July 21, 2026
Mumbai News Kannada
ಪ್ರಕಟಣೆ

ವಿದ್ಯಾವಿಹಾರ್ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ : ಜೂನ್ 14ರಂದು ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.







ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಮತ್ತು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಜಂಟಿ ಆಯೋಜನೆಯಲ್ಲಿ ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ “ಸಂಪೂರ್ಣ ಶ್ರೀ ರಾಮ ಚರಿತ್ರೆ – ಶ್ರೀ ರಾಮ ಕಥಾ ಹೃದಯಂ’ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ ಒಂಬತ್ತನೆ ಪ್ರಸ್ತುತಿಃ ‘
ವಾಲಿ ಮೋಕ್ಷ
ಮತ್ತು ಸಮ್ಮಾನ ಕಾರ್ಯಕ್ರಮವು ಜೂನ್ 14ರಂದು ಅಪರಾಹ್ನ 2.15 ರಿಂದ ವಿದ್ಯಾವಿಹಾರ್ ಪಶ್ಚಿಮದ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಶ್ರೀ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ, ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ ವಿದ್ಯಾವಿಹಾರ್ ಇದರ ಆಡಳಿತ ಮೊಕ್ತಸರ ಹರಿದಾಸ ಗೋಪಾಲ್ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ನಡೆಯಲಿರುವ ಸಮಾರಂಭದಲ್ಲಿ, ಕಳೆದ 5 ದಶಕಗಳಿಂದ ಹೆಚ್ಚು ಮುಂಬೈ ಮಹಾನಗರದಲ್ಲಿ ಕಲಾಸೇವೆಗೈಯ್ಯುತ್ತಿರುವ ಶ್ರೀ ಆನಂದ ಶೆಟ್ಟಿ ಇನ್ನಾ ಇವರನ್ನು ಸಪತ್ನಿಕರಾಗಿ ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್ ಇವರ ಆಶಯದಂತೆ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವೇ| ಮೂ| ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಾಪೋಷಕರಾದ ಶ್ರೀ ಕಿಶೋರ್. ಕೆ ಶೆಟ್ಟಿ ಐಕಳ (ಉಪಾಧ್ಯಕ್ಷರು ಬೋಂಬೆ ಬಂಟ್ಸ್ ಅಸೋಸಿಯೇಷನ್ ಜೂಹಿ ನಗರ ) ಶ್ರೀ ರವೀಂದ್ರನಾಥ ಭಂಡಾರಿ (CMD-welcome packaging industries )
ಶ್ರೀ ನವೀನ್ ಶೆಟ್ಟಿ ಇನ್ನಾಬಾಳಿಕೆ (ಅಧ್ಯಕ್ಷರು ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ )ಆಗಮಿಸಲಿದ್ದಾರೆ.

ರಾಮಾಯಣ ಕಥಾಮೃತದ * ಗಾನ ವೈಭವ* ಪ್ರಸಿದ್ಧ ಭಾಗವತ ಶಿರೋಮಣಿಗಳಾದ ಶ್ರೀ ಮದುಕರಹೆಗ್ಡೆ* ಮಡಾಮಕ್ಕಿ *ಶ್ರೀಮತಿ *ಜಯಲಕ್ಷ್ಮಿ ದೇವಾಡಿಗ*
ಹಾಗೂ ಶ್ರೀ ಮಹೇಂದ್ರ ಶೆಟ್ಟಿಇವರಿಂದ ನಡೆಯಲಿರುವುದು
ಶ್ರೀ ಗಾಂವ್‌ದೇವಿ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ, ವಿದ್ಯಾ ವಿಹಾರ ಇಲ್ಲಿಯ ಆಡಳಿತ ಮೊಕ್ತೇಸರರಾದ ಶ್ರೀ ಹರಿದಾಸ ಗೋಪಾಲ ಶೆಟ್ಟಿ ಅವರ ಗೌರವ ಉಪಸ್ಥಿತಿಯಿರುವುದು.

ಕಲಾಭಿಮಾನಿಗಳು, ಕಲಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕಲಾವಿದರೂ, ಕಲಾ ಸಂಘಟಕರಾದ ವಾಸು ಮಾರ್ನಾಡ್ ಮತ್ತು ಸುರೇಶ್ ನಂದ್ರೋಳ್ಳಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ



Related posts

*11 ನೇ ವರ್ಷದ ಪಟ್ಲ ಸಂಭ್ರಮ 2026**ಮೇ 30 ರಂದು ಅಡ್ಯಾರ್ ಗಾರ್ಡನ್ ನಲ್ಲಿ ಕಾರ್ಯಕ್ರಮ**ಡಾ| ಆಳ್ವರಿಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ, ಪೊಲ್ಯರಿಗೆ  ಯಕ್ಷಧ್ರುವ ಪಟ್ಲ ಪ್ರಶಸ್ತಿ*

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಜ. 16ಕ್ಕೆ ವರ್ದಂತಿ ಉತ್ಸವ ಮತ್ತು ಪ್ರಾಣ ಪ್ರತಿಷ್ಠಾ ಮಹೋತ್ಸವ

Mumbai News Desk

ಎ. 14 ರಂದು ಗೋರೆಗಾಂವ್ ಕರ್ನಾಟಕ ಸಂಘದ ತುಳು ಪರ್ಬ ದತ್ತಿ ನಿಧಿ ಕಾರ್ಯಕ್ರಮ  

Mumbai News Desk

ಏಪ್ರಿಲ್ 4 ರಂದು ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ), ಮುಂಬೈ ವತಿಯಿಂದ ಶನಿ ಪೂಜೆ ಮತ್ತು ಭಜನಾ ಸಂಧ್ಯಾ

Mumbai News Desk

Moorura Bovi (Moya) Mahasabha, Mumbai – AGM on 22/9/24.

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನ: ಏಪ್ರಿಲ್ 10 ಮತ್ತು 11 ರಂದು ವರ್ಧಂತಿ ಪಲ್ಲಕ್ಕಿ ಉತ್ಸವ, ನೇಮೋತ್ಸವ

Mumbai News Desk