32.3 C
Mumbai
June 7, 2026
Mumbai News Kannada
ಮುಂಬಯಿ

“ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜಿನಲ್ಲಿ ಎರಡು ದಿನ ಪಾರಿತೋಷಕ ವಿತರಣಾ ಸಮಾರಂಭ, ಅಧ್ಯಕ್ಷ ಶ್ರೀ ವಿ. ಎನ್ ಹೆಗಡೆ ಅವರಿಂದ ಕಾಲೇಜಿನ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ”





ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜಿನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ವಾರ್ಷಿಕ ಪಾರಿತೋಷಕ ವಿತರಣೆ ಯನ್ನು ಎರಡು ಸಮಾರಂಭಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೊದಲನೆಯ ಸಮಾರಂಭವು ಡಿಸೆಂಬರ್ 22 ರಂದು ಹಮ್ಮಿಕೊಳ್ಳಲಾಗಿತ್ತು. ಅಂದು
ಸಮಾರಂಭದ ಮುಖ್ಯ ಅತಿಥಿಯಾಗಿ ನಿವೃತ್ತ ಪೊಲೀಸ್ ಕಮಿಷನರ್ ಹಾಗು ಚಿಣ್ಣರ ಬಿಂಬದ ರುವಾರಿ ಶ್ರೀ ಪ್ರಕಾಶ ಭಂಡಾರಿ ಅವರನ್ನು ಆಹ್ವಾನಿಸಲಾಗಿತ್ತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಭಂಡಾರಿ ಅವರು ವಿದ್ಯಾರ್ಥಿಗಳು ಸುಸಂಸ್ಕೃತಿಯನ್ನು ಅಳವಡಿಕೊಂಡು ಸಮಾಜ ಸೇವೆಯನ್ನು ಕೈಗೊಳ್ಳಬೇಕೆಂದು, ಸತತ ಪರಿಶ್ರಮ ಮಾಡಿ ಪರೀಕ್ಷೆಗಳನ್ನು ಬರೆದು ವಿದ್ಯಾಲಯಕ್ಕೆ ಹೆಸರು ತರಬೇಕೆಂದು ಕರೆ ಕೊಟ್ಟರು. ನಮ್ಮ ಸನಾತನ ಧರ್ಮ ಸಂಸ್ಕೃತಿ ಮತ್ತು ಜಾಗತಿಕ ಶಾಂತಿಯನ್ನು ಪಸರಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು. ಚಿಮ್ಮರ ಬಿಂಬವು ಮಕ್ಕಳಿಗೆ ಸನಾತನ ಧರ್ಮದ ಸಂಸ್ಕೃತಿ, ಶಿಸ್ತು ಮತ್ತು ಸಂಗೀತ, ನಟನೆ ಹಾಗು ನೃತ್ಯದ ತರಬೇತು ನೀಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುತ್ತಿದೆ ಎಂದು ಹೇಳಿದರು.


ಎರಡನೆಯ ಸಮಾರಂಭವು ಡಿಸೆಂಬರ್ 24 ರಂದು ಹಮ್ಮಿಕೊಳ್ಳಲಾಗಿತ್ತು. ಅಂದಿನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀ ಶಿವಕುಮಾರ ಭಾಗವತ್ ಹಾಗು ಗೌರವ ಅಥಿತಿಯನ್ನಾಗಿ ಡಾ. ವಿಜಯ ಹುಬ್ಬು ಅವರನ್ನು ಆಹ್ವಾನಿಸಲಾಗಿತ್ತು. ಶಿವಕುಮಾರ ಭಾಗವತ್ ಅವರು ಮಾತನಾಡಿ ವಿದ್ಯಾರ್ಥಿಗಳು ಅವಿರತ ಪ್ರಯತ್ನ ದಿಂದ ಅಪಾರ ಯಶಸ್ಸನ್ನು ಪಡೆದು ಉನ್ನತ ಶಿಕ್ಷಣ ಪಡೆದು ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಹೇಳಿದರು. ಇಂದು ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಜಾರಿಗೆ ಬರುತ್ತಿವೆ, ವಿದ್ಯಾರ್ಥಿಗಳು ಕೌಶಲ್ಯ ಪಡೆದು ಒಳ್ಳೆಯ ಯೋಜನೆಯ ಲಾಭ ಪಡೆಯಲು ತಿಳಿ ಹೇಳಿದರು. ವಿದ್ಯಾರ್ಥಿಗಳು ಸ್ವ ಉದ್ಯೋಗ ಪ್ರಾರಂಭಿಸಿ ಹಲವಾರು ಯುವಕರಿಗೆ ಉದ್ಯೋಗ ಕೊಟ್ಟು ದೇಶದ ಅಭಿವೃದ್ಧಿ ಹೆಚ್ಚಿಸಲು ಗಮನಕೊಡಬೇಕೆಂದು ಕರೆಕೊಟ್ಟರು. ಗೌರವ ಅತಿಥಿ ಡಾ. ವಿಜಯ ಹುಬ್ಬು ಮಾತನಾಡಿ ಭಗವದ್ಗೀತೆಯು ವಿದ್ಯಾರ್ಥಿ ಸಮೂಹಕ್ಕೆ ಬಹಳಷ್ಟು ಉಪಯೋಗವಿದೆ ಎಂದು ಹೇಳಿದರು. ಗೀತೆಯಲ್ಲಿ ಜ್ಞಾನ ಹಾಗು ಕರ್ಮಕ್ಕೆ ಬಹಳ ಮಹತ್ವವನ್ನು ಕೊಟ್ಟಿದೆ ಎಂದು ಹೇಳಿದರು, ಭಗವದ್ಗೀತೆ ಕೇವಲ ಒಂದು ಜನಾಂಗಕ್ಕೆ ಸೀಮಿತವಲ್ಲ ಅದನ್ನು ಎಲ್ಲಾ ಧರ್ಮದವರು ಓದಿ ಅರಿಯಬೇಕೆಂದು ಕರೆಯಿತ್ತರು.


ಎರಡು ದಿನದ ಸಮಾರಂಭಕ್ಕೆ ಅಧ್ಯಕ್ಷತೆವಹಿಸಿದ ಜ್ಞಾನ ವಿಕಾಸ ಮಂಡಲದ ಅಧ್ಯಕ್ಷ ಹಾಗು ಕಾಲೇಜ್ ಗವರ್ನಿಂಗ್ ಕೌನ್ಸಿಲ್ ದ ಚೇರ್ಮನ್ ಶ್ರೀ ವಿ ಎನ್ ಹೆಗಡೆ ಅವರು ಮಾತನಾಡಿ ವಿದ್ಯಾರ್ಥಿಗಳು ಸಾಧನೆಗೆ ಇಂದು ನಾವು ಅವರಿಗೆ ಪಾರಿತೋಷಕ ವಿತರಿಸಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮುಂದೆಯೂ ಕೂಡ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪಾರಿತೋಷಕ ಪಡೆಯಲು ಸಲಹೆ ಇತ್ತರು. ಆಟಪಾಠ ಗಳಲ್ಲಿ ಸದಾ ಮುಂದೆ ಬರಬೇಕೆಂದು ತಿಳಿಹೇಳಿದರು. ಕಾರ್ಯಾಧ್ಯಕ್ಷ ಶ್ರೀ ಕೃಷ್ಣಾ ದೇಶಪಾಂಡೆ ಅವರು ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ , ಪ್ರಯತ್ನಿಸಿದರೆ ವಿಜೇತರಾಗುವದು ಖಂಡಿತ ಎಂದು ಹೇಳಿದರು. ಸತತ ಪರಿಶ್ರಮ ವಿದ್ಯಾರ್ಥಿಗಳ ಲಕ್ಷಣವಾಗಬೇಕೆಂದು ತಿಳಿಹೇಳಿದರು. ಮುಖ್ಯ ಅತಿಥಿಗಳಾದ ಶ್ರೀ ಪ್ರಕಾಶ ಭಂಡಾರಿ, ನ್ಯಾಯವಾದಿ ಶ್ರೀ ಶಿವಕುಮಾರ ಭಾಗವತ್, ಗೌರವ ಅತಿಥಿ ಡಾ.ವಿಜಯ ಹಬ್ಬು, ಅಧ್ಯಕ್ಷರಾದ ಶ್ರೀ ವಿ ಎನ್ ಹೆಗಡೆ, ಕಾರ್ಯಾಧ್ಯಕ್ಷ ಶ್ರೀ ಕೃಷ್ಣಾ ದೇಶಪಾಂಡೆ, ಜೊತೆ ಪ್ರಧಾನ ಕಾರ್ಯದರ್ಶಿ ಶ್ರೀ ಜಾನ್ ಪಿ. ಥಾಮಸ್, ಜಿ ವಿ ಏಮ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರಮೇಶ್ ಪಾಟೀಲ, ಶ್ರೀ ಪಾಂಡುರಂಗ ಮಿರ್ಜಿ, ಪ್ರಾಚಾರ್ಯ ಡಾ.ಬಿ ಆರ್ ದೇಶಪಾಂಡೆ ವಿಜೇತ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿದರು. ಪ್ರಾರಂಭದಲ್ಲಿ ಗಣ್ಯರಿಂದ ದೀಪ ಪ್ರಜ್ವಲನೆ ಹಾಗು ವಿದ್ಯಾರ್ಥಿಗಳಿಂದ ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಾಚಾರ್ಯ ಡಾ. ಬಿ. ಆರ್ ದೇಶಪಾಂಡೆ ಕಾಲೇಜಿನ ಕಾರ್ಯಚಟುವಟಿಕೆಗಳ ಹಾಗು ಸಾಧನೆಗಳ ವರದಿಯನ್ನು ಪ್ರಸ್ತುತಪಡಿಸಿದರು.ಜೊತೆ ಪ್ರಧಾನ ಕಾರ್ಯದರ್ಶಿ ಶ್ರೀ ಜಾನ್ ಪಿ ಥಾಮಸ್ ಇವರ ಜಿ ವಿ ಏಮ್ ಆಡಳಿತ ಮಂಡಳಿಯ ವತಿಯಿಂದ ಕಾಲೇಜಿನ ಪ್ರಗತಿಯ ವರದಿಯನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜಿನ ಬೆಳ್ಳಿ ಹಬ್ಬದ ಲಾಂಛನ ವನ್ನು ಅಧ್ಯಕ್ಷ ಶ್ರೀ ವಿ ಎನ್ ಹೆಗಡೆ ಅವರು ಬಿಡುಗಡೆ ಮಾಡಿದರು.
ಕಾಲೇಜಿನ ವಿದ್ಯಾರ್ಥಿ ಕೌನ್ಸಿಲ್ ದ ಸಂಚಾಲಕಿ ಪ್ರೇಮಾ ಬರ್ಧನ್, ವಿದ್ಯಾರ್ಥಿಗಳ ಪ್ರಧಾನ ಕಾರ್ಯದರ್ಶಿ ಕುಮಾರ ಸಂಕರ್ಷಣ ಚೌಧರಿ, ಪ್ರಾಧ್ಯಾಪಕಿ ಉಜ್ವಲಾ ಪವಾರ, ಡಾ. ರಶ್ಮಿ ಲೆಂಗಾಡೆ, ಪ್ರಾಧ್ಯಾಪಕಿ ಜಾಹ್ನವಿ ಕ್ಷೀರಸಾಗರ, ಏಕತಾ ಮಿಶ್ರಾ, ಮುಂತಾದವರು ಕಾರ್ಯಕ್ರಮ ರೂಪುರೇಷಗಳಲ್ಲಿ ಭಾಗಿಯಾಗಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.



Related posts

ಕುಲಾಲ ಸಂಘ ಮುಂಬಯಿ: ಮಂಗಳೂರು ಕುಲಾಲ ಭವನ ಉದ್ಘಾಟನೆ: ಸಿಎಸ್‌ಟಿ-ಮುಲುಂಡ್-ಮಾನ್ಖುರ್ದ್ ಸ್ಥಳೀಯ ಸಮಿತಿಯವರಿಂದ ಆಮಂತ್ರಣ ಪತ್ರಿಕೆ ವಿತರಣಾ ಸಮಾರಂಭ

Mumbai News Desk

ಬಿಲ್ಲವರ ಅಸೋಸಿಯೇಶನ್, ಮುಂಬೈಡೊಂಬಿವಲಿ ಸ್ಥಳೀಯ ಕಚೇರಿ 75ನೇ ಪ್ರಜಾಪ್ರಭುತ್ವ ದಿನಾಚರಣೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ, ಮೀರಾ – ಭಾಯಂದರ್ ಶಾಖೆಯ ಮಹಿಳಾ ವಿಭಾಗ, ಯುವ ವಿಭಾಗದ ಆಶ್ರಯದಲ್ಲಿ ಆಟಿಡೊಂಜಿ ಕೂಟ.

Mumbai News Desk

ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ, ಮುಂಬಯಿ : 42ನೇ ವರ್ಷದ ನವರಾತ್ರಿ ಮಹೋತ್ಸವ.

Mumbai News Desk

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಯತಿವರ್ಯರಾದ   ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗೆ ಧಾಣೆಯಲ್ಲಿ ಗುರುವಂದನೆ.

Mumbai News Desk

ಶ್ರೀ ಜಗದಂಬಾ ಮಂದಿರದ ಯುವ ವಿಭಾಗದ ವತಿಯಿಂದ ಆದಿವಾಸಿ ಶಾಲೆಗೆ ಭೇಟಿ, ಪುಸ್ತಕ, ಇತರ ಸಾಮಗ್ರಿ ವಿತರಣೆ

Mumbai News Desk