September 6, 2026
Mumbai News Kannada
ಕ್ರೀಡೆ

ಸುರತ್ಕಲ್ ಬಂಟ್ಸ್ ಕ್ರಿಕೆಟ್ ಜೆರ್ಸಿ ಹಾಗೂ ಟ್ರೋಫಿ ಅನಾವರಣ





“ಯುವಕರು ಸಮಾಜಕ್ಕೆ ಮಾದರಿಯಾಗಬೇಕು” – ಐಕಳ ಹರೀಶ್ ಶೆಟ್ಟಿ

ಸುರತ್ಕಲ್: ಸುರತ್ಕಲ್ ಬಂಟರ ಸಂಘದ ಯುವ ಘಟಕದ ವತಿಯಿಂದ ಏಪ್ರಿಲ್ 28 ಮತ್ತು 29ರಂದು ನಡೆಯಲಿರುವ ‘ಬಂಟ್ಸ್ ಕ್ರಿಕೆಟ್ ಲೀಗ್’ ಪಂದ್ಯಾಕೂಟದ ಜೆರ್ಸಿ ಮತ್ತು ಟ್ರೋಫಿ ಅನಾವರಣ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದ ವಠಾರದಲ್ಲಿ ನಡೆಯಿತು.

​ಪಟ್ಲ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರು ಪಂದ್ಯಾಕೂಟದ ಟ್ರೋಫಿ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, “ಕಲೆಗೆ ಜಾತಿ ಇಲ್ಲ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಸುಲಭದ ಕೆಲಸವಲ್ಲ. ಎಲ್ಲರೂ ತನು-ಮನ-ಧನದಿಂದ ಸಹಕರಿಸಿ ಪಂದ್ಯಾಕೂಟವನ್ನು ಯಶಸ್ವಿಗೊಳಿಸಬೇಕು” ಎಂದು ಶುಭ ಹಾರೈಸಿದರು.

​ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, “ಸಮಾಜದ ನಾಯಕರು ಮುಂದಿನ ಪೀಳಿಗೆಗೆ ಮಾದರಿಯಾಗಿರಬೇಕು. ನಮ್ಮ ಶಕ್ತಿ ಬಂಟ ಸಮಾಜದ ಏಳಿಗೆಗೆ ಬಳಕೆಯಾಗಬೇಕು. ಸಮಾಜದ ಪ್ರತಿಭೆಗಳಿಗೆ ನಾವೆಲ್ಲರೂ ಒಗ್ಗಟ್ಟಾಗಿ ಪ್ರೋತ್ಸಾಹ ನೀಡಬೇಕಿದೆ. ನಮ್ಮ ಯುವ ಸಮುದಾಯ ಎಲ್ಲಾ ಸ್ತರಗಳಲ್ಲೂ ಬೆಳೆದು ಇತರರಿಗೆ ಮಾದರಿಯಾಗಲಿ” ಎಂದು ನುಡಿದರು.

​ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯುವ ವಿಭಾಗದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡಿ, “ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಲು ಬಂಟರ ಸಂಘಗಳು ಶ್ರಮಿಸಬೇಕು. ಕ್ರೀಡೆಯು ದುಶ್ಚಟಗಳಿಂದ ಮುಕ್ತವಾಗಲು ಒಂದು ಉತ್ತಮ ಮಾರ್ಗ. ಯುವ ಸಮುದಾಯದ ಕ್ರೀಡಾಕೂಟ ಹಾಗೂ ಸಾಮಾಜಿಕ ಕಾರ್ಯಗಳಿಗೆ ಜಾಗತಿಕ ಯುವ ಬಂಟರ ಸಂಘದ ಸಹಕಾರ ಸದಾ ಇರುತ್ತದೆ” ಎಂದರು.

​ಇದೇ ವೇಳೆ ಕ್ರಿಕೆಟ್ ಪಂದ್ಯಾಕೂಟಕ್ಕೆ ಸಹಕಾರ ನೀಡಿದ ದಾನಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಉಲ್ಲಾಸ್ ಆರ್. ಶೆಟ್ಟಿ, ಸುಧಾಕರ ಎಸ್. ಪೂಂಜಾ, ಲೋಕಯ್ಯ ಶೆಟ್ಟಿ ಮುಂಚೂರು ಹಾಗೂ ಉದ್ಯಮಿ ಗಿರೀಶ್ ಶೆಟ್ಟಿ ಪೆರ್ಮುದೆ ಮೊದಲಾದವರು ಉಪಸ್ಥಿತರಿದ್ದರು.

​ಯುವ ಘಟಕದ ಸಂಚಾಲಕ ಶಿಶಿರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೂಪ್ ಶೆಟ್ಟಿ ಸ್ವಾಗತಿಸಿ, ಶಮಾ ಶೆಟ್ಟಿ ಪ್ರಾರ್ಥಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

ಯುವ ಸಮುದಾಯ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು: ಬಾಳ ಜಗನ್ನಾಥ ಶೆಟ್ಟಿ

​ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಅವರು, “ಯುವ ಸಮುದಾಯವು ಸಂಘದ ಹಿರಿಯರ ಅಭಿಪ್ರಾಯ ಹಾಗೂ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು. ಯುವ ಸಮಿತಿ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗದೆ, ಸಾಮಾಜಿಕ ಕೆಲಸಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು” ಎಂದು ಕರೆ ನೀಡಿದರು.



Related posts

N.E.S ಸೋಸೈಟಿಯ ಅಭಿನವ ಪಬ್ಲಿಕ್ ಸ್ಕೂಲ್ (CBSE Board) ನ ವಾರ್ಷಿಕ ಕ್ರೀಡಾಕೂಟ

Mumbai News Desk

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮೀರಾಬಾಯಿ ಚಾನು ಸತತ ಮೂರನೇ ಚಿನ್ನದ ಪದಕ ಸಾಧನೆ

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವ

Mumbai News Desk

ಮುಂಬೈ : 18ನೇ ನ್ಯಾಯವಾದಿ ಎ.ಆರ್. ಕುದ್ರೋಳಿ ಸ್ಮಾರಕ ಫುಟ್ಬಾಲ್ ಪಂದ್ಯಾಟ : ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಗೆ ಚಾಂಪಿಯನ್ ಪಟ್ಟ

Mumbai News Desk

ಕಾಂದಿವಲಿ ಪಶ್ಚಿಮದ ರಂಜಿತ್ ಪೂಜಾರಿಗೆ ವಿಶ್ವ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

Mumbai News Desk

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟ ; ಬುಮ್ರಾ, ಶಮಿ ವಾಪಸ್‌.

Mumbai News Desk