August 20, 2026
Mumbai News Kannada
ಪ್ರಕಟಣೆ

ಡೊಂಬಿವಲಿಯ ಶ್ರೀ ಜಗದಂಬ ಮಂದಿರದಲ್ಲಿ ಆಗಸ್ಟ್ 21ರಂದು ಶ್ರೀ ವರಮಹಾಲಕ್ಷ್ಮೀ ಪೂಜಾ ಮಹೋತ್ಸವ





ಡೊಂಬಿವಲಿ: ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಅನುಗ್ರಹದಿಂದ ಭಕ್ತರ ಮನೆ-ಮನಗಳಲ್ಲಿ ಸಿರಿ, ಸಂಪತ್ತು, ಶಾಂತಿ, ನೆಮ್ಮದಿ ಹಾಗೂ ಸಕಲ ಸೌಭಾಗ್ಯಗಳು ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಇಲ್ಲಿನ ಶ್ರೀ ಜಗದಂಬ ಮಂದಿರದಲ್ಲಿ ಆಗಸ್ಟ್ 21ರ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮೀ ಪೂಜಾ ಮಹೋತ್ಸವ ಅತ್ಯಂತ ಭಕ್ತಿ-ಶ್ರದ್ಧೆಯಿಂದ ನೆರವೇರಲಿದೆ.

ಯಕ್ಷ ಕಲಾ ಸಂಸ್ಥೆ (ರಿ.) ಸ್ಥಾಪಿತ ಹಾಗೂ ಶ್ರೀ ಜಗದಂಬ ಚಾರಿಟೇಬಲ್ ಟ್ರಸ್ಟ್ (ರಿ.) ಸಂಯೋಜನೆಯಲ್ಲಿ ಈ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ:

  • ಸಂಜೆ 5.00 ಗಂಟೆಗೆ: ಶ್ರೀ ವರಮಹಾಲಕ್ಷ್ಮೀ ಪೂಜೆ
  • ಸಂಜೆ 6.30 ಗಂಟೆಗೆ: ಭಜನಾ ಕಾರ್ಯಕ್ರಮ
  • ರಾತ್ರಿ 8.30 ಗಂಟೆಗೆ: ಮಹಾಮಂಗಳಾರತಿ
  • ಮಂಗಳಾರತಿಯ ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ಹಾಗೂ ಅನ್ನಸಂತರ್ಪಣೆ ಜರುಗಲಿದೆ.

ಪೂಜೆ ಮತ್ತು ಸಂಪರ್ಕ ಮಾಹಿತಿ: ವರಮಹಾಲಕ್ಷ್ಮೀ ಪೂಜಾ ಸೇವೆ ಅರ್ಪಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಭಕ್ತರು ಕೆಳಗಿನವರನ್ನು ಸಂಪರ್ಕಿಸಬಹುದು:

  • ಪ್ರಧಾನ ಅರ್ಚಕರು: ಶ್ರೀ ಜಗದೀಶ್ ಭಟ್ – 76193 97125
  • ಖಜಾಂಚಿ: ಶ್ರೀ ಹರೀಶ್ ಕೋಟ್ಯಾನ್ – 90046 62484

ಈ ಪಾವನ ಪೂಜಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಮಹಾಲಕ್ಷ್ಮೀ ಜಗದಂಬೆ ಹಾಗೂ ಪರಿವಾರ ದೇವರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಜಗದಂಬ ಮಂದಿರದ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ವಿಭಾಗ ಹಾಗೂ ಯುವ ಸದಸ್ಯರು ಪ್ರಕಟಣೆಯಲ್ಲಿ ಭಕ್ತಿಪೂರ್ವಕವಾಗಿ ವಿನಂತಿಸಿದ್ದಾರೆ.



Related posts

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಉನ್ನತ ಶಿಕ್ಷಣ ಸಂಸ್ಥೆ,ಫೆ. 26. ವಾರ್ಷಿಕೋತ್ಸವ, ಪದವಿ ಪ್ರಧಾನ ಸಮಾರಂಭ

Mumbai News Desk

ಡೊಂಬಿವಲಿ: ಆಗಸ್ಟ್ 16ರಂದು ‘ಆಟಿಡೊಂಜಿ ದಿನ’ ಕಾರ್ಯಕ್ರಮ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ(ರಿ) ಮುಂಬಯಿ : ಫೆ. 16 ರಂದು “ಅರಸಿನ ಕುಂಕುಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ”

Mumbai News Desk

ಬ್ರಹ್ಮಕಲಶ ಸಂಭ್ರಮದಲ್ಲಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ಮೂರ್ತಿ ದೇವಸ್ಥಾನ

Mumbai News Desk

ಹವ್ಯಕ ವೆಲ್ಫೇರ್ ಟ್ರಸ್ಟ್ ನ ಸಂಯೋಜನೆಯಲ್ಲಿ ಜು. 28ಕ್ಕೆ ಯಕ್ಷಗಾನ ಪ್ರದರ್ಶನ

Mumbai News Desk

ಶ್ರೀ ಜಗದಂಬಾ ಮಂದಿರ ಡೊಂಬಿವಲಿ : ಜು. 29ಕ್ಕೆ ನಾಗರ ಪಂಚಮಿ ಉತ್ಸವ

Mumbai News Desk