
ಮುಂಬಾಯಿ ಮಹಾನಗರದಲ್ಲಿ ನೆಲೆಸಿರುವ ಕಾಪು ಪರಿಸರದ ಮೊಗವೀರ ಬಂಧುಗಳ ಸಂಘಟನೆ, ಮೊಗವೀರ ಮಹಾ ಸಭೆ ಹಾಗೂ ಮಹಿಳಾ ಮಂಡಳಿ ಮುಂಬಯಿ ಶಾಖೆ ಇವರ ಆಶ್ರಯದಲ್ಲಿ ಆಟಿದ ಒಂಜಿ ಕೂಟ ಹಾಗೂ ಅಭಿನಂದನಾ ಕಾರ್ಯಕ್ರಮ 27.07.2025 ರ ರವಿವಾರದಂದು ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಜರಗಿತು.
ಪ್ರಾರಂಭದಲ್ಲಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ತುಳಸಿ ಸದಾನಂದರ ಸ್ವಾಗತ ಭಾಷಣದಿಂದ ಪ್ರಾರಂಭವಾಯಿತು.
ಅವರು ಮುಂಬಯಿ ಮೊಗವೀರ ಮಹಾಸಭೆಯ ಅಧ್ಯಕ್ಷರಾದ ಸತೀಶ್ ಕರ್ಕೇರ, ಮುಖ್ಯ ಅಥಿತಿಗಳಾದ ರತ್ನಾಕರ ಕರ್ಕೇರ ಹಾಗೂ ಸುನಂದಾ ಬಂಗೇರನ್ನು ವೇದಿಕೆಗೆ ಸ್ವಾಗತಿಸಿದರು. ಇವರೊಂದಿಗೆ ಮಹಿಳಾ ಮಂಡಳಿಯ ಹಿರಿಯ ಸದಸ್ಯರಾದ ಯಶೋದ ಕಾಂಚನ್ ಹಾಗೂ ಹಾಗೂ ಶೋಭಾ ಕರ್ಕೆರರು ದೀಪ ಪ್ರಜ್ವಲಿಸಿ ಕಾರ್ಯಕ್ರಮದ ಶುಭಾರಂಭ ಮಾಡಿದರು. ಮಹಿಳಾ ಮಂಡಳಿಯ ಪ್ರಾರ್ಥನೆಗೈದರು.
ಬಳಿಕ ಪ್ರತಿಭಾ ಭಾಸ್ಕರ್ ನೆರೆದ ಸದಸ್ಯರೆಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಕಾರ್ಯಕ್ರಮವನ್ನು ಮಂದುವರಿಸಿದರು.
ಮುಖ್ಯ ಅತಿಥಿಗಳಾದ ರತ್ನಾಕರ್ ಕರ್ಕೇರ ಹಾಗೂ ಅವರ ಕುಟುಂಬದ ಸದಸ್ಯರಾದ ಸುನಂದಾ ಕರ್ಕೇರ, ಮೀನಾಕ್ಷಿ ಕರ್ಕೇರ, ವಿಶಾಲಾಕ್ಷಿ ಕುಮಾರ್ ಹಾಗೂ ಶ ಸುರೇಶ ಕರ್ಕೇರರ ಅಭಿನಂದನಾ ಕಾರ್ಯಕ್ರಮವನ್ನು ಅವರೆಲ್ಲರ ಕಿರು ಪರಿಚಯದೊಂದಿಗೆ ಮುಂಬಾಯಿ ಮಹಾಸಭೆ ಹಾಗೂ ಮಹಿಳಾ ಮಂಡಳಿಯ ಸದಸ್ಯರ ಸಹಯೋಗದಿಂದ ಫಲಪುಷ್ಪ ಕಿರುಕಾಣಿಕೆ ನೀಡಿ ಗೌರವದಿಂದ ಸನ್ಮಾನಿಸಲಾಯಿತು .
ಮುಖ್ಯ ಅಥಿತಿಗಳಾದ ರತ್ನಾಕರ್ ಕರ್ಕೇರರು ಮಾತನಾಡಿ ನಮ್ಮ ಸಮಾಜದ ಏಕತೆ ಮತ್ತು ಉನ್ನತಿಗಾಗಿ ಇಂತಹ ಕಾರ್ಯಕ್ರಮಗಳು ಅಗತ್ಯವಿದೆ. ಇಂದು ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿರುವುದು ತುಂಬಾ ಸಂತೋಷದ ವಿಷಯ ಎಂದರು.
ಅನಂತರದಲ್ಲಿ ಕಾಪು ಮಹಾಸಭೆಯ ಅಧ್ಯಕ್ಷರಾದ ಸತೀಶ್ ಕರ್ಕೇರ, ಉಪಾಧ್ಯಕ್ಷರಾದ ಶ್ರೀಯುತ ನೀಲಾಧರ ಸಾಲ್ಯಾನ್, ಯಶೋಧರ ಕೋಟ್ಯಾನ್, ಪದದಿಕಾರಿಗಳಾದ ವಸಂತ ಕುಂದರ್ , ರಮೇಶ ಕರ್ಕೇರ ,ದೇವದಾಸ ಅಮೀನ್ , ನಿತೇಜ್ ಕರ್ಕೇರ, ಉಮೇಶ್ ಕರ್ಕೇರ, ಮೋಹನ್ ಮೆಂಡನ್ ಹಾಗೂ ಬಾಲಕೃಷ್ಣ ಮೆಂಡನ್ ಅವರನ್ನು ಮುಂಬಾಯಿ ಮಹಾಸಭೆ ಹಾಗೂ ಮಹಿಳಾ ಮಂಡಳಿಯ ಸದಸ್ಯರ ಸಹಯೋಗದಿಂದ ಬಹಳ ಗೌರವದಿಂದ ಫಲಪುಷ್ಪ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು .ಅವರೆಲ್ಲರ ಪರಿಚಯ ಮಹಿಳಾ ಮಂಡಳಿಯ ವಿವಿಧ ಸದಸ್ಯರು ಅವರ ಬಾಲ್ಯ, ಶಿಕ್ಷಣ, ಕುಟುಂಬ, ಉದ್ಯೋಗ ಹಾಗೂ ಸಮಾಜ ಸೇವೆಯ ವಿವರದೊಂದಿಗೆ ನೀಡಿದರು. ಸತೀಶ್ ಕರ್ಕೆರರು ಮಾತನಾಡಿ ಆಟಿದ ಒಂಜಿ ಕೂಟ ಬರೇ ಸಂಭ್ರಮವಾಗದೆ ಅಂದಿನ ಕಾಲದ ನೆನಪು ಗಳಾಗಬೇಕು. ಎಲ್ಲಾ ಮಹಿಳೆಯರು ಒಗ್ಗಟ್ಟಾಗಿ ಸಮಾಜವನ್ನು ಸಮರ್ಥವಾಗಿ ಮುನ್ನಡೆಸಬಹುದು ಎಂದು ಇಂದಿನ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.
ಕಾಪು ಗ್ರಾಮದಲ್ಲಿನ ಹಿರಿಯ ಮಹಿಳಾ ಸದಸ್ಯರನ್ನು ಅವರ ಹಿರಿತನಕ್ಕೆ ಅನುಗುಣವಾಗಿ ಸನ್ಮಾನಿಸಲಾಯಿತು. ಇಂದಿರಾ ಸಾಲ್ಯಾನ್, ಯಶೋದ ಕೋಟ್ಯಾನ್ , ಕುಸುಮ ಕರ್ಕೇರ, ಶೋಭಾ ಕರ್ಕೇರ , ಹಾಗೂ ಕಮಲಾಕ್ಷಿ ಪುತ್ರನ್ ರವರನ್ನು ಕಾಪು ಮಹಿಳಾ ಮಂಡಳಿಯ ವಿವಿದ ಸದಸ್ಯರು ತುಂಬಾ ಪ್ರೀತಿಯಿಂದ ಅಭಿಮಾನದಿಂದ ಫಲಪುಷ್ಪ ಕಿರುಕಾಣಿಕೆ ನೀಡಿ ಸನ್ಮಾನಿಸಿದರು .
ಪ್ರತಿಯೊಂದು ಸನ್ಮಾನಕ್ಕೂ ಮದ್ಯೆ ಮನೋರಂಜನೆಯು ಸಾಗಿದಂತೆ, ಮಹಿಳಾ ಮಂಡಳಿಯ ವಿವಿಧ ಕಲಾವಿದರು ತುಂಬಾ ಮಧುರವಾಗಿ ಹಾಡಿ ಹಾಗೂ ಸಭೆಯಲ್ಲಿನ ಸಭಿಕರನ್ನು ರಂಜಿಸಿದರು.ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಕ್ಕಳು ಮತ್ತು ಮಹಿಳೆಯರಿಂದ ನೃತ್ಯ ವೈವಿಧ್ಯ ಪ್ರದರ್ಶನಗೊಂಡಿತ್ತು. ಮಹಿಳಾ ಮಂಡಳಿಯ ಸದಸ್ಯರು ಬಿಡಿಸಿದ್ದ ರಂಗೋಲಿ ಎಲ್ಲರ ಮನಸೂರೆಗೊಂಡಿತ್ತು. ಭಾಗವಹಿಸಿದ ಎಲ್ಲ ಸದಸ್ಯರುಗಳಿಗೆ ರತ್ನಾಕರ ಕರ್ಕೇರ, ಸತೀಶ್ ಕರ್ಕೇರ ಹಾಗೂ ಸುನಂದಾ ಬಂಗೆರರು ಆಕರ್ಷಕ ಬಹುಮಾನಗಳನ್ನು ನೀಡಿ ಹಾರೈಸಿದರು.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತನು ಮನ ಧನ ದಿಂದ ಸಹಕಾರ ನೀಡಿದ ಮುಂಬಾಯಿ ಮೊಗವೀರ ಮಹಾಸಭೆಯ ಅಧ್ಯಕ್ಷರು , ಉಪಾಧ್ಯಕ್ಷರು, ಹಾಗೂ ಪದಾದಿಕಾರಿಗಳೆಲ್ಲರಿಗೂ,ಮುಖ್ಯ ಅತಿಥಿಗಳಾದ ರತ್ನಾಕರ ಕರ್ಕೇರ ಹಾಗೂ ಅವರ ಕುಟುಂಬದವರೆಲ್ಲರಿಗೂ, ಪ್ರತ್ಕ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಂದ ಚೆಂದವನ್ನು ಹೆಚ್ಚಿಸಿದ ಮಹಿಳಾ ಮಂಡಳಿಯ ಸದಸ್ಯರೆಲ್ಲರಿಗೂ ತುಳಸಿ ಸದಾನಂದ್ ಕೃತಜ್ಞತೆಯೊಂದಿಗೆ ಧನ್ಯವಾದಗಳನ್ನು ಅರ್ಪಿಸಿದರು.ಈ ಸಮಾರಂಭವು ತುಳಸಿ ಸದಾನಂದ್ ರವರ ಮುಂದಾಳತ್ವದಲ್ಲಿ, ಪ್ರಫುಲ್ಲ ರವರ ಸಹಕಾರ ಹಾಗೂ ಪ್ರತಿಮಾ ಭಾಸ್ಕರ್ ರವರ ನಿರೂಪಣೆಯೊಂದಿಗೆ, ಮಹಿಳಾ ಮಂಡಳಿಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಅತ್ಯಂತ ಸುವ್ಯವಸ್ಥಿತವಾಗಿ, ಚೆನ್ನಾಗಿ ಮೂಡಿ ಬಂತು.
ಕೊನೆಯಲ್ಲಿ ಶಮಿತ್ ಸಾಲಿಯಾನ್ ರವರ ಪ್ರಾಯೋಜಕತ್ವದಲ್ಲಿ ಆಟಿಯ ವಿವಿಧ ವ್ಯಂಜನಗಲೊಡನೆ ರುಚಿಕರವಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು .




