾಧ್ಯಕ್ಷರಾದ ರವೀಂದ್ರ ವೈ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಕೋಶಾಧಿಕಾರಿ ಸಂತೋಷ್ ಶೆಟ್ಟಿ ದಂಪತಿಗಳು, ಜೊತೆ ಕೋಶಾಧಿಕಾರಿ ಹರೀಶ್ ಕೋಟ್ಯಾನ್, ಮಂದಿರದ ಸಲಹೆಗಾರರಾದ ಸತೀಶ್ ಶೆಟ್ಟಿ ಅಜೆಕಾರು ದಂಪತಿಗಳು, ಡೊಂಬಿವಲಿಯ ಸಮಾಜ ಸೇವಕ ಬಿಜೆಪಿ ಸೌತ್ ಸೇಲ್ ಅಧ್ಯಕ್ಷರಾದ ರತನ್ ಪೂಜಾರಿ, ಬಿಲ್ಲವರ ಅಸೋಸಿಯೇಷನ್ ಮುಂಬಯಿ ಯ ಕೋಶಾಧಿಕಾರಿ ರವಿ ಸನಿಲ್ ದಂಪತಿಗಳು, ಸಾಯಿನಾಥ್ ಮಿತ್ರ ಮಂಡಳಿಯ ಅಧ್ಯಕ್ಷರಾದ ಮೋಹನ್ ಸಾಲ್ಯಾನ್, ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿಯ ದಿನೇಶ್ ಮೊಗವೀರ, ಉದ್ಯಮಿ ಲಕ್ಷ್ಮಣ ಪೂಜಾರಿ, ಉದ್ಯಮಿ ರವಿ ಪೂಜಾರಿ ಹಾಗೂ ಅನೇಕ ಡೊಂಬಿವಲಿಯ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಂದಿರದ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಸಹಕರಿಸಿದರು. ಹೆಚ್ಚಿನ ಭಕ್ತರು ಬಂದು ಪೂಜೆ ಹಾಗೂ ಅನ್ನಸಂರ್ಪಣೆ ಯಲ್ಲಿ ಪಾಲ್ಗೊಂಡರು.



Related posts

ದಿವಾಕರ್ ಕರ್ಕೇರರ ಅಭಿನಂದನಾ ಸಮಾರಂಭ.

Mumbai News Desk

ಗೋರೆಗಾಂವ್ : ಸುಂದರಿ ಎಸ್ ಪಡುಬಿದ್ರಿ ನಿಧನ

Mumbai News Desk

ಭಾರತ್ ಬ್ಯಾಂಕ್, ವಿಲೇಪಾರ್ಲೆ (ಪಶ್ಚಿಮ) ಶಾಖೆಯಿಂದ ದಶಮಾನೋತ್ಸವ ಆಚರಣೆ.

Mumbai News Desk

ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಅಶ್ರಯದಲ್ಲಿ ಶೈಕ್ಷಣಿಕ ನೆರವು, ದತ್ತು ಸ್ವೀಕಾರ ಕಾರ್ಯಕ್ರಮ

Mumbai News Desk

ಎಲ್ಲರ ಬದುಕಲ್ಲಿ ಧರ್ಮ ಕಾರ್ಯಗಳು ನಡೆಯಲಿ: ಸಾಣೂರು ಸಾಂತಿಂಜ ಜನಾರ್ದನ ಭಟ್‌

Mumbai News Desk

ಮಲಾಡ್ ಪೂರ್ವ  ಶನಿ ಮಂದಿರದ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ,

Mumbai News Desk