September 1, 2026
Mumbai News Kannada
ಪ್ರಕಟಣೆ

ಮೇ 30ರಂದು ಮಲಾಡ್ ಪೂರ್ವದ ಉತ್ಕರ್ಷ ಶಾಲಾ ಮೈದಾನದಲ್ಲಿ ಸ್ವಾಮಿ ಕೊರಗಜ್ಜ ನೇಮೋತ್ಸವ






​ಮುಂಬಯಿ, ಮೇ 30: ಧಾರ್ಮಿಕ ಮತ್ತು ಸಾಮಾಜಿಕ ಸೇವಾಕರ್ತರಾದ, ಅಯ್ಯಪ್ಪ ಸ್ವಾಮಿಯ ಪರಮ ಭಕ್ತ ನವೀನ್ ಅಂಚನ್ ಅವರ ನೇತೃತ್ವದಲ್ಲಿ, ತುಳು-ಕನ್ನಡಿಗರ ಒಕ್ಕೂಟವಾದ ‘ಸ್ವಾಮಿ ಕೊರಗಜ್ಜ ನೇಮೋತ್ಸವ ಸಮಿತಿ ಮಲಾಡ್’ ಇದರ ವತಿಯಿಂದ ಮೇ 30ರ ಶನಿವಾರದಂದು ಮಲಾಡ್ ಪೂರ್ವದ ಪುಷ್ಪಾ ಪಾರ್ಕ್‌ನಲ್ಲಿರುವ ಉತ್ಕರ್ಷ ಶಾಲೆಯ ಮೈದಾನದಲ್ಲಿ ತಡಸಂಜೆ ‘ಸ್ವಾಮಿ ಕೊರಗಜ್ಜ ನೇಮೋತ್ಸವ’ ಜರುಗಲಿದೆ.
​ಅಂದು ಅಪರಾಹ್ನ 3:00 ಗಂಟೆಯಿಂದ ಮಲಾಡ್ ಪೂರ್ವದ ಗೋಲ್ ಗಾರ್ಡನ್‌ನಿಂದ ಉತ್ಕರ್ಷ ಶಾಲಾ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ.


​ಕಾರ್ಯಕ್ರಮದ ವಿವರ:
​ಸಂಜೆ 6:00 ರಿಂದ: ನೇಮೋತ್ಸವ ಪ್ರಾರಂಭ.
​ರಾತ್ರಿ 8:00 ರಿಂದ: ಮಹಾ ಅನ್ನಸಂತರ್ಪಣೆ.
​ತಡರಾತ್ರಿ: ಕೊರಗಜ್ಜನ ಕರಿಗಂಧ ಪ್ರಸಾದ ವಿತರಣೆ.


​ಈ ಭಕ್ತಿಪೂರ್ವಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಮಲಾಡ್ ಪೂರ್ವದ ಸ್ವಾಮಿ ಕೊರಗಜ್ಜ ನೇಮೋತ್ಸವ ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಮಲಾಡ್ ಪೂರ್ವ   ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ ಜೂ 6 ರಂದು ಶನಿ ಜಯಂತಿ ಉತ್ಸವ

Mumbai News Desk

ಜಗಜ್ಯೋತಿ ಕಲಾವೃಂದದ ಸಾಹಿತ್ಯ ಪ್ರಶಸ್ತಿ ಪ್ರಕಟ: ಪ್ರಜ್ಞಾ ಮತ್ತಿಹಳ್ಳಿ, ತೇಜಾವತಿ ಎಚ್.ಡಿ. ಆಯ್ಕೆ

Mumbai News Desk

ಕರುನಾಡ ಸಿರಿ – ಏಪ್ರಿಲ್ 14ಕ್ಕೆ ವಾರ್ಷಿಕ ಕ್ರೀಡಾಕೂಟ

Mumbai News Desk

    ಕುಲಾಲ ಸಂಘ ಮುಂಬಯಿ :  ಅ 27ರಂದು  94ನೇ ವಾರ್ಷಿಕ ಮಹಾಸಭೆ.

Mumbai News Desk

SHREE JAI BHAVANI SHANEESHWARA MANDIR – Appeal

Mumbai News Desk

  ಜ 22 :  ಪುಣೆ  ಪಿಂಪ್ರೀ ಚಿಂಚ್ವಾಡ್ ಬಂಟರ ಸಂಘ ವತಿಯಿಂದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ರಿಂದ  “ಸೀತಾರಾಮ ಕಲ್ಯಾಣ” ಹರಿಕಥೆ, ಶ್ರೀರಾಮ ದೇವರಿಗೆ ಮಹಾಪೂಜೆ .

Mumbai News Desk