October 15, 2026
Mumbai News Kannada
ಪ್ರಕಟಣೆ

ಅಗಸ್ಟ್ 10 : ಯಕ್ಷಾಭ್ಯುದಯ ಬಳಗ ಕೋರ್ಟ್ ನಾಕ, ಥಾಣೆ ಪಶ್ಚಿಮ : ‘ಭಕ್ತ ಚಂದ್ರಹಾಸ’ ಯಕ್ಷಗಾನ ಪ್ರದರ್ಶನ



ಮುಂಬೈ ಮಹಾನಗರ ಹಾಗೂ ಉಪನಗರಗಳಲ್ಲಿರುವ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳು ಸಮಾಜಪರ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸಾಮಾಜಿಕ ಅಭಿವೃದ್ಧಿಯ ಕೈಂಕರ್ಯವನ್ನು ಕೈಗೊಂಡಿವೆ. ಅಂತಹ ಸಂಸ್ಥೆಗಳಲ್ಲಿ ವಿಶಿಷ್ಟ ಹಾಗೂ ವಿಭಿನ್ನವಾದ ಒಂದು ಸಂಸ್ಥೆ ಯಕ್ಷಾಭ್ಯುದಯ ಬಳಗ ಕೋರ್ಟ ನಾಕಾ, ಥಾಣೆ,ಪಶ್ಚಿಮ. ಈ ಸಂಸ್ಥೆಯ ವೈಶಿಷ್ಟವೆಂದರೆ ಅಧ್ಯಕ್ಷ , ಕಾರ್ಯದರ್ಶಿ ಎಂಬ ಯಾವುದೇ ಪದಾಧಿಕಾರಿಗಳಿರದ, ಜಾತಿ – ಮತ ಭೇದವಿಲ್ಲದೆ ಕೇವಲ 10 -15 ಮಂದಿ ಸಮಾನಮನಸ್ಕರ ಬಳಗವಿದು. ಸುಮಾರು 15 ವರ್ಷಗಳ ಹಿಂದೆ ಥಾಣೆ ಪಶ್ಚಿಮ ಕೋರ್ಟ್ ನಾಕದಲ್ಲಿರುವ ಭವಾನಿ ಚೀ ಸ್ಟಾಲ್ ಮಾಲಕರಾದ ಶಂಕರ್ ಆರ್ ಪೂಜಾರಿ ಅವರ ಮುಂದಾಳತ್ವದಲ್ಲಿ, ಮುಂಬೈಯ ಖ್ಯಾತ ಯಕ್ಷಗಾನ ಕಲಾವಿದ, ಸಾಹಿತಿ ಕೊಲ್ಯ ರಾಜು ಶೆಟ್ಟಿ ಅವರ ಸಲಹೆ ಸೂಚನೆಗಳೊಂದಿಗೆ ಸೂಕ್ತ ನಾಮಕರಣಗೊಂಡು ಅಸ್ತಿತ್ವಕ್ಕೆ ಬಂದ ಈ ಸಂಸ್ಥೆಯು ಮುಖ್ಯವಾಗಿ ಯಕ್ಷಗಾನದ ಉಳಿವಿನ ಧ್ಯೇಯವನ್ನು ಹೊಂದಿದೆ.ಯಕ್ಷಗಾನದ ಕಾಳಜಿ ಹೊರತುಪಡಿಸಿ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಈ ಬಳಗ ಅಶಕ್ತರಿಗೆ ವೈದ್ಯಕೀಯ ಮತ್ತು ಶೈಕ್ಷಣಿಕ ನೆರವಿನೊಂದಿಗೆ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದೆ.
ವರ್ಷಪ್ರತಿಯಂತೆ ತಾರೀಕು 10/8/ 25ರ ರವಿವಾರದಂದು ಸಂಜೆ 4 ಗಂಟೆಯಿಂದ ಸಾಂಸ್ಕೃತಿಕ ಕಾಶಿ ನವಿ ಮುಂಬೈಯ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಊರಿನ ಸುಪ್ರಸಿದ್ಧ ಕಲಾವಿದರ ಕೂಡಿವಿಕೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಅವರಿಂದ ‘ ಭಕ್ತ ಚಂದ್ರಹಾಸ’ ಎಂಬ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಯಕ್ಷಗಾನ ಪ್ರದರ್ಶನದ ಮಧ್ಯಂತರದಲ್ಲಿ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿಗಳಾದ ಅಣ್ಣಿ ಸಿ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಅತಿಥಿ ಗಣ್ಯರು ಭಾಗವಹಿಸಲಿರುವ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಉಪ್ಪುಂದ ನಾಗೇಂದ್ರ ರಾವ್ ಹಾಗೂ ಸಮಾಜದ ಗಣ್ಯರನ್ನು ಶಾಲು ಹೊದಿಸಿ, ಹಾರ ಮತ್ತು ಪೇಟ ತೊಡಿಸಿ, ಫಲಪುಷ್ಪ ಮತ್ತು ಸ್ಮರಣಿಕ ನೀಡಿ ಸನ್ಮಾನಿಸಲಾಗುವುದು.
ಯಕ್ಷಗಾನ ಪ್ರದರ್ಶನದ ಮಧ್ಯಂತರದಲ್ಲಿ ಚಾ, ಕಾಫಿ ಮತ್ತು ಕೊನೆಯಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಬಳಗದ ಹಿತೈಷಿಗಳು, ಯಕ್ಷಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಯಕ್ಷದಯ ಬಳಗದ ಪರವಾಗಿ ಶಂಕರ್ ಪೂಜಾರಿ ಹೇರೂರು, ಸಂತೋಷ್ ಆರ್ ಶೆಟ್ಟಿ ಕಲ್ತೋಡು, ಮೋಹನ್ ಆರ್ ದೇವಾಡಿಗ ನಾಯಕನ ಕಟ್ಟೆ, ರಾಘವೇಂದ್ರ ಮೊಗವೀರ ತೀರ್ಥಹಳ್ಳಿ, ಉದಯ ಪಿ ಆಚಾರ್ಯ ಮಣಿಪುರ, ಉಮೇಶ್ ಮೊಗವೀರ ಕುಂಭಾಶಿ, ಸದಾಶಿವ ಶೆಟ್ಟಿ ಮುದ್ರಾಡಿ, ಉರ್ಬನ್ ಜಾನ್ ಅಂದ್ರಾದೆ ಬ್ರಹ್ಮಾವರ, ನಾಗರಾಜ್ ಬಿ ಪೂಜಾರಿ ಹೇರೂರು, ಉದಯ ಎನ್ ಪೂಜಾರಿ ಯೇರುಕೋಣೆ, ರಮೇಶ್ ಎನ್ ಪೂಜಾರಿ ತಾರಿಬೇರು, ದಿನೇಶ್ ಎಂ ಪೂಜಾರಿ ಶಿರ್ತಾಡಿ,ಬಾಬು ಕೋಲಿ ವಿಜಯಪುರ, ರಾಧೇಶ್ಯಾಮ್ ಚೌರಾಸಿಯ, ವಾಸು ಮೊಗವೀರ ಬಿಜೂರು, ಮತ್ತು ಶಂಕರ್ ಎಂ ಪೂಜಾರಿ ಸಾಸ್ತಾನ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

.



Related posts

ವಸಯಿ ತಾಲೂಕು ಮೊಗವೀರ ಸಂಘ : ನಾಳೆ (ಮಾ.16) ಮಹಿಳಾ ದಿನಾಚರಣೆ

Mumbai News Desk

ವಸಯಿ ತಾಲೂಕ ಮೊಗವೀರ ಸಂಘದ ಆಯೋಜನೆಯಲ್ಲಿ, ಜ.21ಕ್ಕೆ ವಾಲಿಬಾಲ್, ತ್ರೋ ಬಾಲ್ ಪಂದ್ಯಾಟ.

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ ಫಲಿಮಾರು ಹೊಸಾಗ್ಮೆ, ಮೇ 1ಕ್ಕೆ 90ನೇ ವಾರ್ಷಿಕ ಮಂಗಲೋತ್ಸವ, ಶ್ರೀ ದೇವರ ಮೂರ್ತಿ ಪ್ರತಿಷ್ಠಾ ದಿನಾಚರಣೆ

Mumbai News Desk

ಜೂ. 21 : ವಸಯಿ ಕರ್ನಾಟಕ ಸಂಘದ ವತಿಯಿಂದ ವಿಶ್ವ ಯೋಗ ದಿನಾಚರಣೆ

Mumbai News Desk

ವಜ್ರ ಮಹೋತ್ಸವದ ಸಂಭ್ರಮದಲ್ಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ,

Mumbai News Desk

ಫೆ. 11 ರಂದು ಜಗಜ್ಯೋತಿ ಕಲಾವೃಂದ (ರಿ.) ಮುಂಬಯಿ 37ನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ.

Mumbai News Desk